ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Published on:

ಬೆಂಗಳೂರು: ಪ್ರತಿಷ್ಠಿತ ಗಣಿಗಾರಿಕೆ ಸಂಸ್ಥೆಯಾಗಿರುವ ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೇರ ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಪ್ರಧಾನ ವ್ಯವಸ್ಥಾಪಕರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಇರುವ ತನ್ನ ಗಣಿ/ಘಟಕಗಳಲ್ಲಿ ಕಾರ್ಯ ನಿರ್ವಹಿಸಲು ವಿವಿಧ ವೃಂದದ ಸಹಾಯಕ ವ್ಯವಸ್ಥಾಪಕರು, ಸಹಾಯಕ ಅಭಿಯಂತರು ಹಾಗೂ ಗಣಿ ಸಂಗಾತಿ, ಗಣಿ ಮುಂದಾಳು ಸೇರಿದಂತೆ ಇತರೆ ಒಟ್ಟು 50 ಹುದ್ದೆಗಳಿಗೆ 11 ತಿಂಗಳ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.

ಸಂದರ್ಶನ ಜು.29, 30 ಮತ್ತು 31ರಂದು ನಡೆಯಲಿದ್ದು, ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಕೆಎಸ್‌ಎಂಸಿ ಅಧಿಕೃತ ಜಾಲತಾಣದ https://ksmc.karnataka.gov.in/ಮೂಲಕ ಅರ್ಜಿ ನಮೂನೆ ಪಡೆದುಕೊಂಡು ಭರ್ತಿ ಮಾಡಿ, ಅರ್ಜಿ ನಮೂನೆ ಜೊತೆಗೆ ಸಂಬಂಧಿತ ಎಲ್ಲಾ ಒರಿಜಿನಲ್‌ ದಾಖಲೆಗಳು ಹಾಗೂ ಅವುಗಳ ನಕಲು ಪ್ರತಿಗಳೊಂದಿಗೆ ಗೊತ್ತುಪಡಿಸಿದ ದಿನಾಂಕದಂದು ಬೆಳಗ್ಗೆ 10:30ರೊಳಗೆ ಸಂಸ್ಥೆಯ ಪ್ರಧಾನ ಕಚೇರಿ ವಿಳಾಸ ‘ಟಿಟಿಎಂಸಿ ಎ ಬ್ಲಾಕ್‌, 5ನೇ ಮಹಡಿ ಬಿಎಂಟಿಸಿ ಕಟ್ಟಡ ಕೆ.ಹೆಚ್‌ ರಸ್ತೆ, ಶಾಂತಿನಗರ, ಬೆಂಗಳೂರು-560027’ನಲ್ಲಿ ಹಾಜರಿರಲು ಸೂಚಿಸಿದ್ದಾರೆ.

ಮುಖ್ಯ ದಿನಾಂಕಗಳು:

ಹುದ್ದೆಯ ಹೆಸರುನೇರ ಸಂದರ್ಶನ ನಡೆಯುವ ದಿನ ಮತ್ತು ಸಮಯ
ಸಹಾಯಕ ವ್ಯವಸ್ಥಾಪಕ(ಉದ್ಪಾದನೆ), ಸಹಾಯಕ ವ್ಯವಸ್ಥಾಪಕ(ಲೀಸ಼್ ಎಕ್ಸ್‌ಪ್ಲೋರೆಷನ್ಸ್‌),ಅಭಿಯಂತರ(ಪರಿಸರ), ಸಹಾಯಕ ಅಭಿಯಂತರ(ಮೆಕ್ಯಾನಿಕಲ್), ಸಹಾಯಕ ಅಭಿಯಂತರ(ಎಲೆಕ್ಟ್ರಿಕಲ್, ಸಹಾಯಕ ಅಭಿಯಂತರ(ಸಿವಿಲ್), ಸಹಾಯಕ ವ್ಯವಸ್ಥಾಪಕ(ಸರ್ವೇ) ಮತ್ತು ಕಿರಿಯ ಅಭಿಯಂತರ(ಎಲೆಕ್ಟ್ರಿಕಲ್) ಹುದ್ದೆಗಳಿಗೆಜುಲೈ 29 ಬೆಳಗ್ಗೆ 10:30ಕ್ಕೆ
ಗಣಿ ಮುಂದಾಳು, ಗಣಿ ಸಂಗಾತಿ ಹುದ್ದೆಗಳಿಗೆಜುಲೈ 30 ಬೆಳಗ್ಗೆ 10:30ಕ್ಕೆ
ಬ್ಲಾಸ್ಟರ್, ಸರ್ವೇ ಅಸಿಸ್ಟೆಂಟ್, ಎಲೆಕ್ಟ್ರಿಷಿಯನ್(ಐಟಿಐ) – ಟೆಕ್ನಿಷಿಯನ್ ಗ್ರೇಡ್-II ಮತ್ತು ಬ್ಲಾಸ್ಟಿಂಗ್ ಹೆಲ್ಪರ್ ಹುದ್ದೆಗಳಿಗೆಜುಲೈ 31 ಬೆಳಗ್ಗೆ 10:30ಕ್ಕೆ

ಹುದ್ದೆಗಳ ವಿವರ:

ಹುದ್ದೆಯ ಹೆಸರುಒಟ್ಟು ಹುದ್ದೆಗಳು
ಸಹಾಯಕ ವ್ಯವಸ್ಥಾಪಕ(ಉದ್ಪಾದನೆ)03
ಸಹಾಯಕ ವ್ಯವಸ್ಥಾಪಕ(ಲೀಸ಼್ ಎಕ್ಸ್‌ಪ್ಲೋರೆಷನ್ಸ್‌)02
ಅಭಿಯಂತರ(ಪರಿಸರ)01
ಸಹಾಯಕ ಅಭಿಯಂತರ(ಮೆಕ್ಯಾನಿಕಲ್)03
ಸಹಾಯಕ ಅಭಿಯಂತರ(ಎಲೆಕ್ಟ್ರಿಕಲ್)02
ಸಹಾಯಕ ಅಭಿಯಂತರ(ಸಿವಿಲ್)01
ಸಹಾಯಕ ವ್ಯವಸ್ಥಾಪಕ(ಸರ್ವೇ)01
ಕಿರಿಯ ಅಭಿಯಂತರ(ಎಲೆಕ್ಟ್ರಿಕಲ್)01
ಗಣಿ ಮುಂದಾಳು08
ಗಣಿ ಸಂಗಾತಿ12
ಬ್ಲಾಸ್ಟರ್08
ಸರ್ವೇ ಅಸಿಸ್ಟೆಂಟ್01
ಎಲೆಕ್ಟ್ರಿಷಿಯನ್(ಒಡಿಪಿ) – ಟೆಕ್ನಿಷಿಯನ್ ಗ್ರೇಡ್-II02
ಬ್ಲಾಸ್ಟಿಂಗ್ ಹೆಲ್ಪರ್05
ಒಟ್ಟು ಹುದ್ದೆಗಳು50

ವಿದ್ಯಾರ್ಹತೆ:

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ (KSMCL) ನೇಮಕಾತಿಯ ವಿವಿಧ ಹುದ್ದೆಗಳ ಆಧಾರಿತವಾಗಿ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಹುದ್ದೆಯ ಹೆಸರುಕನಿಷ್ಠ ಶೈಕ್ಷಣಿಕ ಅರ್ಹತೆ
ಸಹಾಯಕ ವ್ಯವಸ್ಥಾಪಕ(ಉತ್ಪಾದನೆ)• ಗಣಿಗಾರಿಕೆ ಇಂಜಿನಿಯರಿಂಗ್‌ನಲ್ಲಿ ಪದವಿ (Degree in Mining Engineering) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
• ದ್ವಿತೀಯ ದರ್ಜೆ ಗಣಿ ವ್ಯವಸ್ಥಾಪಕರ ಸಾಮರ್ಥ್ಯ ಪ್ರಮಾಣಪತ್ರ (II Class Mines Manager Certificate of Competency – R/UR) ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕ(ಲೀಸ್ & ಎಕ್ಸ್‌ಪ್ಲೋರೇಷನ್)• ಜಿಯಾಲಜಿ / ಅಪ್ಲೈಡ್ ಜಿಯಾಲಜಿ / ಅರ್ಥ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ (Master’s Degree in Geology/Applied Geology/Earth Science) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅಭಿಯಂತರ(ಪರಿಸರ)• ಪರಿಸರ ಇಂಜಿನಿಯರಿಂಗ್‌ನಲ್ಲಿ ಪದವಿ (Degree in Environmental Engineering) ಅಥವಾ ಪರಿಸರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ (Master’s Degree in Environmental Science) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಸಹಾಯಕ ಅಭಿಯಂತ(ಮೆಕ್ಯಾನಿಕಲ್)• ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ (Degree in Mechanical Engineering) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಸಹಾಯಕ ಅಭಿಯಂತ(ಎಲೆಕ್ಟ್ರಿಕಲ್)• ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ (Degree in Electrical Engineering) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಸಹಾಯಕ ಅಭಿಯಂತ(ಸಿವಿಲ್)• ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ (Degree in Civil Engineering) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಸಹಾಯಕ ವ್ಯವಸ್ಥಾಪಕ(ಸರ್ವೇ)• ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು, ಅಥವಾ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರಬೇಕು.
• ಗಣಿ ಸರ್ವೇಯರ್ ಸಾಮರ್ಥ್ಯ ಪ್ರಮಾಣಪತ್ರ (Mine Surveyor Certificate of Competency – R/UR) ಹೊಂದಿರಬೇಕು.
ಕಿರಿಯ ಅಭಿಯಂತರ(ಎಲೆಕ್ಟ್ರಿಕಲ್)• ಸರ್ಕಾರದಿಂದ ಮಾನ್ಯತೆ ಪಡೆದ ತಾಂತ್ರಿಕ ಸಂಸ್ಥೆಯಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (Diploma in Electrical Engineering) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಗಣಿ ಮುಂದಾಳು• ಸರ್ಕಾರದಿಂದ ಮಾನ್ಯತೆ ಪಡೆದ ತಾಂತ್ರಿಕ ಮಂಡಳಿಯಿಂದ ಗಣಿಗಾರಿಕೆ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (Diploma in Mining Engineering) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
• ಮೈನ್ ಫೋರ್‌ಮನ್ ಸಾಮರ್ಥ್ಯ ಪ್ರಮಾಣಪತ್ರ (Mine Foreman Certificate of Competency – R/UR) ಹೊಂದಿರಬೇಕು.
ಗಣಿ ಸಂಗಾತಿ• ಕನ್ನಡವನ್ನು ಒಂದು ಅಧ್ಯಯನ ವಿಷಯವಾಗಿ ಹೊಂದಿರುವ ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ (SSLC) ತೇರ್ಗಡೆಯಾಗಿರಬೇಕು.
• ಮೈನ್ ಮೇಟ್ ಸಾಮರ್ಥ್ಯ ಪ್ರಮಾಣಪತ್ರ (Mine Mate Certificate of Competency – R/UR) ಹೊಂದಿರಬೇಕು.
ಬ್ಲಾಸ್ಟರ್• ಸಾಕ್ಷರರಾಗಿರಬೇಕು (Literate).
• ಬ್ಲಾಸ್ಟರ್ ಸಾಮರ್ಥ್ಯ ಪ್ರಮಾಣಪತ್ರ (Blaster Certificate of Competency – R/UR) ಹೊಂದಿರಬೇಕು.
ಸರ್ವೇ ಅಸಿಸ್ಟೆಂಟ್• ಐಟಿಐ ಮೆಕ್ಯಾನಿಕಲ್ ಪ್ರಮಾಣಪತ್ರ (ITI Mechanical Certificate) ಅಥವಾ ಸರ್ವೇಯಿಂಗ್‌ನಲ್ಲಿ ಅನುಭವದೊಂದಿಗೆ ಪಿಯುಸಿ (PUC) ಹೊಂದಿರಬೇಕು.
ಎಲೆಕ್ಟ್ರಿಷಿಯನ್(ಐಟಿಐ)(ಟೆಕ್ನಿಷಿಯನ್ ಗ್ರೇಡ್ – II)• ಎಲೆಕ್ಟ್ರಿಕಲ್‌ನಲ್ಲಿ ಐಟಿಐ ಪ್ರಮಾಣಪತ್ರ (ITI Certificate in Electrical) ಹೊಂದಿರಬೇಕು.
ಬ್ಲಾಸ್ಟಿಂಗ್ ಹೆಲ್ಪರ್• ಕನ್ನಡವನ್ನು ಒಂದು ಅಧ್ಯಯನ ವಿಷಯವಾಗಿ ಹೊಂದಿರುವ ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯಿಂದ 7ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
• ಗಣಿ/ಕ್ವಾರಿಯಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರಬೇಕು.
• ದೈಹಿಕ ಸಾಮರ್ಥ್ಯ ಪ್ರಮಾಣಪತ್ರ (Physical Fitness Certificate) ಹೊಂದಿರಬೇಕು.

ಗಮನಿಸಿ: ಹುದ್ದೆಗಳಿಗೆ ಅನುಗುಣವಾಗಿ ಆಯಾ ಕ್ಷೇತ್ರದಲ್ಲಿ ನಿಗದಿತ ವರ್ಷಗಳ ಅನುಭವ ಹೊಂದಿರುವುದು ಕಡ್ಡಾಯ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಓದಿ.

ವಯಸ್ಸಿನ ಮಿತಿ:

ಅಭ್ಯರ್ಥಿಗಳು ವಯೋಮಿತಿಯು ಗರಿಷ್ಠ 40 ವರ್ಷಕ್ಕಿಂತ ಕಡಿಮೆ ಇರಬೇಕು.

ಆಯ್ಕೆ ಪ್ರಕ್ರಿಯೆ:

  • ನೇರ ಸಂದರ್ಶನ
  • ದಾಖಲೆ ಪರಿಶೀಲನೆ

ಹುದ್ದೆಗಳ ಆಧಾರಿತವಾಗಿ ಸಂಬಳದ ವಿವರ:

ಹುದ್ದೆಯ ಹೆಸರುಮಾಸಿಕ ವೇತನ(ರೂ.)
ಸಹಾಯಕ ವ್ಯವಸ್ಥಾಪಕ(ಉದ್ಪಾದನೆ)50,000
ಸಹಾಯಕ ವ್ಯವಸ್ಥಾಪಕ(ಲೀಸ಼್ ಎಕ್ಸ್‌ಪ್ಲೋರೆಷನ್ಸ್‌)47,000
ಅಭಿಯಂತರ(ಪರಿಸರ)45,000
ಸಹಾಯಕ ಅಭಿಯಂತರ(ಮೆಕ್ಯಾನಿಕಲ್)45,000
ಸಹಾಯಕ ಅಭಿಯಂತರ(ಎಲೆಕ್ಟ್ರಿಕಲ್)45,000
ಸಹಾಯಕ ಅಭಿಯಂತರ(ಸಿವಿಲ್)45,000
ಸಹಾಯಕ ವ್ಯವಸ್ಥಾಪಕ(ಸರ್ವೇ)40,000
ಕಿರಿಯ ಅಭಿಯಂತರ(ಎಲೆಕ್ಟ್ರಿಕಲ್)28,000
ಗಣಿ ಮುಂದಾಳು28,000
ಗಣಿ ಸಂಗಾತಿ25,000
ಬ್ಲಾಸ್ಟರ್22,000
ಸರ್ವೇ ಅಸಿಸ್ಟೆಂಟ್21,400
ಎಲೆಕ್ಟ್ರಿಷಿಯನ್(ಒಡಿಪಿ) – ಟೆಕ್ನಿಷಿಯನ್ ಗ್ರೇಡ್-II21,000
ಬ್ಲಾಸ್ಟಿಂಗ್ ಹೆಲ್ಪರ್18,350

Important Direct Links:

Official Notification PDFDownload
Application Form PDFDownload
Official Websiteksmc.karnataka.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

2 thoughts on “ಕರ್ನಾಟಕ ಸ್ಟೇಟ್ ಮಿನರಲ್ಸ್‌ ಕಾರ್ಪೊರೇಷನ್‌ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ”

Leave a Comment