ಶಿವಮೊಗ್ಗ: ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕ ಅಧೀನದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ(56) ಮತ್ತು ಆದೇಶ ಜಾರಿಕಾರ(06) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟವಾಗಿದೆ.
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಕನಿಷ್ಠ 18 ವಯೋಮಾನದ ಅಭ್ಯರ್ಥಿಗಳು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ https://shivamogga.dcourts.gov.in/notice-category/recruitments/ದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಆ.24ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 23
- ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ – ಆಗಸ್ಟ್ 24
ಶೈಕ್ಷಣಿಕ ಅರ್ಹತೆ:
ಜವಾನ(ಪ್ಯೂನ್), ಆದೇಶ ಜಾರಿಕಾರ ಹುದ್ದೆಗೆ; ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನಡೆಸುವ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯೋಮಿತಿ:
24-08-2026ರಂತೆ;
ಕನಿಷ್ಠ 18 ವರ್ಷ
ಗರಿಷ್ಠ ವಯೋಮಿತಿ;
ಸಾಮಾನ್ಯ ವರ್ಗ 35+5* = 40 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗ 38+5*=43 ವರ್ಷ
ಪ.ಜಾತಿ/ಪ.ಪಂಗಡ/ಪ್ರವರ್ಗ-1 40+5*=45 ವರ್ಷ
*ಸರ್ಕಾರದ ಆದೇಶದಂತೆ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿ ಕ್ರಮವಾಗಿ 5 ವರ್ಷಗಳ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಜೊತೆಗೆ ಸರ್ಕಾರದ ಸಾಮಾನ್ಯ ನೇಮಕಾತಿ ನಿಯಮಾವಳಿ ಪ್ರಕಾರ ಆಯಾ ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗಲಿದೆ.
ನೇಮಕ ಪ್ರಕ್ರಿಯೆ:
- ಅರ್ಹತಾ ಪರೀಕ್ಷೆ
- ಸಂದರ್ಶನ
ಸಂಬಳ:
ವೇತನ ಶ್ರೇಣಿ; ರೂ.27000-650-29600-725-32500-800-35700-900-39300-1000-43300-1125-46675/-
ಅರ್ಜಿ ಶುಲ್ಕ:
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.200/-
ಪ್ರವರ್ಗ-2ಎ, 2ಬಿ, 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ ರೂ.100/-
ಪ.ಜಾತಿ, ಪ.ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಹೇಗೆ ಅರ್ಜಿ ಸಲ್ಲಿಸುವುದು.?
ಹಂತ-1 ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಜಾಲತಾಣ(https://shivamogga.dcourts.gov.in/)ದ “Recruitment/ನೇಮಕಾತಿ” ವಿಭಾಗದಡಿ ನೀಡಲಾದ “Regarding the filling of 56 vacant Peon posts in the Shivamogga District Court unit through direct recruitment.” ಅಥವಾ “Regarding the filling of 06 vacant Process Server posts in the Shivamogga District Court unit through direct recruitment.” ಎಂಬ ಶೀರ್ಷಿಕೆಗಳ ಮುಂದೆ ನೀಡಲಾದ “Description/ವಿವರಣೆ” ಕಾಲಂನಡಿ ನೀಡಲಾದ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ಕಿಸಿ, ಅರ್ಜಿ ನಮೂನೆ ತುಂಬಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Official Notification(Peon) PDF | Download |
| Official Notification(Process Server) PDF | Download |
| Peon Online Application Form Link | Apply Now |
| Process Server Online Application Form Link | Apply Now |
| Official Website | shivamogga.dcourts.gov.in |
| More Updates | KarnatakaHelp.in |
ನಮಸ್ತೆ ನಾನು, ಸಂಜು ಮದಭಾವಿ
ಬಿಜಾಪುರ್ ಟು ಸಿಂದಗಿ ರೋಡ್ ಕಗ್ಗೊಡ
ನಮಸ್ತೆ ನಾನು, ಸಂಜು ಮದಭಾವಿ
ನಂದು, ಡಿಗ್ರಿ ಕಂಪ್ಲೀಟ್ ಆಗಿದೆ
Age, 23
Jsjhdj
Puc complete
Namasthe nanu sangeetha 1puc