ರೈಲ್ವೆ ನೇಮಕಾತಿ ಮಂಡಳಿಯು CEN 04/2024ರ ಅಡಿಯಲ್ಲಿ ಅಧಿಸೂಚಿಸಲಾದ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಕಂಪ್ಯೂಟರ್ ಆಧಾರಿತ(CBT) ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 11ರಂದು ಬಿಡುಗಡೆ ಮಾಡಿದೆ.
ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಒಟ್ಟು 1376 ಹುದ್ದೆಗಳ ನೇಮಕಾತಿ ಸಂಬಂಧ ಏ.28 ರಿಂದ 30ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಸದರಿ ಪರೀಕ್ಷೆಯ ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಅನ್ನು ಮಂಡಳಿಯ ಅಧಿಕೃತ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281 ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವತುಗಳನ್ನು ಬಳಸಿಕೊಂಡು ಪರಿಶೀಲಿಸಬಹುದು.
ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ದಾಖಲೆ ಪರಿಶೀಲನೆ (DV) ಮತ್ತು ವೈದ್ಯಕೀಯ ಪರೀಕ್ಷೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ.
RRB (ಪ್ಯಾರಾ ಮೆಡಿಕಲ್) CBT ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಪರಿಶೀಲಿಸುವ ವಿಧಾನ;
• ಆರ್ ಆರ್ ಬಿ ಅಧಿಕೃತ ವೆಬ್ಸೈಟ್ https://indianrailways.gov.in/railwayboard/view_section.jsp?lang=0&id=0,7,1281 ಗೆ ಭೇಟಿ ನೀಡಿ.
• ನೀವು ಅರ್ಜಿ ಸಲ್ಲಿಸಿದ ರಾಜ್ಯ (ನಿಮ್ಮ ಸಂಬಂಧಿತ)RRB ಅಧಿಕೃತ ವೆಬ್ಸೈಟ್ ಅನ್ನು ಆಯ್ಕೆ ಮಾಡಿ.
• ಇತ್ತೀಚಿನ ಸೂಚನೆಗಳು ವಿಭಾಗದಲ್ಲಿ ನೀಡಲಾಗಿರುವ RRB (ಪ್ಯಾರಾ ಮೆಡಿಕಲ್) CBT ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಅನ್ನು ಪರಿಶೀಲಿಸಿ.
ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಿಗೆ ಸೂಚನೆ.
• ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಆಯ್ಕೆಯಾದ ಅಭ್ಯರ್ಥಿಗಳು CEN ಮತ್ತು ಇ-ಕರೆ ಪತ್ರದಲ್ಲಿ ಉಲ್ಲೇಖಿಸಲಾದ ಎಲ್ಲಾ ಮೂಲ ದಾಖಲೆಗಳೊಂದಿಗೆ A4 ಗಾತ್ರದ ಎರಡು ಸೆಟ್ಗಳ ಸ್ವಯಂ-ದೃಢೀಕೃತ ಛಾಯಾಚಿತ್ರಗಳನ್ನು ಸಲ್ಲಿಸಬೇಕಾಗುತ್ತದೆ.
• ಅಭ್ಯರ್ಥಿಗಳು ನಿಗದಿತ ವೈದ್ಯಕೀಯ ಶುಲ್ಕ 24ರೂ. ಗಳನ್ನು ಮಾತ್ರ ಪಾವತಿಸಬೇಕು.
• ದಾಖಲೆ ಪರಿಶೀಲನೆ ಪೂರ್ಣಗೊಂಡ ನಂತರ ಅಭ್ಯರ್ಥಿಗಳನ್ನು ಮರುದಿನ RRB ಗಳ ವ್ಯಾಪ್ತಿಯಲ್ಲಿ ನಾಮನಿರ್ದೇಶಿತ ರೈಲ್ವೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು 3 ರಿಂದ 4 ದಿನಗಳಿಗಿಂತ ಹೆಚ್ಚು ಕಾಲ DV ಮತ್ತು ವೈದ್ಯಕೀಯ ಪರೀಕ್ಷೆಗೆ ಸಿದ್ಧರಾಗಿ ಬರಬೇಕು.