ರೈಲ್ವೆ ನೇಮಕಾತಿ ಮಂಡಳಿಯು (RRC), ಪೂರ್ವ ರೈಲ್ವೆ (ER) ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳುಪೂರ್ವ ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರೈಲ್ವೆ ನೇಮಕಾತಿಯು ತನ್ನ ಪೂರ್ವ ರೈಲ್ವೆ ವಿಭಾಗದಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿಯಲ್ಲಿ ಒಟ್ಟು ವಿವಿಧ ವಿಭಾಗಕ್ಕೆ ಒಟ್ಟು 3,115 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. 10ನೇ ತರಗತಿ ಜೊತೆಗೆ ವಿವಿಧ ವಿಭಾಗದಲ್ಲಿ ITI ಪೂರ್ಣಗೊಳ್ಳಿಸಿರುವ ಅಭ್ಯರ್ಥಿಗಳು ಈ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಈ ಅಪ್ರೆಂಟಿಸ್ ತರಬೇತಿಯನ್ನು ಪಡೆದು ಭವಿಷ್ಯದಲ್ಲಿ ರೈಲ್ವೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ಗಳಿಸಿರುವ ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಿ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಪೆಂಡ್ ನೀಡಲಾಗುತ್ತದೆ.
ಈ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RRC ನ ಅಧಿಕೃತ ವೆಬ್ ಸೈಟ್ rrcer.org ಭೇಟಿ ನೀಡುವ ಮೂಲಕ ಅಕ್ಟೋಬರ್ 23 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ RRC ER Apprentice Recruitment 2024 ಕುರಿತು ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.
Shortview of RRC ER Apprentice Notification 2024
Organization Name – Eastern Railway Post Name – Apprentices Total Vacancy – 3115 Application Process: Online Job Location – All Over India
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 24 ಸೆಪ್ಟೆಂಬರ್ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23 ಅಕ್ಟೋಬರ್ 2024
ವಿದ್ಯಾರ್ಹತೆ:
10ನೇ ತರಗತಿ ಜೊತೆಗೆ ವಿವಿಧ ವಿಭಾಗದಲ್ಲಿ ITI ನಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಧಿಕೃತ ಅಧಿಸೂಚನೆಯ ಪ್ರಾಕರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ 15 ರಿಂದ ಗರಿಷ್ಟ 24 ವರ್ಷಗಳ ಒಳಗೆ ಇರಬೇಕು.
ಆಯ್ಕೆ ಪ್ರಕ್ರಿಯೆ:
• 10ನೇ ತರಗತಿ ಮತ್ತು ಐಟಿಐ ಅಂಕಗಳ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. • ಡಾಕ್ಯುಮೆಂಟ್ ಪರಿಶೀಲನೆ • ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
Gen/ OBC/ EWS ಅಭ್ಯರ್ಥಿಗಳಿಗೆ – ₹100/-
SC/ ST/ PWD/ ಸ್ತ್ರೀ ಅಭ್ಯರ್ಥಿಗಳಿಗೆ – ₹00
ಪಾವತಿ ವಿಧಾನ – ಆನ್ ಲೈನ್ ಮೂಲಕ
How to Apply for RRC ER Apprentice Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ…?
ಮೊದಲಿಗೆ RRC ಅಧಿಕೃತ ವೆಬ್ ಸೈಟ್ https://rrcer.org/notice_board.html ನೀಡಿ.
ಮುಖಪುಟದಲ್ಲಿ ಕಾಣುವ “NOTICE” ವಿಭಾಗವನ್ನು ಆಯ್ಕೆ ಮಾಡಿ.
ನಂತರ ಅಲ್ಲಿ ಕಾಣುವ ಪ್ರಕಟಣೆಗಳಲ್ಲಿ Notification for Engagement of Act Apprentices for Training Slot in Eastern Railway Units, Notice No. RRC/ER/Act Apprentices/2024-25 ಹುಡುಕಿ ಮತ್ತು ಲಿಂಕ್ ಕ್ಲಿಕ್ ಮಾಡಿ.
ಲಾಗಿನ್ ವಿವರಗಳನ್ನು ಭರ್ತಿ ಮಾಡಿ ಮತ್ತು ಲಾಗಿನ್ ಮಾಡಿ.
ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ