ಈಶಾನ್ಯ ರೈಲ್ವೆಯಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 1104 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ರೈಲ್ವೆ ನೇಮಕಾತಿ ಕೋಶ(RRC) ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ವಿವಿಧ ಕಾರ್ಯಾಗಾರ/ಘಟಕಗಳಿಗೆ ಫಿಟ್ಟರ್, ಮೆಕಾನಿಕ್, ವೆಲ್ಡರ್, ಎಲೆಕ್ಟ್ರಿಷಿಯನ್,ಟರ್ನರ್ ಹಾಗೂ ಪೇಂಟರ್ ಸೇರಿದಂತೆ ಇತರೆ ಗೊತ್ತುಪಡಿಸಿದ ಟ್ರೇಡ್ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಾಗುತ್ತದೆ. ಅ.16 ರಿಂದ ನ.15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈಶಾನ್ಯ ರೈಲ್ವೆಯ ಅಧಿಕೃತ ಜಾಲತಾಣ https://apprentice.rrcner.net/next_page.phpಕ್ಕೆ ಭೇಟಿ ನೀಡಿ.
ಅರ್ಜಿ ಸಲ್ಲಿಸಲು ಮತ್ತು ಅರ್ಜಿ ಶುಲ್ಕ ಕೊನೆಯ ದಿನಾಂಕ – ನವೆಂಬರ್ 15, 2025
ಶೈಕ್ಷಣಿಕ ಅರ್ಹತೆ:
ಈಶಾನ್ಯ ರೈಲ್ವೆ ಅಧಿಕೃತ ಅಧಿಸೂಚನೆಯ ಪ್ರಕಾರ ಸದರಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಪ್ರಮಾಣಪತ್ರ ಹೊಂದಿರಬೇಕು.
ವಯೋಮಿತಿ:
16-10-2025 ರಂತೆ;
ಕನಿಷ್ಠ ಮಿತಿ – 15 ವರ್ಷಗಳು ಗರಿಷ್ಠ ಮಿತಿ – 24 ವರ್ಷಗಳು
ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷಗಳು, ಓಬಿಸಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 3 ವರ್ಷಗಳು ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷಗಳು ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ:
ಅಭ್ಯರ್ಥಿಗಳ ಕಿರುಪಟ್ಟಿ (ಗಳಿಸಿದ ಅಂಕಗಳ ಆಧಾರ)
ದಾಖಲೆ ಪರಿಶೀಲನೆ
ಅಂತಿಮ ಆಯ್ಕೆ
ಸ್ಟೈಫಂಡ್:
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಸಮಯದಲ್ಲಿ ರೈಲ್ವೆ ಮಂಡಳಿಯು ಕಾಲಕಾಲಕ್ಕೆ ಹೊರಡಿಸುವ ಚಾಲ್ತಿಯಲ್ಲಿರುವ ನಿಯಮಗಳು ಮತ್ತು ನಿರ್ದೇಶನಗಳ ಪ್ರಕಾರ ಸ್ಟೈಫಂಡ್ ನೀಡಲಾಗುತ್ತದೆ.
ಅರ್ಜಿ ಶುಲ್ಕ:
• ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ.
• ಇತರೆ ಎಲ್ಲಾ ಅಭ್ಯರ್ಥಿಗಳಿಗೆ – 100ರೂ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ಕೆಳಗಿನಂತಿದೆ
• ಈಶಾನ್ಯ ರೈಲ್ವೆಯ ಅರ್ಜಿ ನಮೂನೆಯ ಅಧಿಕೃತ ಜಾಲತಾಣ https://apprentice.rrcner.net/next_page.php ಕ್ಕೆ ಭೇಟಿ ನೀಡಿ.
Rrc Ner Apprentice Online Application 2025
• ಮುಂದೆ ಅರ್ಜಿ ಸಲ್ಲಿಸಲು ನೋಂದಣಿ ಅಥವಾ ಲಾಗಿನ್ ಆಗಿರಿ.
• ಬಳಿಕ ನೀವು ಅರ್ಜಿ ಸಲ್ಲಿಸ ಬಯಸುವ ಟ್ರೇಡ್ ಅನ್ನು ಆಯ್ಕೆ ಮಾಡಿ.
• ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಿ ಮುಂದುವರೆಯಿರಿ.
• ನಂತರ ಭಾವಚಿತ್ರ, ಸಹಿ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣವನ್ನು ತೆಗೆದುಕೊಳ್ಳಿ.
Job