ಪಶ್ಚಿಮ ರೈಲ್ವೆ(WR)ಯಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿ 5349 ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲಿದ್ದು, ಅರ್ಹರ ಆಯ್ಕೆಗಾಗಿ ರೈಲ್ವೆ ನೇಮಕಾತಿ ಕೋಶ(RRC)ವು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಮಾ.23 ಕೊನೆಯ ದಿನವಾಗಿದೆ.
ವಿವಿಧ ವಿಭಾಗಗಳು/ಘಟಕಗಳು/ಕಾರ್ಯಾಗಾರಗಳ ಎಲೆಕ್ಟ್ರಿಷಿಯನ್, ಫಿಟ್ಟರ್, ವೆಲ್ಡರ್, ವೈರ್ಮ್ಯಾನ್, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಸಹಾಯಕ ಹಾಗೂ ಮೆಕ್ಯಾನಿಕ್ ಟ್ರೇಡ್ಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು, ಒಂದು ವರ್ಷದ ಅವಧಿಯವರೆಗೆ ತರಬೇತಿ ಒದಗಿಸಲಿದೆ. ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಹೊಂದಿರುವವರು ಆರ್ಆರ್ಸಿ ಡಬ್ಲ್ಯೂಆರ್ ಅಧಿಕೃತ ಜಾಲತಾಣ https://www.rrc-wr.com/ ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮಾರ್ಚ್ 23, 2026
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50% ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ NCVT ಯಿಂದ ನೀಡಲಾದ ಸಂಬಂಧಿತ ಟ್ರೇಡ್ ನಲ್ಲಿ ITI ಉತ್ತೀರ್ಣರಾದ ಪ್ರಮಾಣಪತ್ರವನ್ನು ಹೊಂದಿರಬೇಕು.
ವಯೋಮಿತಿ:
23-03-2026 ರಂತೆ ;
ಕನಿಷ್ಠ ಮಿತಿ – 15 ವರ್ಷಗಳು ಗರಿಷ್ಠ ಮಿತಿ – 24 ವರ್ಷಗಳು
ವಯೋಮಿತಿ ಸಡಿಲಿಕೆ: ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – 10 ವರ್ಷಗಳು.
ಆಯ್ಕೆ ಪ್ರಕ್ರಿಯೆ:
ಅರ್ಹ ಅಭ್ಯರ್ಥಿಗಳ ಮೆರಿಟ್ ಪಟ್ಟಿ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅಂತಿಮ ಆಯ್ಕೆ
ಶಿಷ್ಯವೇತನ:
ಅಪ್ರೆಂಟಿಸ್ ಕಾಯ್ದೆಯ ನಿಯಮಗಳ ಪ್ರಕಾರ ಚಾಲ್ತಿಯಲ್ಲಿರುವ ದರದಲ್ಲಿ ಶಿಷ್ಯವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – ₹100 ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ..?
• RRC WR ಅಧಿಕೃತ ಜಾಲತಾಣ https://www.rrc-wr.com/ಕ್ಕೆ ಭೇಟಿ ನೀಡಿ.
• ನಂತರ “2025-26ನೇ ಸಾಲಿನ ಅಪ್ರೆಂಟಿಸ್ಗಳ ನೇಮಕಾತಿಗೆ ಅಧಿಸೂಚನೆ” – ಶೀರ್ಷಿಕೆಯ ಕೆಳಗೆ ನೀಡಲಾಗಿರುವ “ಆನ್ಲೈನ್ ಅರ್ಜಿಗಾಗಿ ಇಲ್ಲಿ ಕ್ಲಿಕ್ ಮಾಡಿ” ಲಿಂಕ್ ಮೇಲೆ ಟ್ಯಾಪ್ ಮಾಡಿ.
• ನೋಂದಣಿ ಐಡಿ, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ, ನೋಂದಾಯಿಸಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಮೂಲ ಮಾಹಿತಿಗಳು, ಭಾವಚಿತ್ರ, ಸಹಿ, ಶೈಕ್ಷಣಿಕ ವಿವರ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.