ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI)ನಲ್ಲಿ ಖಾಲಿ ಇರುವ 122 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ.
ವಿವಿಧ ವೃಂದಗಳಲ್ಲಿ ವ್ಯವಸ್ಥಾಪಕ ಹಾಗೂ ಉಪ ವ್ಯವಸ್ಥಾಪಕ ಸ್ಪೆಷಲಿಸ್ಟ್ ಕೇಡರ್ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿಯಮಿತ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಕೆಲಸ ನಿರ್ವಹಿಸಲು ಆಸಕ್ತಿ ಹೊಂದಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು SBI ನ ಅಧಿಕೃತ ಜಾಲತಾಣ https://sbi.bank.in/web/careers/current-openingsಕ್ಕೆ ಭೇಟಿ ನೀಡಿ. ಅಕ್ಟೋಬರ್ 2 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 11, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 02, 2025
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ ವ್ಯವಸ್ಥಾಪಕ (ಕ್ರೆಡಿಟ್ ವಿಶ್ಲೇಷಕ) (63 ಹುದ್ದೆಗಳು) – ಯಾವುದೇ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿರಬೇಕು ಮತ್ತು MBA (ಹಣಕಾಸು)/PGDBA/PGDBM/MMS (ಹಣಕಾಸು)/CA/CFA/ICWA ಪೂರ್ಣಗೊಳಿಸಿರಬೇಕು.
✓ ವ್ಯವಸ್ಥಾಪಕರು (ಉತ್ಪನ್ನಗಳು – ಡಿಜಿಟಲ್ ಪ್ಲಾಟ್ಫಾರ್ಮ್ಗಳು) (34 ಹುದ್ದೆಗಳು) – ಅಭ್ಯರ್ಥಿಗಳು ಐಟಿ/ ಕಂಪ್ಯೂಟರ್ಗಳು/ ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಇನ್ಸ್ಟ್ರುಮೆಂಟೇಷನ್/ ಎಲೆಕ್ಟ್ರಾನಿಕ್ಸ್ & ವಿಷಯದಲ್ಲಿ ಬಿ.ಇ./ ಬಿ. ಟೆಕ್, ದೂರಸಂಪರ್ಕ ಅಥವಾ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂಸಿಎ) ಪೂರ್ಣಗೊಳಿಸಿರಬೇಕು.
✓ ಉಪ ವ್ಯವಸ್ಥಾಪಕರು (ಉತ್ಪನ್ನಗಳು – ಡಿಜಿಟಲ್ ವೇದಿಕೆಗಳು) (25 ಹುದ್ದೆಗಳು) – ಅಭ್ಯರ್ಥಿಗಳು ಐಟಿ/ ಕಂಪ್ಯೂಟರ್ಗಳು/ ಕಂಪ್ಯೂಟರ್ ಸೈನ್ಸ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್/ ಇನ್ಸ್ಟ್ರುಮೆಂಟೇಷನ್/ ಎಲೆಕ್ಟ್ರಾನಿಕ್ಸ್ & ನಲ್ಲಿ ಬಿ.ಇ./ ಬಿ. ಟೆಕ್, ದೂರಸಂಪರ್ಕ ಅಥವಾ ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್ (ಎಂಸಿಎ) ಪೂರ್ಣಗೊಳಿಸಿರಬೇಕು.
ವಯೋಮಿತಿ:
31-08-2025 ರಂತೆ;
✓ ವ್ಯವಸ್ಥಾಪಕ (ಉತ್ಪನ್ನಗಳು – ಡಿಜಿಟಲ್ ಪ್ಲಾಟ್ಫಾರ್ಮ್ಗಳು)ಹುದ್ದೆಗೆ – ಕನಿಷ್ಠ ಮಿತಿ – 28 ವರ್ಷಗಳು, ಗರಿಷ್ಠ ಮಿತಿ – 35 ವರ್ಷಗಳು
✓ ವ್ಯವಸ್ಥಾಪಕ (ಕ್ರೆಡಿಟ್ ವಿಶ್ಲೇಷಕ) ಹುದ್ದೆಗೆ– ಕನಿಷ್ಠ ಮಿತಿ – 25 ವರ್ಷಗಳು, ಗರಿಷ್ಠ ಮಿತಿ – 35 ವರ್ಷಗಳು
✓ ಡೆಪ್ಯೂಟಿ ಮ್ಯಾನೇಜರ್ ಹುದ್ದೆಗೆ – ಕನಿಷ್ಠ ಮಿತಿ – 25 ವರ್ಷಗಳು, ಗರಿಷ್ಠ ಮಿತಿ – 32 ವರ್ಷಗಳು
ವಯೋಮಿತಿ ಸಡಿಲಿಕೆ;
ಇತರ ಹಿಂದುಳಿದ ವರ್ಗಗಳು (ಒಬಿಸಿ) ಅಭ್ಯರ್ಥಿಗಳಿಗೆ – 3 ವರ್ಷಗಳು
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 5 ವರ್ಷಗಳು
ಪಿಡಬ್ಲ್ಯೂ ಬಿಡಿ ಅಭ್ಯರ್ಥಿಗಳಿಗೆ – 10-15 ವರ್ಷಗಳು
ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟಿಂಗ್
ಸಂದರ್ಶನ
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ, ಇಡಬ್ಲ್ಯೂಎಸ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ – 750 ರೂ.
ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಡಿ, ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕವಿಲ್ಲ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 64820 – 105280ರೂ. ವರೆಗೆ ವೇತನವನ್ನು ನೀಡಲಾಗುತ್ತದೆ.
How to Apply for SBI Manager(SO) Recruitment 2025
ಅರ್ಜಿ ಸಲ್ಲಿಸುವ ಸುಲಭ ವಿಧಾನ ಇಲ್ಲಿದೆ;
ಮೊದಲಿಗೆ SBI ನ ಅಧಿಕೃತ ಜಾಲತಾಣ https://sbi.bank.in/web/careers/current-openings ಕ್ಕೆ ಭೇಟಿ ನೀಡಿ.
current openings ವಿಭಾಗದಲ್ಲಿ ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
ನಂತರ “ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಲಿಂಕ್ ಮೇಲೆ ಟ್ಯಾಪ್ ಮಾಡಿ.
ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ ಅಥವಾ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
ಅಂತಿಮವಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.