ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಪೆಷಲಿಸ್ಟ್ ಕೇಡರ್ ಆಫೀಸರ್‌ಗಳ (SO) ಹುದ್ದೆಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತಿ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ ಡೆಪ್ಯುಟಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ಸಿಸ್ಟಮ್) ಸೇರಿದಂತೆ ವಿವಿಧ ಸ್ಪೆಷಲಿಸ್ಟ್ ಕೇಡರ್ ಆಫೀಸರ್‌ಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಲ್ಲಿ ಒಟ್ಟು 1511 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶರ್ಟ್ ಲಿಸ್ಟ್ ಮಾಡಿ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಹುದ್ದೆಗಳ ಅನುಸಾರ ವಿದ್ಯಾರ್ಹತೆಯನ್ನು ನಿಗದಿ ಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಒಮ್ಮೆ ಓದಿ ನೋಡಿ.
SBI SO Notification 2024 ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು SBIನ ಅಧಿಕೃತ ವೆಬ್ ಸೈಟ್ www.sbi.co.in ಭೇಟಿ ನೀಡಿ, ಅಕ್ಟೋಬರ್ 4ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ SBI SO Recruitment ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.
Shortview of SBI SO Recruitment 2024
Organization Name – State Bank of India Post Name – Specialist Cadre Officers Total Vacancy – 1511 Application Process – Online Job Location – All Over India(Karnataka)
ನೇಮಕಾತಿಯ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 14, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 14, 2024(Extended)
ವಿದ್ಯಾರ್ಹತೆ:
BE/ BTech in (ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್/ ಮಾಹಿತಿ ತಂತ್ರಜ್ಞಾನ/ ಸಾಫ್ಟ್‌ವೇರ್ ಇಂಜಿನಿಯರಿಂಗ್/ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಇಂಜಿನಿಯರಿಂಗ್) ಅಥವಾ MCA ಅಥವಾ MTech/ MSc ಪದವಿ ಪೂರ್ಣಗೊಳಿಸಿರಬೇಕು.
ಪ್ರತಿ ಹುದ್ದೆಗಳ ಅನುಸಾರ ನಿಗದಿತ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಪ್ರತಿ ಹುದ್ದೆಗು ಸಂಬಂಧಿಸಿದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರಬೇಕು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ಸಂಪೂರ್ಣ ವಿವರದೊಂದಿಗೆ ನೀಡಲಾಗಿದೆ.
ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 27 ರಿಂದ ಗರಿಷ್ಠ 48 ವರ್ಷಗಳ ಒಳಗೆ ಇರಬೇಕು.
ವೇತನ ಶ್ರೇಣಿ:
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 26.50 ಲಕ್ಷ ದಿಂದ 61 ಲಕ್ಷದ ವರೆಗೆ ವಾರ್ಷಿಕವಾಗಿ ವೇತನ ನೀಡಲಾಗುತ್ತದೆ.
ಈ ವೇತನ ಶ್ರೇಣಿಯು ಹುದ್ದೆಗಳ ಅನುಸಾರ ಬದಲಾವಣೆ ಆಗುತ್ತದೆ.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ವೈಯಕ್ತಿಕ ಸಂದರ್ಶನ
ದಾಖಲೆಗಳ ಪರಿಶೀಲನೆ
ಸಹಾಯಕ ವ್ಯವಸ್ಥಾಪಕ (ಸಿಸ್ಟಮ್) ಹುದ್ದೆಗಳಿಗೆ – ಆನ್ ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/ EWS/ OBC ಅಭ್ಯರ್ಥಿಗಳಿಗೆ – ₹750/-
SC/ ST/ PwBD ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಪಾವತಿ ವಿಧಾನ – ಆನ್ ಲೈನ್ ಮೂಲಕ
How to Apply for SBI SO Notification 2024?
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ…?
ಮೊದಲಿಗೆ SBI ನ ಅಧಿಕೃತ ವೆಬ್ ಸೈಟ್ www.sbi.co.in ಗೆ ಭೇಟಿ ನೀಡಿ.
ಮುಖಪುಟದಲ್ಲಿ ಕಾಣುವ ‘Career’ ವಿಭಾಗವನ್ನು ಆಯ್ಕೆ ಮಾಡಿ.
ಅಲ್ಲಿ ಕಾಣುವ ಇತ್ತೀಚಿನ ಪ್ರಕಟಣೆಗಳಲ್ಲಿ SBI SO Notification 2024 Apply online ಲಿಂಕ್ ಕ್ಲಿಕ್ ಮಾಡಿ.
ಅಗತ್ಯ ವಿವರಗಳೊಂದಿಗೆ ನೀಡುವ ಮೂಲಕ ಖಾತೆಯನ್ನು ರಚಿಸಿ,
ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಫೋಟೋ ಮತ್ತು ಸಹಿಯ ಪ್ರತಿಯನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕವನ್ನು ಪಾವತಿಸಿ.
ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಂಖ್ಯೆಯನ್ನು ಉಳಿಸಿಕೊಳ್ಳಿ.