SC ST Free UPSC Integrated Undergraduate Degree 2024: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪೂರ್ವ ಪರೀಕ್ಷೆ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಗೆ UPSC ಸಂಯೋಜಿತ ಪದವಿ ಉಚಿತ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪದವಿಯ ಜೊತೆಗೆ UPSC ಪರೀಕ್ಷೆಗೆ ತರಬೇತಿಯನ್ನು ನೀಡಲಾಗುತ್ತದೆ.
UPSC ಸಂಯೋಜಿತ ಪದವಿಯಲ್ಲಿ ವಿದ್ಯಾರ್ಥಿಗಳು ಬಿ.ಎ, ಬಿ.ಕಾಂ, ಬಿ.ಎಸ್ಸಿ ಕೋರ್ಸ್ ಗಳನ್ನು ತೆಗೆದುಕೊಳ್ಳಬಹುದು. ಈ ತರಬೇತಿಯು ವಸತಿಯುಕ್ತ ಕಾರ್ಯಕ್ರಮ ಆಗಿರುವುದರಿಂದ ಉಚಿತ ಊಟ ವಸತಿಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತದೆ. ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು ಜುಲೈ 31ಕ್ಕೆ ಕೊನೆಯ ದಿನಾಂಕವಾಗಿದೆ. ಈ ಲೇಖನದಲ್ಲಿ UPSC ಸಂಯೋಜಿತ ಪದವಿ ತರಬೇತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
Important Dates of SC ST Free UPSC Integrated Undergraduate Degree 2024
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಈಗಾಗಲೇ ಪ್ರಾರಂಭವಾಗಿದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜುಲೈ 31, 2024
Eligibility for SC ST Free UPSC Residential Training 2024
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- ಕರ್ನಾಟಕದ ನಿವಾಸಿಯಾಗಿರಬೇಕು
- ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು
- ದೈಹಿಕ ಅಂಗವಿಕಲ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನಿಗದಿತ ಪ್ರಾಧಿಕಾರದಿಂದ ಅಂಗವಿಕಲ ಪ್ರಮಾಣ ಪತ್ರ ಪಡೆದಿರಬೇಕು.
ವಿದ್ಯಾರ್ಹತೆ(Qualification):
ಮಾನ್ಯತಾ ಪಡೆದ ಬೋರ್ಡ್ ನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ವಯೋಮಿತಿ(Age Limit):
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 17 ವರ್ಷಗಳು ತುಂಬಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೋರ್ಸ್ ಗಳ ವಿವರ:
- BA
- B.com
- Bsc
ಈ ಮೂರು ಪದವಿ ಕೋರ್ಸ್ ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ:
ಈ ತರಬೇತಿಗೆ ಅರ್ಜಿ ಸಲ್ಲಿಸಲು ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 5 ಲಕ್ಷ ರೂ ಮೀರಿರಬಾರದು.
ಆಯ್ಕೆ ವಿಧಾನ:
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Also Read: Stipend to LAW Graduates 2024-25: ಕಾನೂನು ಪದವೀಧರರಿಗೆ ತಿಂಗಳಿಗೆ 5-10 ಸಾವಿರ ಶಿಷ್ಯವೇತನ; ಇಲ್ಲಿದೆ ಮಾಹಿತಿ
Also Read: CM Kaushalya Karnataka Yojane(CMKKY): ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಉಚಿತ ಕೌಶಲ್ಯ ತರಬೇತಿ!
Step by Step Process of UPSC Residential Training 2024 Online Application
ಅರ್ಜಿ ಸಲ್ಲಿಸುವ ಪ್ರಕ್ರಿಯೆ;
- ಮೊದಲಿಗೆ ಅಧಿಕೃತ ವೆಬ್ ಸೈಟಿಗೆ swdservices.karnataka.gov.in ಭೇಟಿ ನೀಡಿ.
- ನಂತರ ಮುಖಪುಟದಲ್ಲಿ ಕಾಣುವ ಇತ್ತೀಚಿನ ಸುದ್ದಿಗಳಲ್ಲಿ ” ವಸತಿಯುತ ಸಂಯೋಜಿತ ಪದವಿಯೊಂದಿಗೆ UPSC ತರಬೇತಿ” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮತ್ತೊಂದು ಪುಟವು ತೆರೆದುಕೊಳ್ಳುತ್ತದೆ ಅಲ್ಲಿ “ಆನ್ ಲೈನ್ ಅರ್ಜಿ ಸಲ್ಲಿಸು” ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ.
- ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.
Important Direct Links:
SC ST Free UPSC Integrated Undergraduate Degree 2024 Notification PDF | Download |
UPSC Residential Training 2024 Online Application Link | Apply Here |
Official Website | sw.kar.nic.in |
More Updates | KarnatakaHelp.in |
FAQs
How to Apply for UPSC Residential Training 2024-25?
Visit the Official Website of sw.kar.nic.in to Apply Online
What is the Online Application Last Date of SC ST Free UPSC Integrated Undergraduate Degree 2024?
July 31, 2024