Shrama shakthi Scheme Karnataka 2024: ರಾಜ್ಯದಲ್ಲಿನ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ನೂತನ ಯೋಜನೆ ಒಂದನ್ನು ಜಾರಿಗೊಳಿಸಿದ್ದು ಈ ಯೋಜನೆಯ ಮೂಲಕ ಅಲ್ಪಸಂಖ್ಯಾತ ವರ್ಗದ ಸದಸ್ಯರು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು ಮತ್ತು ಕೌಶಲ್ಯ ತರಬೇತಿಯನ್ನು ಕೂಡ ಪಡಿಯಬಹುದು. ಈ ಯೋಜನೆಗೆ ಸಂಬಂಧಿಸಿದಂತೆ ಯೋಜನೆಗಳ ಉದ್ದೇಶ, ಅರ್ಹತೆ, ಯೋಜನೆಯ ಮಾನದಂಡಗಳು, ಅಗತ್ಯವಿರುವ ದಾಖಲೆಗಳು, ಅರ್ಜಿ ಸಲ್ಲಿಕೆ ಕ್ರಮಗಳು, ಇನ್ನಿತರ ಮಾಹಿತಿಗಳಿಗಾಗಿ ಈ ಕೆಳಗೆ ನೀಡಲಾಗಿದ್ದು, ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ಮಾಹಿತಿ ಪಡೆದುಕೊಳ್ಳಿ.
ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮತಿ ಇಲಾಖೆಯಿಂದ ಕರ್ನಾಟಕ ಸಮಶಕ್ತಿ ಎಂಬ ಯೋಜನೆ ಪ್ರಾರಂಭಿಸಿದ್ದು, ಸಮುದಾಯದ ಆರ್ಥಿಕ ಅಭಿವೃದ್ಧಿಗೋಸ್ಕರ ಈ ಯೋಜನೆ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ 50,000 ರೂ ಗಳನ್ನು ನೀಡುತ್ತಿದೆ ಇದನ್ನು 36 ತಿಂಗಳ ಒಳಗೆ ಮರುಪಾವತಿ ಮಾಡಬೇಕು ಹಾಗೂ ಸಾಲದ ಮೊತ್ತಕ್ಕೆ 4% ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಯೋಜನೆಯನ್ನು ಪಡೆಯಲು ಕನಿಷ್ಠ 18 ಹಾಗೂ ಗರಿಷ್ಠ 55 ವರ್ಷಗಳ ವಯಸ್ಸಿನ ನಡುವೆ ಇರಬೇಕು. ಕುಟುಂಬದ ವಾರ್ಷಿಕ ಆದಾಯವು 3.50 ಲಕ್ಷವನ್ನು ಮೀರಿರಬಾರದು ಮತ್ತು ಕುಟುಂಬದ ಯಾವುದೇ ಸದಸ್ಯ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಹೊಂದಿದ್ದರೆ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
Shrama shakthi Scheme Karnataka 2024 – Shortview
Department Name | Karnataka Minorities Development Corporation Limited |
Scheme Name | Shrama Shakti yojana |
Scheme Type | Karnataka Govt Scheme |
Article Type | Govt Scheme |
Benefits of Shrama Shakthi Scheme Karnataka
ಕರ್ನಾಟಕ ಶ್ರಮ ಶಕ್ತಿ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ;
- ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರ ಸ್ವಂತ ಕಂಪನಿಗಳನ್ನು ಪ್ರಾರಂಭಿಸಲು ಮತ್ತು ಉದ್ಯಮಶೀಲತೆ ವೃತ್ತಿಯನ್ನು ಮುಂದುವರಿಸಲು ಈ ಯೋಜನೆಯನ್ನು ಪ್ರಾರಂಭಿಸಿತು.
- ಶ್ರಮಶಕ್ತಿ ಯೋಜನೆಯ ಅಡಿಯಲ್ಲಿ 50,000 ರೂ ಸಾಲ ನೀಡಲಾಗುತ್ತದೆ.
- ಒಟ್ಟು ಸಾಲದ ಮೊತ್ತಕ್ಕೆ ಹೆಚ್ಚುವರಿ ಯಾಗಿ 4% ಬಡ್ಡಿ ದರಕ್ಕೆ ಸಾಲ ನೀಡಲಾಗುತ್ತದೆ.
Eligibility Criteria for Shrama shakthi Scheme
ಶ್ರಮಶಕ್ತಿ ಯೋಜನೆಗೆ ಇರಬೇಕಾದ ಅರ್ಹತೆಗಳು ಮತ್ತು ಮಾನದಂಡಗಳು ಈ ಕೆಳಗಿನಂತಿವೆ;
- ಅರ್ಜಿದಾರರು ಶಾಶ್ವತ ವಾಗಿ ಕರ್ನಾಟಕದಲ್ಲಿ ನೆಲೆಸಿರಬೇಕು
- ಅರ್ಜಿದಾರರು ಬೌದ್ಧ ಮುಸ್ಲಿಂ ಕ್ರಿಶ್ಚಿಯನ್ ಜೈನ್ ಸಿಖ್ ಪಾರ್ಸಿಗಳಂತಹ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಾಗಿರಬೇಕು
- ಫಲಾನುಭವಿಗಳ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರೆ ಈ ಯೋಜನೆಯಿಂದ ಅನರ್ಹರಾಗುತ್ತಾರೆ.
- KMDC ಸಾಲಗಳಲ್ಲಿ ಡೀಫಾಲ್ಟ್ ಮಾಡಿದ ಅಭ್ಯರ್ಥಿಗಳಿಗೆ ಸಾಲ ನೀಡಲಾಗುವುದಿಲ್ಲ.
- ಅರ್ಜಿ ಸಲ್ಲಿಸುವವರ ಕುಟುಂಬದ ಆದಾಯವು 3.50 ಲಕ್ಷವನ್ನು ಮೀರಿರಬಾರದು.
Documents Required for Shramashakthi Scheme
ಶ್ರಮಶಕ್ತಿ ಯೋಜನೆಗೆ ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ;
- ಆಧಾರ್ ಕಾರ್ಡ್.
- ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆ ವಿವರಗಳು.
- ಸ್ಥಳ ದೃಡೀಕರಣ ಪತ್ರ.
- ಜಾತಿ ಪ್ರಮಾಣ ಪತ್ರ .
- ಅಲ್ಪಸಂಖ್ಯಾತ ದೃಢೀಕರಣ ಪ್ರಮಾಣ ಪತ್ರ.
- ಪಾಸ್ ಪೋರ್ಟ್ ಗಾತ್ರದ ಫೋಟೋ.
- ಶ್ಯೂರಿಟಿ ಘೋಷಣೆ ಪಾರಂ.
ಈ ಮೇಲಿನ ಎಲ್ಲಾ ದಾಖಲೆಗಳು ಅರ್ಜಿ ಸಲ್ಲಿಸಲು ಕಡ್ಡಾಯವಾಗಿದೆ.
How to Apply for Shrama shakthi Scheme
ಕರ್ನಾಟಕ ಶ್ರಮ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..?
- ಮೊದಲಿಗೆ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ kmdc.karnataka.gov.in ಗೆ ಭೇಟಿ ನೀಡಿ.
- ಈಗ ಮುಖಪುಟದಲ್ಲಿ ಕಾಣುವ ಯೋಜನೆಗಳು ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ಅಲ್ಲಿ ಕಾಣುವ ಶ್ರಮಶಕ್ತಿ ಸಾಲ ಯೋಜನೆ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ಬರುವಂತಹ ಈ ಸೇವೆಗಳ ಕೆ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಅಪ್ಲಿಕೇಶನ್ ಆರಿಸಿ
- ಪರದೆಯ ಮೇಲೆ ಹೊಸಪುಟ ತೆರೆಯುತ್ತದೆ ಅಲ್ಲಿ ಅಲ್ಪಸಂಖ್ಯಾತರಿಗೆ ಸಾಲಾ ಸಬ್ಸಿಡಿ ಟ್ಯಾಬ್ ಅಡಿಯಲ್ಲಿ ಆನ್ಲೈನ್ ಅರ್ಜಿ ಸಲ್ಲಿಸು ಮೇಲೆ ಕ್ಲಿಕ್ ಮಾಡಿ.
- ನಂತರ ಅರ್ಜಿ ನಮೂನೆಯ ಪರದೆ ನಿಮಗೆ ಕಾಣಿಸುತ್ತದೆ.
- ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ.
- ಈಗ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಸರಿಯಾದ ಕ್ರಮಾಂಕದಲ್ಲಿ ನಮೂದಿಸಿ.
- ತದನಂತರ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಕೊನೆಯದಾಗಿ Submit ಮೇಲೆ ಕ್ಲಿಕ್ ಮಾಡಿ ನತಂರ ಬರುವಂತಹ Acknowledgement ಪ್ರಿಂಟ್ ತೆಗೆದುಕೊಂಡು ಜಿಲ್ಲಾ ಆಯ್ಕೆ ಸಮಿತಿಗೆ ಸಲ್ಲಿಸಿ.
Important Links:
Official Website | kmdc.karnataka.gov.in |
More Updates | KarnatakaHelp.in |