ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯದ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಶಿರಸ್ತೇದಾರ್/ಉಪ ತಹಶೀಲ್ದಾರ್(01), ಆರ್ಥಿಕ ಮತ್ತು ಲೆಕ್ಕ ಪರಿಶೋಧನಾಧಿಕಾರಿ(01) ಹಾಗೂ ಐಟಿ ಸಿಬ್ಬಂದಿ 2 ಕಿರಿಯ ಪ್ರೋಗ್ರಾಮರ್ & ನೆಟ್ವರ್ಕಿಂಗ್ ಮ್ಯಾನೇಜರ್(01) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತೆ. ಸದರಿ ಹುದ್ದೆಗಳಿಗೆ ಸೇರ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ನವೆಂಬರ್ 09ರೊಳಗೆ ಆಫ್ ಲೈನ್ ಮೂಲಕ ತಮ್ಮ ರೆಸ್ಯೂಮ್(Resume) ಅನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ರೆಸ್ಯೂಮ್(Resume) ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 09, 2025
ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ:
✓ ಶಿರಸ್ತೇದಾರ್/ಉಪ ತಹಶೀಲ್ದಾರ್-01 ಹುದ್ದೆಗೆ; ಅಭ್ಯರ್ಥಿಗಳು ರಾಜ್ಯ ಸರ್ಕಾರದ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರ್/ಉಪ ತಹಶೀಲ್ದಾರ್ ಹುದ್ದೆ ಅಥವಾ ಸಮನಾಂತರ ಹುದ್ದೆಯಿಂದ ನಿವೃತ್ತಿ ಹೊಂದಿದ್ದು, ಅತಿ ಕಡಿಮೆ ಕಳಂಕ/ಆರೋಪ ದಾಖಲೆಗಳೊಂದಿಗೆ ಅಮಾನತು ಅಥವಾ ಇಲಾಖಾ ವಿಚಾರಣೆ ಅಥವಾ ಅಪರಾಧಿಕ ಮೊಕದ್ದಮೆ ಹೊಂದಿರಬಾರದು.
✓ ಆರ್ಥಿಕ ಮತ್ತು ಲೆಕ್ಕ ಪರಿಶೋಧನಾಧಿಕಾರಿ-01 ಹುದ್ದೆಗೆ; ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ದತ್ತಾಂಶ ವಿಜ್ಞಾನ/ಸಂಖ್ಯಾ ಶಾಸ್ತ್ರ ವಿಷಯದಲ್ಲಿ ಎಂ.ಕಾಂ/ಎಂ.ಟೆಕ್ ಅಥವಾ ಗಣಿತ ವಿಷಯದಲ್ಲಿ ಎಂ.ಎಸ್ಸಿ ಪೂರ್ಣಗೊಳಿಸಬೇಕು. ದತ್ತಾಂಶ ವಿಜ್ಞಾನದಲ್ಲಿ ಎಂ.ಕಾಂ ಸರ್ಟಿಫಿಕೇಟ್ ಆಗಿದ್ದಲ್ಲಿ ಆದ್ಯತೆ ನೀಡಲಾಗುವುದು.
✓ ಐಟಿ ಸಿಬ್ಬಂದಿ 2 ಕಿರಿಯ ಪ್ರೋಗ್ರಾಮರ್ & ನೆಟ್ವರ್ಕಿಂಗ್ ಮ್ಯಾನೇಜರ್ – 01 ಹುದ್ದೆಗೆ; ಅಭ್ಯರ್ಥಿಗಳು ಸರ್ಟಿಫಿಕೇಟ್ ನೆಟ್ವರ್ಕಿಂಗ್ನೊಂದಿಗೆ ಬಿಇ, ಸಿಎಸ್ಇ/ಐಎಸ್, ಪೂರ್ಣಗೊಳಿಸಿರಬೇಕು. ಜೊತೆಗೆ ಪೈಥಾನ್ ಸರ್ಟಿಫಿಕೇಟ್ನೊಂದಿಗೆ ಬಿ.ಇ ಸಿಎಸ್ಇ/ಐಎಸ್, ಸಂಬಂಧಿತ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
ವಯೋಮಿತಿ:
ಶಿರಸ್ತೇದಾರ್/ಉಪ ತಹಶೀಲ್ದಾರ್ ಹುದ್ದೆಗೆ ಗರಿಷ್ಠ ವಯೋಮಿತಿ – 65 ವರ್ಷಗಳು
ಆಯ್ಕೆ ವಿಧಾನ:
ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅರ್ಹತೆ ಮತ್ತು ವೃತ್ತಿ ಅನುಭವದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 45,000ರೂ.- 55,000ರೂ. ಗಳವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
Resume ಸಲ್ಲಿಸುವ ವಿಧಾನ
ಮೇಲಿನ ಹುದ್ದೆಗಳ ಅರ್ಹತೆಯನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ವಿವರವಾದ ಮಾಹಿತಿಯುಳ್ಳ Resume ಅನ್ನು ಈ ಕೆಳಗಿನ ವಿಳಾಸಕ್ಕೆ ನವೆಂಬರ್ 09ರೊಳಗೆ ಸಲ್ಲಿಸಬಹುದು.
✓ ವಿಳಾಸ: ವಿಶೇಷಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿಯವರ ಕಾರ್ಯಾಲಯ (ಐ.ಎಂ.ಎ ಹಾಗೂ ಇತರೆ ಕಂಪನಿ ವಂಚನೆ ಪ್ರಕರಣಗಳು)ರವರ ಕಛೇರಿ, ಪೋಡಿಯಂ ಬ್ಲಾಕ್, 3ನೇ ಮಹಡಿ, ವಿಶ್ವೇಶ್ವರಯ್ಯ ಗೋಪುರ, ಬೆಂಗಳೂರು-560001
Sir, where to find application form, I’m not getting application form