ವಿಜಯಪುರ ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ನ, ಶ್ರೀ ಸಿದ್ದೇಶ್ವರ ಮೆಡಿಕಲ್ಸ್(Sri Siddeshwara Medicals Vacancy 2024) ನಲ್ಲಿ ಖಾಲಿ ಇರುವ ವಿವಿಧಗಳಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಅಸ್ತಕ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಶ್ರೀ ಸಿದ್ದೇಶ್ವರ ಮೆಡಿಕಲ್ಸ್ ಶಾಖೆಗಳನ್ನು ಜಿಲ್ಲಾಯಾಧ್ಯಂತ ಸ್ಥಾಪಿಸಲಾಗುತ್ತಿದ್ದು, ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಆಗಸ್ಟ್ 12 ಮತ್ತು ಆಗಸ್ಟ್ 17ರಂದು ಎರಡು ದಿನಗಳ ಕಾಲ ಸಂದರ್ಶನ ನಡೆಯುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನದ ಜೊತೆಗೆ ESIC/PF ಮತ್ತು ಕುಟುಂಬದ ಸದಸ್ಯರಿಗೆ ಆರೋಗ್ಯ ಸುರಕ್ಷಾ ಸೌಲಭ್ಯ ನೀಡಲಾಗುತ್ತಿದೆ.
ಈ ನೇಮಕಾತಿಯಲ್ಲಿ ಫಾರ್ಮಸಿಸ್ಟ್, ಸಹಾಯಕ ಫಾರ್ಮಸಿಸ್ಟ್, ಡೆಲಿವರಿ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 65 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಇ-ಮೇಲ್ ಮೂಲಕ ಸ್ವ- ವಿವರಗಳನ್ನು (Resume) ಕಳುಹಿಸುವ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ಈ ನೇಮಕಾತಿ ಕುರಿತಾದ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.
ನೇರ ಸಂದರ್ಶನದ ವಿವರ:
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಸಂದರ್ಶನ ನಡೆಯುವ ದಿನಾಂಕ – ಆಗಸ್ಟ್ 12, 2024 ಮತ್ತು ಆಗಸ್ಟ್ 17, 2024
ಸಂದರ್ಶನ ನಡೆಯುವ ಸಮಯ – ಬೆಳಗ್ಗೆ 10:00 ಗಂಟೆಯಿಂದ ಸಾಯಂಕಾಲ 4:00 ವರೆಗೆ
ಸಂದರ್ಶನ ನಡೆಯುವ ವಿಳಾಸ – ಜೆ ಎಸ್ ಎಸ್ ಹಾಸ್ಪಿಟಲ್, NH -50, ಎಸ್-ಹೈಪರ್ ಮಾರುಕಟ್ಟೆ ಹತ್ತಿರ, ವಿಜಯಪುರ
ಖಾಲಿ ಇರುವ ಹುದ್ದೆಗಳ ವಿವರ:
ಫಾರ್ಮಸಿಸ್ಟ್ – 25
ಸಹಾಯಕ ಫಾರ್ಮಸಿಸ್ಟ್ -20
ಡೆಲಿವರಿ ಬಾಯ್ – 20
ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಿದ್ಯಾರ್ಹತೆಯು ಹುದ್ದೆಗಳಿಗೆ ಭಿನ್ನವಾಗಿರುತ್ತದೆ.
ಫಾರ್ಮಸಿಸ್ಟ್ ಹುದ್ದೆಗಳಿಗೆ – ಡಿ ಫಾರ್ಮಾ, ಬಿ ಫಾರ್ಮಾ
ಸಹಾಯಕ ಫಾರ್ಮಸಿಸ್ಟ್ ಹುದ್ದೆಗಳಿಗೆ – ಡಿ ಫಾರ್ಮಾ, ಬಿ ಫಾರ್ಮಾ
ಡೆಲಿವರಿ ಬಾಯ್ ಹುದ್ದೆಗೆ – ಯಾವುದೇ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
(ಕಾರ್ಯಕ್ಷೇತ್ರದಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ)