WhatsApp Channel Join Now
Telegram Group Join Now

RRB Paramedical Recruitment 2024: ಒಟ್ಟು 1376 ವಿವಿಧ ಪ್ಯಾರಾಮೆಡಿಕಲ್ ಸಿಬ್ಬಂದಿಯ ನೇಮಕಾತಿ

ರೈಲ್ವೆ ನೇಮಕಾತಿ ಮಂಡಳಿಯು(RRB) ಪ್ಯಾರಾಮೆಡಿಕಲ್ ಸಿಬ್ಬಂದಿಯ ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ರೈಲ್ವೆ ಇಲಾಖೆಯಲ್ಲಿ ಪ್ಯಾರಾಮೆಡಿಕಲ್ ನ ವಿವಿಧ ವಿಭಾಗಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಖಾಲಿ ಇರುವ ಒಟ್ಟು 1376 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ರೇಡಿಯೋಗ್ರಾಫರ್, ಆಪ್ಟೋಮೆಟ್ರಿಸ್ಟ್ ಮತ್ತು ಫಾರ್ಮಸಿಸ್ಟ್ ನಂತಹ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

Rrb Paramedical Recruitment 2024
Rrb Paramedical Recruitment 2024

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು RRB ಅಧಿಕೃತ https://indianrailways.gov.in/ ವೆಬ್‌ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ ಲೈನ್ ಪರೀಕ್ಷೆಗೆ ಒಳಪಡಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಬಿಎಸ್ಸಿ ನರ್ಸಿಂಗ್, ನರ್ಸಿಂಗ್ ಇನ್ ಡಿಪ್ಲೋಮೋ, ಪ್ಯಾರಮೆಡಿಕಲ್ ನಂತಹ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16ರಂದು ಕೊನೆಯ ದಿನಾಂಕವಾಗಿದೆ. ಈ ಲೇಖನದಲ್ಲಿ RRB Paramedical Recruitment 2024 ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Shortview of RRB Paramedical Recruitment 2024

Organization Name – Railway Recruitment Board (RRB)
Post Name – Paramedical
Total Vacancy – 1376
Application Process: Online
Job Location – All Over India(Karnataka)

ಪ್ರಮುಖ ದಿನಾಂಕಗಳು:

  • ನೇಮಕಾತಿ ಅಧಿಸೂಚನೆಯ ಪ್ರಕಟಣೆ ದಿನಾಂಕ – ಆಗಸ್ಟ್ 11, 2024
  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 17, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 16, 2024

ಖಾಲಿ ಇರುವ ಹುದ್ದೆಗಳ ವಿವರ:

  • ಆಹಾರ ತಜ್ಞ ಅಧಿಕಾರಿಗಳು – 5 ಹುದ್ದೆಗಳು
  • ನರ್ಸಿಂಗ್ ಸೂಪರಿಂಟೆಂಡೆಂಟ್ ಅಧಿಕಾರಿಗಳು -713 ಹುದ್ದೆಗಳು
  • ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ – 4 ಹುದ್ದೆಗಳು
  • ಕ್ಲಿನಿಕಲ್ ಸೈಕಾಲಜಿಸ್ಟ್ – 7 ಹುದ್ದೆಗಳು
  • ಡೆಂಟಲ್ ಹೈಜೀನಿಸ್ಟ್ – 3 ಹುದ್ದೆಗಳು
  • ಡಯಾಲಿಸಿಸ್ ತಂತ್ರಜ್ಞ – 20 ಹುದ್ದೆಗಳು
  • ಆರೋಗ್ಯ ಮತ್ತು ಮಲೇರಿಯಾ ಇನ್ಸ್‌ಪೆಕ್ಟರ್ Gr III – 126 ಹುದ್ದೆಗಳು
  • ಲ್ಯಾಬ್ ಸೂಪರಿಂಟೆಂಡೆಂಟ್ ಗ್ರೇಡ್ III – 27 ಹುದ್ದೆಗಳು
  • ಪರ್ಫ್ಯೂಸಿಸ್ಟ್ – 2 ಹುದ್ದೆಗಳು
  • ಫಿಸಿಯೋಥೆರಪಿಸ್ಟ್ ಗ್ರೇಡ್ II – 20 ಹುದ್ದೆಗಳು
  • ಆಕ್ಯುಪೇಷನಲ್ ಥೆರಪಿಸ್ಟ್ – 2 ಹುದ್ದೆಗಳು
  • ಕ್ಯಾಥ್ ಲ್ಯಾಬೊರೇಟರಿ ತಂತ್ರಜ್ಞ – 2 ಹುದ್ದೆಗಳು
  • ಫಾರ್ಮಾಸಿಸ್ಟ್ (ಎಂಟ್ರಿ ಗ್ರೇಡ್)- 246 ಹುದ್ದೆಗಳು
  • ಎಕ್ಸ್-ರೇ ತಂತ್ರಜ್ಞ – 64 ಹುದ್ದೆಗಳು
  • ಸ್ಪೀಚ್ ಥೆರಪಿಸ್ಟ್- 1 ಹುದ್ದೆ
  • ಕಾರ್ಡಿಯಾಕ್ ಟೆಕ್ನಿಷಿಯನ್ – 4 ಹುದ್ದೆಗಳು
  • ಆಪ್ಟೋಮೆಟ್ರಿಸ್ಟ್ – 4 ಹುದ್ದೆಗಳು
  • ECG ತಂತ್ರಜ್ಞರು – 13 ಹುದ್ದೆಗಳು
  • ಪ್ರಯೋಗಾಲಯ ಸಹಾಯಕ ಗ್ರೇಡ್ II – 94 ಹುದ್ದೆಗಳು
  • ಫೀಲ್ಡ್ ವರ್ಕರ್ – 19 ಹುದ್ದೆಗಳು

ವಿದ್ಯಾರ್ಹತೆ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು B.Sc ನರ್ಸಿಂಗ್ , D. ಫಾರ್ಮಸಿ, B. ಫಾರ್ಮಸಿ ಅರ್ಹತೆ ಪಡೆದುಕೊಂಡಿರಬೇಕು.

(ನಿಗದಿತ ಹುದ್ದೆಗಳಿಗೆ ಕೆಲಸ ನಿರ್ವಹಿಸಿದ ಅನುಭವದ ಅವಶ್ಯಕತೆ ಇದ್ದು, ಶೈಕ್ಷಣಿಕ ಅರ್ಹತೆ ಕುರಿದಾದ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಒಮ್ಮೆ ಓದಿ ನೋಡಿ)

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18ರಿಂದ ಗರಿಷ್ಠ 33 ವರ್ಷಗಳನ್ನು ನಿಗದಿಪಡಿಸಲಾಗಿದೆ.

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಎರಡು ಹಂತದ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರಥಮ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ದ್ವಿತೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ, ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದಾಖಲಾತಿ ಪರಿಶೀಲನೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ ಅಭ್ಯರ್ಥಿಗಳಿಗೆ – ₹500
  • SC/ST/EWS ಅಭ್ಯರ್ಥಿಗಳಿಗೆ – ₹250
  • ಮಹಿಳಾ ಅಭ್ಯರ್ಥಿಗಳಗೆ – ₹250

ಪಾವತಿ ವಿಧಾನ – ಆನ್ ಲೈನ್ ಮೂಲಕ

Also Read: RRB JE Recruitment 2024 Notification(OUT): ಜೂನಿಯರ್ ಇಂಜಿನಿಯರಿಂಗ್(JE) ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Apply for RRB Paramedical Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ

  • ರೈಲ್ವೇ ನೇಮಕಾತಿ ಮಂಡಳಯ ಅಧಿಕೃತ ವೆಬ್‌ಸೈಟ್ https://indianrailways.gov.in or https://www.rrbapply.gov.in/ ಗೆ ಭೇಟಿ ನೀಡಿ.
  • ಮುಖಪುಟದ ನೇಮಕಾತಿ ವಿಭಾಗದಲ್ಲಿ ಕಾಣುವ “RRB Paramedical Recruitment 2024” ಕ್ಲಿಕ್ ಮಾಡಿ.
  • “ಆನ್‌ಲೈನ್ ಅರ್ಜಿ” ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ಕೇಳಲಾಗುವ ಅರ್ಜಿ ವಿವರಗಳನ್ನು ಭರ್ತಿ ಮಾಡಿ.
  • ಅಗತ್ಯವಿರುವ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
  • ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI ಬಳಸಿಕೊಂಡು ಅಗತ್ಯವಿರುವ ಮೊತ್ತವನ್ನು ಪಾವತಿಸಿ.
  • ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ.

Important Direct Links:

Official Full Notification PDFDownload
Official Short Notification PDFDownload
Online Application Form LinkNew Apply | Login
Official Websiteindianrailways.gov.in
More UpdatesKarnatakaHelp.in

Leave a Comment