ಸಿಬ್ಬಂದಿ ಆಯ್ಕೆ ಆಯೋಗವು (SSC) ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸುವ ಸಲುವಾಗಿ SSC CGL 2024 ಅರ್ಜಿ ಆಹ್ವಾನಿಸಲಾಗಿತ್ತು, ಅರ್ಜಿ ಸಲ್ಲಿಸಿದ KKR Region ಅಭ್ಯರ್ಥಿಗಳ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಲು ಲಿಂಕ್ ಬಿಡುಗಡೆ ಮಾಡಲಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಅರ್ಜಿ ಸ್ಥಿತಿಯನ್ನು ಆನ್ ಲೈನ್ ಮೂಲಕ ಪರಿಶೀಲಿಸಿಕೊಳ್ಳಬಹುದು.
ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು,ಇಲಾಖೆಗಳು, ಸಂಸ್ಥೆಗಳಲ್ಲಿ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ಭರ್ತಿಗಾಗಿ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಪರೀಕ್ಷೆ 2024 ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಬರೋಬರಿ ಸುಮಾರು 17,727 ವಿವಿಧ ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ಈ ಸಾಲಿನ CGL ಪರೀಕ್ಷೆ ನಡೆಸಲಿದೆ.
SSC CGL Tier-1 ಪರೀಕ್ಷೆಯನ್ನು ಸೆಪ್ಟೆಂಬರ್ 9 ರಿಂದ 26 ರವರೆಗೆ ದೇಶದಾದ್ಯಂತ ನಡೆಯಲಿದೆ. ಪ್ರವೇಶ ಪತ್ರಗಳನ್ನು ಪರೀಕ್ಷೆಯು ಸಮೀಪಿಸುತ್ತಿದ್ದಂತೆ ಅಧಿಕೃತ SSC ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಅಭ್ಯರ್ಥಿಗಳು ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಲು SSC ಅಧಿಕೃತ ವೈಬ್ ಸೈಟ್ https://www.ssckkr.kar.nic.in ನಲ್ಲಿ ಭೇಟಿ ನೀಡಿ ಅರ್ಜಿಯ ಸ್ಥಿತಿಯ ವಿವರಗಳನ್ನು ಪಡೆದುಕೊಳ್ಳಬಹುದು. ಈ ಲೇಖನದಲ್ಲಿ SSC CGL 2024 Application Status ಅರ್ಜಿ ಸ್ಥಿತಿಯನ್ನು ವೀಕ್ಷಿಸುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ