ಸಿಬ್ಬಂದಿ ನೇಮಕಾತಿ ಆಯೋಗವು ಮಲ್ಟಿಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸಿಬ್ಬಂದಿಗಳು ಹಾಗೂ ಹವಾಲ್ದಾರ್ (ಸಿಬಿಐಸಿ, ಸಿಬಿಎನ್) ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯನ್ನು ಈಗಾಗಲೇ ಮುಕ್ತಾಯಗೊಳಿಸಿದ್ದು, ಸಲ್ಲಿಸಿರುವ ಅರ್ಜಿಗಳನ್ನು ತಿದ್ದುಪಡಿ ಮಾಡಲು ಲಿಂಕ್(SSC MTS 2024 Correction Window) ಬಿಡುಗಡೆ ಮಾಡಲಾಗಿತ್ತಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಸಮಯದಲ್ಲಿ ದೋಷ ಪೂರಿತ ಅಥವಾ ತಪ್ಪು ಮಾಹಿತಿ ನೀಡಿದ್ದರೆ, ತಿದ್ದುಪಡಿ ಮಾಡಲು ಸಿಬ್ಬಂದಿ ಆಯ್ಕೆ ಆಯೋಗವು ಅವಕಾಶ ನೀಡಿದೆ. ತಿದ್ದುಪಡಿ ಲಿಂಕ್ ಆಗಸ್ಟ್ 16 ರಿಂದ 17ರವರೆಗೆ ಎರಡು ದಿನಗಳ ಅವಕಾಶ ನೀಡಲಾಗಿದೆ. ಅರ್ಜಿದಾರರಿಗೆ ಅರ್ಜಿ ನಮೂನೆ ತಿದ್ದುಪಡಿಗೆ ಇದು ಕೊನೆಯ ಅವಕಾಶವಾಗಿದೆ. ಎಸ್‌ಎಸ್‌ಸಿ ಮಲ್ಟಿಟಾಸ್ಕಿಂಗ್ (ನಾನ್ ಟೆಕ್ನಿಕಲ್) ಸಿಬ್ಬಂದಿಗಳು ಹಾಗೂ ಹವಾಲ್ದಾರ್ (ಸಿಬಿಐಸಿ, ಸಿಬಿಎನ್) ಹುದ್ದೆಗಳಿಗೆ ಪರೀಕ್ಷೆಯನ್ನು ಸೆಪ್ಟೆಂಬರ್ 30 ರಿಂದ ನವೆಂಬರ್ 14, 2024 ರವರೆಗೆ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ.