ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2024 ಜೂನ್ 26 ರಂದು ಎಸ್‌ಎಸ್‌ಸಿ ಸೆಲೆಕ್ಷನ್ ಪೋಸ್ಟ್ ಫೇಸ್ 12 ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಸದರಿ ಪರೀಕ್ಷೆಗೆ ಸಂಬಂಧಿಸಿದ ಕೀ ಉತ್ತರಗಳನ್ನು ಇಲಾಖೆಯು ಇಂದು (ಜುಲೈ 02) ಬಿಡುಗಡೆ ಮಾಡಿದೆ. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು SSC ಅಧಿಕೃತ ವೆಬ್ ಸೈಟಿನಲ್ಲಿ ಕೀ ಉತ್ತರಗಳ PDF ಅನ್ನೋ ಡೌನ್ಲೋಡ್ ಮಾಡಬಹುದಾಗಿದೆ. ಇದರ ಸಹಾಯದಿಂದ ಅಭ್ಯರ್ಥಿಗಳು ಅವರ ಅಂದಾಜು ಅಂಕಗಳನ್ನು ಪರಿಶೀಲಿಸಿಕೊಳ್ಳಬಹುದು.
ಅಧಿಕೃತ ಪ್ರಕಟಣೆಯ ಪ್ರಕಾರ, SSC 2024 ರ ಜುಲೈ ಮೊದಲ ವಾರದಲ್ಲಿ ಎಸ್‌ಎಸ್‌ಸಿ ಸೆಲೆಕ್ಷನ್ ಪೋಸ್ಟ್ ಫೇಸ್ 12 ಪರೀಕ್ಷೆಯ ಕೀ ಉತ್ತರಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ. ಕೀ ಉತ್ತರ ಎಸ್‌ಎಸ್‌ಸಿ ಯ ಅಧಿಕೃತ ವೆಬ್‌ಸೈಟ್ (https://ssc.gov.in/) ನಲ್ಲಿ ಲಭ್ಯವಿರುತ್ತದೆ. ಬಿಡುಗಡೆಯಾಗುವ ಕೀ ಉತ್ತರಗಳ ಮೇಲೆ ಅಭ್ಯರ್ಥಿಗಳಿಗೆ ಸಂದೇಹವಿದ್ದರೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಕೀ ಉತ್ತರಗಳು ಬಿಡುಗಡೆಯಾದ ನಂತರ ಆಕ್ಷೇಪಣೆ ಸಲ್ಲಿಸಲು ಪ್ರತ್ಯೇಕ ಲಿಂಕ್ ನೀಡಲಾಗುತ್ತದೆ. ಇದರ ಮೂಲಕ ಅಭ್ಯರ್ಥಿಗಳು ಕೀ ಉತ್ತರಗಳ ಮೇಲಿನ ಅಕ್ಷೇಪಣೆಗಳನ್ನು ಸಲ್ಲಿಸಬಹುದು. ಈ ಲೇಖನದಲ್ಲಿ ನಾವು ಆನ್ ಲೈನ್ ಮೂಲಕ ಈ ಉತ್ತರಗಳನ್ನು ಡೌನ್ ಲೋಡ್ ಮಾಡುವುದು ಹೇಗೆ, ಈ ಉತ್ತರಗಳನ್ನು ಪಡೆದ ನಂತರ ಮುಂದಿನ ಹಂತಗಳು ಯಾವುವು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.
How to Download SSC Selection Post Phase 12 Answer Key 2024
ಈ ಉತ್ತರಗಳನ್ನು ಡೌನ್ ಲೋಡ್ ಮಾಡುವುದು ಹೇಗೆ…?
ಎಸ್‌ಎಸ್‌ಸಿ ಯ ಅಧಿಕೃತ ವೆಬ್‌ಸೈಟ್‌ಗೆ ssc.gov.in ಭೇಟಿ ನೀಡಿ.
“ಉತ್ತರ ಕೀ” ಅಥವಾ “ಸೆಲೆಕ್ಷನ್ ಪೋಸ್ಟ್ ಫೇಸ್ 12 ಉತ್ತರ ಕೀ 2024” ಲಿಂಕ್ ಕ್ಲಿಕ್ ಮಾಡಿ.
“ಅಭ್ಯರ್ಥಿಗಳ ಪ್ರತಿಕ್ರಿಯೆ ಹಾಳೆಗಳು, ತಾತ್ಕಾಲಿಕ ಕೀ ಉತ್ತರ ಗಳು ಮತ್ತು ಸವಾಲುಗಳಿಗೆ ಸಲ್ಲಿಸುವಿಕೆಗಾಗಿ ಲಿಂಕ್” ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಮಾಡಿ.
ಉತ್ತರ ಕೀ PDF ಸ್ವರೂಪದಲ್ಲಿ ಪ್ರದರ್ಶಿಸಲಾಗುತ್ತದೆ.
ಅದನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ನಿಮ್ಮ ಉತ್ತರಗಳನ್ನು ಪರಿಶೀಲಿಸಿ.
ಮಾರ್ಕಿಂಗ್ ಯೋಜನೆಯನ್ನು ಬಳಸಿಕೊಂಡು ನಿಮ್ಮ ತಾತ್ಕಾಲಿಕ ಸ್ಕೋರ್ ಅನ್ನು ಲೆಕ್ಕಹಾಕಿ.
SSC Phase 12 Answer Key 2024 Objection Process
ಕೀ ಉತ್ತರಗಳಗೆ ಸವಾಲು ಹೇಗೆ ಸಲ್ಲಿಸುವುದು?: ಅಭ್ಯರ್ಥಿಗಳಿಗೆ ಈ ಉತ್ತರಗಳಲ್ಲಿ ಾವುದೇ ಪ್ರಶ್ನೆಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆನ್‌ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ನಿರ್ದಿಷ್ಟ ಅವಧಿ ಇರುತ್ತದೆ. ಈ ಅವಧಿಯ ಬಗ್ಗೆ ಅಧಿಕೃತ ಪ್ರಕಟಣೆಗಳಲ್ಲಿ ತಿಳಿಸಲಾಗುತ್ತದೆ.
ಮುಂದಿನ ಹಂತಗಳು ಯಾವುವು?
ಕೀ ಉತ್ತರಗಳು ಮತ್ತು ಅಭ್ಯರ್ಥಿಗಳ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ, ಎಸ್‌ಎಸ್‌ಸಿ ಅಂತಿಮ ಉತ್ತರ ಕೀಯನ್ನು ಬಿಡುಗಡೆ ಮಾಡುತ್ತದೆ. ಅಂತಿಮ ಉತ್ತರ ಕೀಯನ್ನು ಆಧರಿಸಿ, ಅಂತಿಮ ಅಂಕಗಳನ್ನು ಲೆಕ್ಕಹಾಕಲಾಗುತ್ತದೆ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.