SSLC 2024 Exam 2 Time Table: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEEB) ನಡೆಸುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ (SSLC) ಯ ಎರಡನೇ ಹಂತದ ಪರೀಕ್ಷೆಗಳು 2024 ರ ಜೂನ್ 7 ರಿಂದ 12 ರವರೆಗೆ ನಡೆಯಲಿವೆ. ಈ ಪರೀಕ್ಷೆಗಳು ರಾಜ್ಯದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬರೆಯಲಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷಾ ಮಂಡಳಿಯು ಈಗಾಗಲೇ ಪ್ರಕಟಿಸಿದ್ದು, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದಿರುವ ಅಂಕಗಳ ಮೇಲೆ ತೃಪ್ತಿ ಇಲ್ಲದಿದ್ದರೆ ಅಥವಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರೆ ಪರೀಕ್ಷೆ ಮಂಡಳಿಯು ಪರೀಕ್ಷೆ 2 ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿದೆ.
ಪರೀಕ್ಷೆ ಬರೆಯಲು ಇಚ್ಚಿಸುವ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಭೇಟಿ ನೀಡಿ ಪರೀಕ್ಷೆ 2ಕ್ಕೆ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಪರೀಕ್ಷೆಗೆ ಸಂಬಂಧಿಸಿದ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿಯು ತನ್ನ ವೆಬ್ಸೈಟ್ನ ಮೂಲಕ ಪ್ರಕಟಿಸಿದ್ದು ವೇಳಾಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
SSLC 2024 Exam 2 Time Table ಪರೀಕ್ಷಾ ದಿನಾಂಕಗಳು:
- ಜೂನ್ 7, 2024: ಪ್ರಥಮ ಭಾಷೆ
- ಜೂನ್ 8, 2024: ತೃತೀಯ ಭಾಷೆ
- ಜೂನ್ 10, 2024: ಗಣಿತ, ಸಮಾಜಶಾಸ್ತ್ರ
- ಜೂನ್ 11, 2024: ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
- ಜೂನ್ 12, 2024: ವಿಜ್ಞಾನ ಹಾಗೂ ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
ಪರೀಕ್ಷೆಯ ಸಮಯ:
- ಮುಂಜಾನೆ 10:30 ರಿಂದ ಮಧ್ಯಾಹ್ನ 1:30 ರವರೆಗೆ
ಪ್ರಮುಖ ಸೂಚನೆಗಳು:
- ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕೆ ತಲುಪಿ.
- ನಿಮ್ಮ ಹಾಲ್ ಟಿಕೆಟ್, ಪೆನ್ಸಿಲ್, ಇರೆಸರ್ ಮತ್ತು ಇತರ ಅಗತ್ಯ ವಸ್ತುಗಳನ್ನು ತರಲು ಮರೆಯದಿರಿ.
- ಮೊಬೈಲ್ ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಡಿ.
- ಪರೀಕ್ಷಾ ಕೇಂದ್ರದ ನಿಯಮಗಳನ್ನು ಪಾಲಿಸಿ.
ಹೆಚ್ಚಿನ ಮಾಹಿತಿಗಾಗಿ:
- KSEEB ವೆಬ್‌ಸೈಟ್‌ಗೆ ಭೇಟಿ ನೀಡಿ: https://kseab.karnataka.gov.in/english
- KSEEB ಕಚೇರಿಯನ್ನು ಸಂಪರ್ಕಿಸಿ.
ಕೆಲವು ಹೆಚ್ಚುವರಿ ಸಲಹೆಗಳು:
- ಪರೀಕ್ಷೆಗೆ ಚೆನ್ನಾಗಿ ಸಿದ್ಧರಾಗಿ. ಸಮಗ್ರವಾಗಿ ಅಧ್ಯಯನ ಮಾಡಿ ಮತ್ತು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
- ಪರೀಕ್ಷಾ ದಿನದಂದು ಒತ್ತಡಕ್ಕೆ ಒಳಗಾಗಬೇಡಿ. ಶಾಂತವಾಗಿರಿ ಮತ್ತು ನಿಮ್ಮ ಕೈಲಾದಷ್ಟು ಉತ್ತಮವಾಗಿ ಪ್ರಯತ್ನಿಸಿ.
- ಸಮಯ ನಿರ್ವಹಣೆ ಮುಖ್ಯವಾಗಿದೆ. ಪ್ರತಿ ಪ್ರಶ್ನೆಗೆ ಎಷ್ಟು ಸಮಯ ತೆಗೆದುಕೊಳ್ಳಬೇಕೆಂದು ಯೋಜಿಸಿ ಮತ್ತು ನಿಮ್ಮ ಯೋಜನೆಗೆ ಬದ್ಧರಾಗಿರಿ.
- ಎಲ್ಲಾ ಪ್ರಶ್ನೆಗಳನ್ನು ಪ್ರಯತ್ನಿಸಿ. ಖಾಲಿ ಉತ್ತರವಿಡಬೇಡಿ.
- ನಿಮ್ಮ ಉತ್ತರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಯಾವುದೇ ತಪ್ಪುಗಳನ್ನು ಸರಿಪಡಿಸಿ.
ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
Important Links:
SSLC 2024 Exam 2 Time Table PDF | Download |
Official Website | kseab.karnataka.gov.in |
More Updates | KarnatakaHelp.in |