Karnataka SSLC Result 2023 Date : ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯು ಪ್ರಗತಿಯ್ಲಲಿದ್ದು , ಸದ್ಯದಲ್ಲಿಯೇ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.
ಕೆಲವು ಮೂಲಗಳ ಪ್ರಕಾರ, ಮೇ ಮೊದಲ ಅಥವಾ ಎರಡನೇ ವಾರದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟವಾಗುವ ದಿನಾಂಕ SSLC Result 2023 Date ವನ್ನು ಶೀಘ್ರದಲ್ಲೆ ತಿಳಿಸಲಾಗುವುದು.
2022 -23 ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 31 ರಿಂದ ಏಪ್ರಿಲ್ 15, 2023 ರವರೆಗೆ ನಡೆಸಲಾಗಿತ್ತು. ಈ ಬಾರಿ 8.2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದಿದ್ದಾರೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ 2023 ರ ದಿನಾಂಕ ಮತ್ತು ಸಮಯದ ಕುರಿತು ಶಿಕ್ಷಣ ಇಲಾಖೆಯು ಯಾವುದೇ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ ಅಥವಾ ಪ್ರಕಟಿಸಿಲ್ಲ ಎನ್ನಬಹುದು. ಇನ್ನು ಕೆಲವು ದಿನಗಳಲ್ಲಿ ತಿಳಿಸಬಹುದು, ತ್ವರಿತ ಮಾಹಿತಿಗಾಗಿ ನಮ್ಮ ವಾಟ್ಸಪ್ಪ್ ಗ್ರೂಪ್ ಅಥವಾ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿರಿ.
ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಹೇಗೆ ನೋಡುವುದು ?
>> ಫಲಿತಾಂಶ ಪ್ರಕಟವಾದ ದಿನದಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ kseeb.karnataka.gov.in ಅಥವಾ karresults.nic.in ವೆಬ್‌ಸೈಟ್‌ಗೆ ಹೋಗಿ.
>> ಮುಖಪುಟದಲ್ಲಿ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಲಿಂಕ್ ಇರುತ್ತದೆ.
>> ಕ್ಲಿಕ್ ಮಾಡಿದಾಗ ಫಲಿತಾಂಶ ಪುಟ ಕಾಣಿಸಿಕೊಳ್ಳಲಿದೆ.
>> ಅಲ್ಲಿ ರೋಲ್ ನಂಬರ್ ಭರ್ತಿ ಮಾಡಿ ಸರ್ಚ್ ಕೊಡಿ . ಫಲಿತಾಂಶ ಕಾಣಿಸಿಕೊಳ್ಳುತ್ತದೆ.
ಈಗಾಗಲೇ ಶಿಕ್ಷಣ ಇಲಾಖೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕೀ ಉತ್ತರ ಗಳನ್ನು ಪ್ರಕಟಿಸಿದೆ. ಕೀ ಉತ್ತರಗಳು ಪಿಡಿಎಫ್ ಮಾದರಿಯಲ್ಲಿ ಲಭ್ಯವಿದೆ. ಇಲ್ಲಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿ
ಅಂತಿಮ ನುಡಿ : ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು