ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2025 ರ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಕರ್ನಾಟಕ SSLC ಪರೀಕ್ಷೆ 2025 ಅನ್ನು ನಡೆಸಿತ್ತು. ಕರ್ನಾಟಕದಾದ್ಯಂತ 8.40,173 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಮಂಡಳಿಯು ಫಲಿತಾಂಶವನ್ನು ಪ್ರಕಟಿಸಿದೆ.
ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಪ್ರೆಸ್ ಮೀಟ್‌ನಲ್ಲಿ SSLC ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಈ ವರ್ಷವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ರಾಜ್ಯದಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದಾರೆ. ಮಧ್ಯಾಹ್ನ 12.30 ಗಂಟೆಯ ನಂತರ ಅಧಿಕೃತ ವೆಬ್ಸೈಟ್ https://karresults.nic.in ನಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ, ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಸುದ್ದಿಗೋಷ್ಠಿ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರು. 8.40,173 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಹಾಜರಾಗಿದ್ದು, ಶೇಕಡ 66.14% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.74.00 ಬಾಲಕಿಯರು ಹಾಗೂ ಶೇ 58.07 ಬಾಲಕರು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆ – 2 ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ – 3 ವೇಳಾಪಟ್ಟಿ ಪ್ರಕಟಿಸಿದರು.
ಜಿಲ್ಲಾವಾರು ಫಲಿತಾಂಶ
- ದಕ್ಷಿಣ ಕನ್ನಡ ಮೊದಲನೇ ಸ್ಥಾನ – 91.12%
- ಉಡುಪಿಗೆ 2ನೇ ಸ್ಥಾನ -89.96%
- ಉತ್ತರ ಕನ್ನಡಕ್ಕೆ 3ನೇ ಸ್ಥಾನ -83.19%
- ಕಲ್ಬುರ್ಗಿ ಕೊನೆಯ ಸ್ಥಾನವನ್ನು ಗಳಿಸಿದೆ.
ಎಸ್ ಎಸ್ ಎಲ್ ಸಿ ಪರೀಕ್ಷೆ – 2 ವೇಳಾಪಟ್ಟಿ ಪ್ರಕಟ (SSLC Exam-2)
ಎಸ್ ಎಸ್ ಎಲ್ ಸಿ ಪರೀಕ್ಷೆ – 1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ದೃತಿಗೆಡದೆ ಎಸ್ ಎಸ್ ಎಲ್ ಸಿ ಪರೀಕ್ಷೆ – 2(SSLC Exam-2) ಹಾಗೂ ಎಸ್ ಎಲ್ ಸಿ ಪರೀಕ್ಷೆ – 3(SSLC Exam-3) ಹಾಜರಾಗಿ ಬಹು ಪ್ರಯತ್ನಗಳನ್ನು ಮಾಡಿ ಉತ್ತೀರ್ಣರಾಗಬಹುದು.
ಎಸ್ ಎಸ್ ಎಲ್ ಸಿ ಪರೀಕ್ಷೆ – 1 ಫಲಿತಾಂಶದ ಬಳಿಕ ಅನುತ್ತೀರ್ಣರಾದ ಅಥವಾ ಇನ್ನೂ ಹೆಚ್ಚು ಅಂಕಗಳನ್ನು ಗಳಿಸುವ ಉದ್ದೇಶವಿರುವ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ – 3 ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಮರು ಪರೀಕ್ಷೆಗೆ ಯಾವುದೇ ಶುಲ್ಕ ಇರುವುದಿಲ್ಲ
ಮೇ – 26ರಿಂದ ಜೂನ್ – 2 ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-2 ನಡೆಯಲಿದೆ.
ಜೂ- 23ರಿಂದ ಜೂ – 30ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ-3 ನಡೆಯಲಿದೆ.
ಇದನ್ನೂ ಓದಿ: Karnataka SSLC Results 2025(OUT): ಪರೀಕ್ಷೆ-1ರ ಫಲಿತಾಂಶ ಪ್ರಕಟ, ಡೈರೆಕ್ಟ್ ಲಿಂಕ್ ಇಲ್ಲಿದೆ!
Important Direct Links:
Official Website | kseab.karnataka.gov.in |
More Updates | Karnataka Help.in |