SSLC Result 2025(OUT): 10ನೇ ತರಗತಿ ಫಲಿತಾಂಶ ಪ್ರಕಟ!

By ಕರ್ನಾಟಕ ಹೆಲ್ಪ್ ಡೆಸ್ಕ್

Published On:

IST

Updated On:

ಫಾಲೋ ಮಾಡಿ

Karnataka SSLC Result 2025
Karnataka SSLC Result 2025

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2025ರ ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ SSLC ಪರೀಕ್ಷೆ(Karnataka SSLC Exam 2025)ಯನ್ನು ನಡೆಸಿತ್ತು. ಕರ್ನಾಟಕದಾದ್ಯಂತ 15,881 ಪ್ರೌಢಶಾಲೆಗಳಿಂದ ಒಟ್ಟು 8,96,447 ವಿದ್ಯಾರ್ಥಿಗಳು ಇದರಲ್ಲಿ 4,61,563 ಹುಡುಗರು ಮತ್ತು 4,34,884 ಹುಡುಗಿಯರು ಪರೀಕ್ಷೆಗೆ ದಾಖಲಾಗಿದ್ದರು. ಪ್ರಸ್ತುತ ಎಲ್ಲ ವಿಷಯಗಳ ಪರೀಕ್ಷೆಗಳು ಮುಗಿದಿದ್ದು, ಮೌಲ್ಯಮಾಪನ ಕಾರ್ಯವು ಮುಗಿದಿದೆ.

ಇದನ್ನೂ ಓದಿ: Karnataka SSLC Results 2025(OUT): ಪರೀಕ್ಷೆ-1ರ ಫಲಿತಾಂಶ ಪ್ರಕಟ, ಡೈರೆಕ್ಟ್ ಲಿಂಕ್ ಇಲ್ಲಿದೆ!

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(Karnataka Examination Results 2025)ಯು ಕರ್ನಾಟಕ SSLC ಪರೀಕ್ಷೆ 2025 ರ ಎಲ್ಲ ವಿಷಯವಾರು ಕೀಲಿ ಉತ್ತರ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 6 ರಂದು ಕಾಲಾವಕಾಶ ನೀಡಲಾಗಿತ್ತು. ಪ್ರಸ್ತುತ ಕರ್ನಾಟಕ SSLC ಪರೀಕ್ಷೆ 2025 ರ ಎಲ್ಲ ವಿಷಯವಾರು ಮೌಲ್ಯಮಾಪನವು ಬಹುತೇಕ ಪೂರ್ಣಗೊಂಡಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ, ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

Karnataka SSLC Result 2025 Date

ಸುದ್ದಿಗೋಷ್ಠಿ

ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಿಸುವ ಸಂಬಂಧ ದಿನಾಂಕ 02-05-2025 ರಂದು ಬೆಳಿಗ್ಗೆ 11-30 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿಯನ್ನು ಕರೆಯಲಾಗಿದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ – 1 ಫಲಿತಾಂಶದ ಬಳಿಕ ಅನುತ್ತೀರ್ಣರಾದ ವಿದ್ಯಾರ್ಥಿಗಳೇ ನಿರಾಶರಾಗದಿರಿ ಯಾಕೆಂದರೆ ನಿಮಗೆ ಇನ್ನು ಎರಡು ಅವಕಾಶಗಳಿವೆ. ಎಸ್ ಎಸ್ ಎಲ್ ಸಿ ಪರೀಕ್ಷೆ – 2 ವೇಳಾಪಟ್ಟಿಯನ್ನು ಪರೀಕ್ಷೆ-1ರ ಫಲಿತಾಂಶ ಪ್ರಕಟವಾದ ನಂತರ ತಿಳಿಸಲಾಗುವುದು.

ಫಲಿತಾಂಶವನ್ನು ನೋಡುವ ವಿಧಾನ;

  • ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಫಲಿತಾಂಶ ಪ್ರಕಟಿಸುವ ಅಧಿಕೃತ ವೆಬ್ ಸೈಟ್ https://karresults.nic.in/ಗೆ ಭೇಟಿ ನೀಡಿ.
  • ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ – 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆಯನ್ನು ಭರ್ತಿ ಮಾಡಿ.
  • ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ 2025 ಅನ್ನು ಸಲ್ಲಿಸಿ ಮತ್ತು ಫಲಿತಾಂಶವನ್ನು ಡೌನ್‌ಲೋಡ್ ಮಾಡಿ/ಮುದ್ರಿಸಿ.

ಇದನ್ನೂ ಓದಿ: CBSE 10th Result 2025: ಪರೀಕ್ಷೆಯ ಫಲಿತಾಂಶ ಶೀಘ್ರದಲ್ಲೇ ಪ್ರಕಟ!

Important Direct Links:

SSLC Result 2025 Check Link – 1karresults.nic.in
Official WebsiteKSEAB
More updatesKarnataka Help.in

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

For Feedback - admin@karnatakahelp.in

7 thoughts on “SSLC Result 2025(OUT): 10ನೇ ತರಗತಿ ಫಲಿತಾಂಶ ಪ್ರಕಟ!”

  1. If attendance is short,the admission ticket not given is sslc 1 exam, is allowing to write exam in sslc 2 exam

    Reply

Leave a Comment