ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣ ಬೆಳೆಸಬೇಕು ಎಂಬುದಾದರೆ ವಿಮಾನಗಳು ಹೆಚ್ಚು ಪ್ರಯೋಜನಕಾರಿಯಾಗಿದೆ.ವಿಶ್ವದ ದೊಡ್ಡದಾದ ವಿಮಾನ ನಿಲ್ದಾಣ ಹಾಗೂ ಅತಿ ಚಿಕ್ಕ ವಿಮಾನ ನಿಲ್ದಾಣ ಯಾವುದು ಗೊತ್ತೆ?
ವಿಮಾನ ನಿಲ್ದಾಣ ಎಂದ ತಕ್ಷಣ ನಿಮ್ಮ ಕಣ್ಣಿಗೆ ವೇಟಿಂಗ್ ಪ್ರದೇಶ, ಐಷಾರಾಮಿ ಮೂಲಸೌಕರ್ಯಗಳೇ ನೆನಪಿಗೆ ಬರುತ್ತವೆ. ವಿಶ್ವದ ಒಂದು ವಿಮಾನ ನಿಲ್ದಾಣವು ಸಾಮಾನ್ಯ ವಿಮಾನ ನಿಲ್ದಾಣಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಅದು ಜಗತ್ತಿನ ಸಣ್ಣ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಅತಿ ಚಿಕ್ಕ ವಿಮಾನ ನಿಲ್ದಾಣ(World’s Tiniest Airport)
ಕೊಲಂಬಿಯಾದ ಅಗುವಾಚಿಕಾ ಎಂಬ ಸ್ಥಳದಲ್ಲಿ ಹಕಾರಿಟಮಾ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣದ ಗಾತ್ರದಿಂದಾಗಿ ಅದು ಪ್ರಸಿದ್ಧವಾಗಿದೆ. ವಿಮಾನ ಹೊರಡಲು 20 ನಿಮಿಷಗಳು ಬಾಕಿ ಇರುವಾಗ ಬೋರ್ಡಿಂಗ್ ಪ್ರಕ್ರಿಯೆಗಳು ಶುರುವಾಗುತ್ತವೆ.
ಅಲ್ಲಿ ಲಗೇಜ್ ಪರಿಶೀಲಿಸಲು ಸ್ಕ್ಯಾನರ್ ಕೂಡ ಇಲ್ಲ, ಕೈಯಲ್ಲಿ ಪರಿಶೀಲಿಸಲಾಗುತ್ತದೆ. ಇಲ್ಲಿ ಸ್ಕ್ಯಾನರ್ ಯಂತ್ರ ಇರಿಸಲೂ ಕೂಡ ಸ್ಥಳವಿಲ್ಲ. ಜನರು ವಿಮಾನ ನಿಲ್ದಾಣಕ್ಕೆ ಬಂದರೆ ಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕು.
ಇಲ್ಲಿ ಐಷಾರಾಮಿ ಕಾಯುವ ಕೊಠಡಿ ಇಲ್ಲ, ಬದಲಿಗೆ ಮಾವಿನ ಮರದ ಕೆಳಗೆ ನಿರ್ಮಿಸಲಾದ ಬೆಂಚುಗಳ ಮೇಲೆ ಜನರು ಕಾಯುತ್ತಾರೆ. ಪುರುಷರು ಮತ್ತು ಮಹಿಳೆಯರಿಗೆ ತಲಾ ಒಂದು ಕಾಯುವ ಕೊಠಡಿ ಇದೆ.ಇಲ್ಲಿ ವಿಮಾನವು ಚಿಕ್ಕದಾಗಿದ್ದರೂ, ಆಸನಗಳು ಸಾಕಷ್ಟು ಆರಾಮದಾಯಕವಾಗಿವೆ.
ವಿಶ್ವದ ಅತಿದೊಡ್ಡ ವಿಮಾನನಿಲ್ದಾಣ(World’s Largest Airport)
ಇನ್ನು ವಿಶ್ವದ ಅತಿದೊಡ್ಡ ವಿಮಾನನಿಲ್ದಾಣ ಈ ಕಿಂಗ್ ಫಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ದಮ್ಮಾನ್ ವಿಮಾನ ನಿಲ್ದಾಣ ಎಂದು ಕೂಡ ಕರೆಯುತ್ತಾರೆ. ಇದು ಸೌದಿ ಅರೇಬಿಯಾದ ದಮ್ಮಾಮ್‌ಗೆ ಸೇವೆ ಸಲ್ಲಿಸುತ್ತಿರುವ ವಿಶ್ವದ ಅತಿದೊಡ್ಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ಸುಂದರವಾದ ವಿಮಾನ ನಿಲ್ದಾಣಕ್ಕೆ ಸೌದಿ ಅರೇಬಿಯಾದ ಮಾಜಿ ರಾಜ ಫಹದ್ ಇಬ್ನ್ ಅಬ್ದುಲಜೀಜ್ ಅವರ ಹೆಸರನ್ನು ಇಡಲಾಗಿದೆ. ನಗರದಿಂದ ಕೇವಲ ೩೧ ಕಿ.ಮೀ ದೂರದಲ್ಲಿರುವ ಈ ವಿಮಾನ ನಿಲ್ದಾಣವನ್ನು ೭೭೮ ಚದರ ಕಿ.ಮೀ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ.