ಸಾಂದೀಪನಿ ಶಿಷ್ಯವೇತನ 2025; ಅರ್ಜಿ ಸಲ್ಲಿಕೆ ಪ್ರಾರಂಭ

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು 2025-26ನೇ ಸಾಲಿಗೆ ಸಾಂದೀಪನಿ ಶಿಷ್ಯವೇತನ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸರ್ಕಾರವು ಸಾಂದೀಪನಿ ಶಿಷ್ಯವೇತನ ಯೋಜನೆಯು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳಿಗೆ ವೃತ್ತಿಪರ ಅಥವಾ ಉನ್ನತ ಶಿಕ್ಷಣ ವ್ಯಾಸಂಗ ಮಾಡಲು ಶೈಕ್ಷಣಿಕ ನೆರವನ್ನು ನೀಡುವ ಗುರಿ ಹೊಂದಿದೆ. ಸದರಿ ಯೋಜನೆಯ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು 2026ರ ಫೆಬ್ರವರಿ 28ರೊಳಗೆ SSP ಅಧಿಕೃತ ಜಾಲತಾಣ https://ssp.postmatric.karnataka.gov.in/ದ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ … More

ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ವಿಶೇಷ ಪ್ರೋತ್ಸಾಹಧನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಜನಾಂಗದ ವಿದ್ಯಾರ್ಥಿಗಳಿಗೆ 25,000 ರೂ.ವರೆಗೆ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಡಿ.31ರೊಳಗೆ ಸೇವಾಸಿಂಧು ಪೋರ್ಟಲ್ (https://sevasindhu.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು; … More

ಸಂಗೀತ ನೃತ್ಯ ಅಕಾಡೆಮಿಯಿಂದ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 2025-26ನೇ ಸಾಲಿನಲ್ಲಿ ಕಲಾಕ್ಷೇತ್ರದಲ್ಲಿ ಅಭ್ಯಸಿಸುತ್ತಿರುವ ಅಭ್ಯರ್ಥಿಗಳಿಗೆ ಶಿಷ್ಯವೇತನ ನೀಡಲು ಕನ್ನಡ ಸಂಸ್ಕೃತಿ ಇಲಾಖೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ನೃತ್ಯ, ಸುಗಮ ಸಂಗೀತ, ಕಥಾಕೀರ್ತನ ಮತ್ತು ಗಮಕ ಈ ಆರು ಕಲಾಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿರುವ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ಅರ್ಹರಿಗೆ ತಲಾ 10,000 ರೂ. ಮೊತ್ತದ ಶಿಷ್ಯವೇತನ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು ಆಯಾ ಜಿಲ್ಲೆಯ ಸಂಸೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ … More

ಮೆಕ್ಯಾನಿಕ್‌ಗಳ ಮಕ್ಕಳಿಗೆ ವಾರ್ಷಿಕ 6000ರೂ. ವಿದ್ಯಾರ್ಥಿವೇತನ

2025-26ನೇ ಸಾಲಿಗೆ ಮಹೀಂದ್ರ ಬಿಗ್ ಬಾಸ್ ನಯೀ ಪೆಹಚಾನ್ ವಿದ್ಯಾರ್ಥಿವೇತನಕ್ಕೆ ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ ಸಂಸ್ಥೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಸ್ವತಂತ್ರೋದ್ಯೋಗಿ ಟ್ರಾಕ್ಟರ್ ಮೆಕ್ಯಾನಿಕ್‌ಗಳ ಮಕ್ಕಳ ಶೈಕ್ಷಣಿಕ ಪ್ರಯಾಣವನ್ನು ಬೆಂಬಲಿಸಲು ವಾರ್ಷಿಕವಾಗಿ 6,000 ರೂ.ಗಳ ವಿದ್ಯಾರ್ಥಿವೇತನ ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಉಪಕ್ರಮವಾಗಿದೆ. ಅರ್ಹ ವಿದ್ಯಾರ್ಥಿಗಳು ನ.15ರೊಳಗೆ http://www.b4s.in/knah/MAMF1ನ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ: ಬೇಕಾದ ದಾಖಲೆಗಳು → ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ→ ಅರ್ಜಿದಾರರ ಗುರುತಿನ ಪುರಾವೆ (PAN, … More

ಮಹೀಂದ್ರಾ ಎಂಪವರ್‌ಹರ್ ವಿದಾರ್ಥಿವೇತನ; 9ನೇ ತರಗತಿಯಿಂದ ಸ್ನಾತಕೋತ್ತರ ಕೋರ್ಸ್‌ ವಿದ್ಯಾರ್ಥಿನಿಯರಿಗೆ

ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್‌ 2025-26ನೇ ಶೈಕ್ಷಣಿಕ ಸಾಲಿಗೆ ಮಹೀಂದ್ರಾ ಎಂಪವರ್‌ಹರ್ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 9 ರಿಂದ 12 ನೇ ತರಗತಿಯವರೆಗಿನ ಹಾಗೂ ಸಾಮಾನ್ಯ ವಿಷಯಗಳಲ್ಲಿ ಪದವಿಪೂರ್ವ(ಬಿಎ/ಬಿ.ಕಾಂ/ಬಿಎಸ್ಸಿ) ಅಥವಾ ಸ್ನಾತಕೋತ್ತರ ಕೋರ್ಸ್‌ಗಳನ್ನು ಓದುತ್ತಿರುವ ಪ್ರತಿಭಾನ್ವಿತ ಹೆಣ್ಣುಮಕ್ಕಳಿಗೆ ಬೆಂಬಲಿಸಲು ಮಹೀಂದ್ರಾ ಕಂಪನಿಯಿಂದ ಪ್ರತಿ ವಿದ್ಯಾರ್ಥಿನಿಯರಿಗೆ 5,500 ರೂ. ಆರ್ಥಿಕ ನೆರವು ನೀಡವ ಉಪಕ್ರಮವಾಗಿದೆ. ಆಸಕ್ತರು ನ.15ರೊಳಗೆ http://www.b4s.in/knah/MNM2ನ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಮುಖ್ಯ ದಿನಾಂಕಗಳು: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್‌ 15, … More

ಸಾಮಾನ್ಯ/ವೃತ್ತಿಪರ/ಡಿಪ್ಲೊಮಾ ಕೋರ್ಸ್‌ ಓದುತ್ತಿರುವ ಹೆಣ್ಣುಮಕ್ಕಳಿಗೆ “JK ಟೈರ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನ”

ಪ್ರಸ್ತುತ ಶೈಕ್ಷಣಿಕ ವರ್ಷದ ಜೆಕೆ ಟೈರ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನಕ್ಕೆ ಜೆಲೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್‌ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ, ವೃತ್ತಿಪರ ಪದವಿಪೂರ್ವ ಅಥವಾ ಡಿಪ್ಲೊಮಾ ಕೋರ್ಸ್‌ಗಳನ್ನು ಓದುತ್ತಿರುವ, ಭಾರೀ ವಾಹನ ಚಾಲಕರ ಹೆಣ್ಣುಮಕ್ಕಳು ಅರ್ಜಿ ಸಲ್ಲಿಸಲು ಅರ್ಹರು. ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ, ಕರ್ನಾಟಕ ಮತ್ತು ತಮಿಳುನಾಡು ನಿವಾಸಿಗಳಾಗಿರಬೇಕು. ಅರ್ಜಿ ಸಲ್ಲಿಸಲು ಅ.31ರವರೆಗೆ ಅವಕಾಶವಿದೆ. ಅರ್ಜಿ ಸಲ್ಲಿಸಲು https://www.b4s.in/knah/JKTS3ಗೆ ಭೇಟಿ ನೀಡಿ. ಮುಖ್ಯ ದಿನಾಂಕಗಳು: ಅರ್ಜಿ ಸಲ್ಲಿಕೆಗೆ ಕೊನೆ ದಿನ – ಅಕ್ಟೋಬರ್‌ 31, … More

ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿವೇತನ; 75,000ರೂ.ಗಳ ಆರ್ಥಿಕ ನೆರವು

ಪಾಮೋಲಿವ್ (ಇಂಡಿಯಾ) ಲಿಮಿಟೆಡ್ ವತಿಯಿಂದ 2025-26 ಸಾಲಿನ ಕೋಲ್ಗೇಟ್ ಕೀಪ್ ಇಂಡಿಯಾ ಸ್ಮೈಲಿಂಗ್ ವಿದ್ಯಾರ್ಥಿವೇತನಕ್ಕೆ ಕೋಲ್ಗೇಟ್-ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮತ್ತು ಬೆಂಬಲವನ್ನು ಒದಗಿಸಲು ಕೋಲ್ಗೇಟ್-ಪಾಮೋಲಿವ್ (ಇಂಡಿಯಾ) ಲಿಮಿಟೆಡ್‌ನ ಒಂದು ಉಪಕ್ರಮವಾಗಿದೆ. ಡೆಂಟಲ್ ಸರ್ಜರಿಯಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಪ್ರತಿ ವಿದ್ಯಾರ್ಥಿಗೆ 75,000 ರೂಪಾಯಿಗಳ ವಿದ್ಯಾರ್ಥಿವೇತನ ದೊರಕಲಿದೆ. ಅರ್ಜಿ ಸಲ್ಲಿಸಲು ನ.9 ಕೊನೆ ದಿನವಾಗಿದ್ದು, ಅರ್ಜಿ ಸಲ್ಲಿಸಲು www.b4s.in/knah/CKISSP7ಗೆ ಭೇಟಿ ನೀಡಿ. ಮುಖ್ಯ … More

ಕೋಟಕ್ ಕನ್ಯಾ ಸ್ಕಾಲರ್ಶಿಪ್: 1.5 ಲಕ್ಷಗಳ ವರೆಗೆ ವಿದ್ಯಾರ್ಥಿ ವೇತನ..!

ಪ್ರಸಕ್ತ 2025-26ನೇ ಸಾಲಿಗೆ ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳು ಮತ್ತು ಕೋಟಕ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದ ಸಿಎಸ್ಆರ್ ಯೋಜನೆಯಡಿಯಲ್ಲಿ ಕೋಟಕ್ ಕನ್ಯಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಸಮಾಜದ ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಶಿಕ್ಷಣ ಮತ್ತು ಜೀವನೋಪಾಯವನ್ನು ಉತ್ತೇಜಿಸಲು ಉದ್ದೇಶಿಸಿದೆ. ಈ ವಿದ್ಯಾರ್ಥಿವೇತನವು ಕಡಿಮೆ ಆದಾಯದ ಕುಟುಂಬಗಳ ಪ್ರತಿಭಾನ್ವಿತ ಹೆಣ್ಣು ಮಕ್ಕಳಿಗೆ 12ನೇ ತರಗತಿಯ ನಂತರ ವೃತ್ತಿಪರ ಶಿಕ್ಷಣದಲ್ಲಿ ಉನ್ನತ ಅಧ್ಯಯನ ಮಾಡಲು ಆರ್ಥಿಕ ನೆರವು ನೀಡುವ ಗುರಿ ಹೊಂದಿದೆ. ಅರ್ಜಿ ಸಲ್ಲಿಕೆಗೆ ಅ.31 ಕೊನೆ ದಿನವಾಗಿದ್ದು, ಆಸಕ್ತರು … More

ಹೆಣ್ಣು ಮಗಳನ್ನು ಹೊಂದಿರುವವರಿಗೆ CBSEಯಿಂದ ಪ್ರ.ತಿಂಗಳು 1000ರೂ. ವಿದ್ಯಾರ್ಥಿವೇತನ: ಅರ್ಜಿ ಆರಂಭ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವತಿಯಿಂದ 2024-25ನೇ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿಗಳಿಗೆ ಮೆರಿಟ್ ವಿದ್ಯಾರ್ಥಿವೇತನ ಯೋಜನೆಯಡಿ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಒಬ್ಬಳೇ ಹೆಣ್ಣು ಮಗಳನ್ನು ಹೊಂದಿರುವ ಪೋಷಕರು ಅರ್ಜಿ ಸಲ್ಲಿಸಲು ಅರ್ಹರು. 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಿಬಿಎಸ್‌ಇ ಸಂಯೋಜಿತ ಕಾಲೇಜಿನಲ್ಲಿ 11ನೇ ತರಗತಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರಿಂದ ಹೊಸ ಅರ್ಜಿ ಸಲ್ಲಿಕೆ ಹಾಗೂ 2024ರಲ್ಲಿ ಸಲ್ಲಿಸಿದ್ದ ಅರ್ಜಿಗಳ ನವೀಕರಣಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಅ.23 … More

HDFC Parivartan Scholarship: ಎಲ್ಲಾ ವಿದ್ಯಾರ್ಥಿಗಳಿಗೂ ಸಿಗುತ್ತೆ ₹15,000 ದಿಂದ ₹75,000ರೂ. ವಿದ್ಯಾರ್ಥಿವೇತನ!

ಹೆಚ್‌ಡಿಎಫ್‌ಸಿ ಬ್ಯಾಂಕಿನ ವತಿಯಿಂದ 2025-26 ಸಾಲಿಗೆ ಹೆಚ್‌ಡಿಎಫ್‌ ಬ್ಯಾಂಕ್‌ ಪರಿವರ್ತನಾ ಇಸಿಎಸ್‌ಎಸ್‌ ಪ್ರೋಗ್ರಾಮ್‌ನ ಅಡಿಯಲ್ಲಿ ಪರಿವರ್ತನಾ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. HDFC ಬ್ಯಾಂಕ್ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ನಿಟ್ಟಿನಲ್ಲಿ, ವೈಯಕ್ತಿಕ ಅಥವಾ ಕೌಟುಂಬಿಕ ತೊಂದರೆಗಳು ಮತ್ತು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ (HDFC Bank Parivartan’s Educational Crisis Scholarship Support) ನೆರವು ನೀಡುತ್ತಾ ಬಂದಿದೆ. ವಿದ್ಯಾರ್ಥಿವೇತನ ಕಾರ್ಯಕ್ರಮವು 1 ರಿಂದ 12 ನೇ ತರಗತಿಯವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೊಮಾ, ಐಟಿಐ, … More