ಹಟ್ಟಿ ಚಿನ್ನದ ಗಣಿ ಆಸ್ಪತ್ರೆಯಲ್ಲಿ ತಜ್ಞರು, ವೈದ್ಯಾಧಿಕಾರಿಗಳ ಭರ್ತಿ; ಸಂದರ್ಶನಕ್ಕೆ ಕರೆ
ಭಾರತದ ಅತಿ ಹೆಚ್ಚು ಚಿನ್ನ ಉತ್ಪಾದಕ ಕಂಪನಿಯಾಗಿರುವ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಆಸ್ಪತ್ರೆಯಲ್ಲಿ ತಜ್ಞರು ಹಾಗೂ ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ನೇರಸಂದರ್ಶನಕ್ಕೆ ಕರೆ ನೀಡಿದೆ. ಹಟ್ಟಿಯಲ್ಲಿರುವ 120 ಹಾಸಿಗೆಗಳ ಆಸ್ಪತ್ರೆಯಲ್ಲಿ ವಿವಿಧ ವೃಂದಗಳಲ್ಲಿ ಖಾಲಿ ಇರುವ ಜನರಲ್ ಸರ್ಜನ್-1, ಅನಸ್ಥೆಸಿಸ್ಟ್-1 ಹಾಗೂ ವೈದ್ಯಾಧಿಕಾರಿಗಳು-3 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾಗುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಕಾರ್ಯನಿರ್ವಾಹಕ … More