ಕೆಪಿಎಸ್‌ಸಿ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನೇಮಕಾತಿ; ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕ(ಗ್ರೂಪ್ ‘ಎ’) ಮತ್ತು ಲೆಕ್ಕ ಪರಿಶೋಧನಾಧಿಕಾರಿ(ಗ್ರೂಪ್ ‘ಬಿ’) ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆರ್‌ಪಿಸಿ 68 ಹುದ್ದೆಗಳು ಹಾಗೂ ಹೆಚ್‌ಕೆ 15 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಎಂ.ಕಾಂ, ಎಂಬಿಎ, ಸಂಬಂಧಿತ ವಿಷಯದಲ್ಲಿ ಸ್ನಾತಕೊತ್ತರ ಪದವಿ ಜೊತೆಗೆ ಇತರೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸೆ.26ರೊಳಗೆ ಕೆಪಿಎಸ್‌ಸಿಯ ಅಧಿಕೃತ ಜಾಲತಾಣ https://kpsconline.karnataka.gov.in/HomePage/index.htmlದ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ವೃಂದವಾರು ಹುದ್ದೆಗಳ … More