ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕ(ಗ್ರೂಪ್ ‘ಎ’) ಮತ್ತು ಲೆಕ್ಕ ಪರಿಶೋಧನಾಧಿಕಾರಿ(ಗ್ರೂಪ್ ‘ಬಿ’) ವೃಂದದ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಆರ್ಪಿಸಿ 68 ಹುದ್ದೆಗಳು ಹಾಗೂ ಹೆಚ್ಕೆ 15 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಎಂ.ಕಾಂ, ಎಂಬಿಎ, ಸಂಬಂಧಿತ ವಿಷಯದಲ್ಲಿ ಸ್ನಾತಕೊತ್ತರ ಪದವಿ ಜೊತೆಗೆ ಇತರೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಸೆ.26ರೊಳಗೆ ಕೆಪಿಎಸ್ಸಿಯ ಅಧಿಕೃತ ಜಾಲತಾಣ https://kpsconline.karnataka.gov.in/HomePage/index.htmlದ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ- ಆಗಸ್ಟ್ 28
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 26
- ಪೂರ್ವಭಾವಿ ಪರೀಕ್ಷಾ ದಿನಾಂಕ (ತಾತ್ಕಾಲಿಕ)
- ಹೈದ್ರಾಬಾದ್-ಕರ್ನಾಟಕ (HK)- ವೃಂದಕ್ಕೆ- ನವೆಂಬರ್ 29
- ಉಳಿಕೆ ಮೂಲ ವೃಂದಕ್ಕೆ (RPC)- ಡಿಸೆಂಬರ್ 06
ವೃಂದವಾರು ಹುದ್ದೆಗಳ ಮಾಹಿತಿ:
ಉಳಿಕೆ ಮೂಲ ವೃಂದ (RPC):
- ಸಹಾಯಕ ನಿಯಂತ್ರಕರು(Assistant Controller) – ಗ್ರೂಪ್ ‘ಎ’: 15 ಹುದ್ದೆಗಳು
- ಲೆಕ್ಕ ಪರಿಶೋಧನಾಧಿಕಾರಿ(Audit Officer) – ಗ್ರೂಪ್ ‘ಬಿ’: 53 ಹುದ್ದೆಗಳು
ಹೈದ್ರಾಬಾದ್ ಕರ್ನಾಟಕ ವೃಂದ (HK):
- ಲೆಕ್ಕ ಪರಿಶೋಧನಾಧಿಕಾರಿ(Audit Officer) – ಗ್ರೂಪ್ ‘ಬಿ’: 13 ಹುದ್ದೆಗಳು
- ಲೆಕ್ಕ ಪರಿಶೋಧನಾಧಿಕಾರಿ(Audit Officer) – ಬ್ಯಾಕ್ಲಾಗ್ ಹುದ್ದೆಗಳು: 02 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೆಳಗಿನ ಯಾವುದಾದರೂ ಒಂದು ವಿದ್ಯಾರ್ಹತೆ ಹೊಂದಿರಬೇಕು;
ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ(M.Com.)
ಅಥವಾ
ಎಂ.ಬಿ.ಎ. (ಆರ್ಥಿಕ – MBA Finance)
ಅಥವಾ
ಎಂ.ಬಿ.ಎ. (ಆರ್ಥಿಕ ನಿರ್ವಾಹಣೆ – MBA Financial Management) ಅಥವಾ
ಎಂ.ಬಿ.ಎ./ಎಂ.ಕಾಂ (ಆರ್ಥಿಕ ವಿಶ್ಲೇಷಣೆ – MBA/M.Com Financial Analysis)
ಅಥವಾ
ಯು.ಜಿ.ಸಿ ಯಿಂದ ‘ಆರ್ಥಿಕ’ (Finance) ವಿಷಯವನ್ನು ಒಂದು ವಿಷಯವನ್ನಾಗಿ ಅಭ್ಯಸಿಸಿರುವ ಕುರಿತು ಅಧಿಸೂಚನೆ ಹೊರಡಿಸಿರುವ ಯಾವುದೇ ಇತರ ಸ್ನಾತಕೋತ್ತರ ಪದವಿ
ಅಥವಾ
ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಸದಸ್ಯತ್ವ(Member of ICAI)
ಅಥವಾ
ಇನ್ಸ್ಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಅಸೋಸಿಯೇಟ್ ಸದಸ್ಯತ್ವ.
(ಗಮನಿಸಿ: ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾಯುತ್ತಿರುವ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಗೆ ಅರ್ಹರಾಗುತ್ತಾರೆ, ಆದರೆ ಮುಖ್ಯ ಪರೀಕ್ಷೆಗೆ ಅರ್ಜಿ ಸಲ್ಲಿಸುವಾಗ ಉತ್ತೀರ್ಣರಾದ ಪುರಾವೆ ಒದಗಿಸಬೇಕು).
ವಯೋಮಿತಿ:
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಪೂರೈಸಿರಬೇಕು ಮತ್ತು ಕೆಳಗಿನ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು (ಸರ್ಕಾರದ ಆದೇಶದನ್ವಯ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಒಳಗೊಂಡಂತೆ):
- ಕನಿಷ್ಠ ವಯೋಮಿತಿ- 21 ವರ್ಷಗಳು
- ಸಾಮಾನ್ಯ ಅರ್ಹತೆ(GM) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ- 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ- 43 ವರ್ಷಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ- 45 ವರ್ಷಗಳು
(ಮಾಜಿ ಸೈನಿಕರು, ಅಂಗವಿಕಲರು ಮತ್ತು ವಿಧವೆಯರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರುತ್ತದೆ).
ಆಯ್ಕೆ ಪ್ರಕ್ರಿಯೆ:
ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಎರಡು ಹಂತಗಳಲ್ಲಿ ನಡೆಯುತ್ತದೆ. ಈ ನೇಮಕಾತಿಗೆ ವ್ಯಕ್ತಿತ್ವ ಪರೀಕ್ಷೆಯನ್ನು (Interview) ತೆಗೆದುಹಾಕಲಾಗಿದೆ.
ಮುಖ್ಯ ಪರೀಕ್ಷೆಯ ಅಂಕಗಳ ಜೇಷ್ಠತೆ ಮತ್ತು ಮೀಸಲಾತಿ ನಿಯಮಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಪೂರ್ವಭಾವಿ ಪರೀಕ್ಷೆ (Preliminary Exam): ವಸ್ತುನಿಷ್ಠ ಬಹು ಆಯ್ಕೆ ಮಾದರಿಯಾಗಿದ್ದು, 2 ಪತ್ರಿಕೆಗಳನ್ನು ಒಳಗೊಂಡಿರುತ್ತದೆ (ಒಟ್ಟು 450 ಅಂಕಗಳು).
- ಪತ್ರಿಕೆ-1: ಸಾಮಾನ್ಯ ಅಧ್ಯಯನ (150 ಅಂಕಗಳು – 2 ಗಂಟೆ)
- ಪತ್ರಿಕೆ-2: ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣೆ (300 ಅಂಕಗಳು – 2 ಗಂಟೆ)
- ಮುಖ್ಯ ಪರೀಕ್ಷೆ (Main Exam): ವಿವರಣಾತ್ಮಕ ಲಿಖಿತ ಪರೀಕ್ಷೆಯಾಗಿದ್ದು, ಒಟ್ಟು 8 ಪತ್ರಿಕೆಗಳನ್ನು ಒಳಗೊಂಡಿರುತ್ತದೆ (ಒಟ್ಟು 2100 ಅಂಕಗಳು). ಇದರಲ್ಲಿ ಕನ್ನಡ ಮತ್ತು ಇಂಗ್ಲೀಷ್ ಭಾಷಾ ಪತ್ರಿಕೆಗಳು ಅರ್ಹತಾದಾಯಕವಾಗಿದ್ದು (Qualifying), ಉಳಿದ ಪತ್ರಿಕೆಗಳ ಅಂಕಗಳನ್ನು ಆಯ್ಕೆಗೆ ಪರಿಗಣಿಸಲಾಗುತ್ತದೆ.
ಸಂಬಳ:
| ಸಹಾಯಕ ನಿಯಂತ್ರಕ (ಗ್ರೂಪ್ ‘ಎ’) ಹುದ್ದೆಗೆ | ರೂ.83,700 ರಿಂದ 1,55,200/- |
| ಲೆಕ್ಕ ಪರಿಶೋಧನಾಧಿಕಾರಿ (ಗ್ರೂಪ್ ‘ಬಿ’) ಹುದ್ದೆಗೆ | ರೂ. 69,250 ರಿಂದ1,34,200/- |
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ(GM) ಅಭ್ಯರ್ಥಿಗಳಿಗೆ- ರೂ.600/-
ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ- ರೂ.300/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50/-
ಪ.ಜಾತಿ(SC), ಪ.ಪಂಗಡ(ST), ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ- ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?
ಹಂತ 1 ಅಭ್ಯರ್ಥಿಗಳು ಅಧಿಕೃತ ಜಾಲತಾಣ https://kpsconline.karnataka.gov.in/ಕ್ಕೆ ಬೇಟಿ ನೀಡಿ, ಒಂದು ಬಾರಿಯ ನೋಂದಣಿ (OTR – One Time Registration) ಮಾಡಿಕೊಳ್ಳಿ.
ಹಂತ 2 ಹುದ್ದೆಗೆ ಅರ್ಜಿ ಸಲ್ಲಿಸುವುದು(Apply to Post)
ಹಂತ 3 ಅರ್ಜಿ ಶುಲ್ಕ ಪಾವತಿ (Payment)
ಹಂತ 4 ಸ್ವೀಕೃತಿ ಪತ್ರ ಪಡೆಯುವುದು (Acknowledgement)
ಪ್ರಮುಖ ಲಿಂಕ್ಗಳು:
| ಅಧಿಕೃತ ಅಧಿಸೂಚನೆ(ಹೆಚ್ಕೆ) ಪಿಡಿಎಫ್ | ಡೌನ್ಲೋಡ್ ಮಾಡಿ |
| ಅಧಿಕೃತ ಅಧಿಸೂಚನೆ(ಆರ್ಪಿಸಿ) ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | kpsc.kar.nic.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |
Degree bA
Degree bA
Arunkumar. Ramappa mother