ಭಾರತ ಸರ್ಕಾರದ ಸಂವಹನ ಸಚಿವಾಲಯದ ಅಂಚೆ ಇಲಾಖೆಯು 2026ನೇ ಸಾಲಿನ ವೇಳಾಪಟ್ಟಿ-IIರ ಜುಲೈ ಮಾಹೆಯ ಗ್ರಾಮೀಣ ಡಾಕ್ ಸೇವಕ್(ಜಿಡಿಎಸ್) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ಕರ್ನಾಟಕ ವೃತ್ತಕ್ಕೆ 1116 ಸ್ಥಾನ ಸೇರಿ ನಾನಾ ವೃತ್ತಗಳೂ ಸೇರಿದಂತೆ ಒಟ್ಟು 23757 ಸ್ಥಾನಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆಗೆ ಸೆ.23ರವೆರೆಗೆ ಅವಕಾಶವಿದೆ. ಎಸ್ಸೆಸ್ಸೆಲ್ಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಇದೊಂದು ಉತ್ತಮ ಅವಕಾಶ. ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ https://indiapost.gov.in/gdsonlineengagement ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು:
- ಆನ್ಲೈನ್ ಏಕಕಾಲದ ನೋಂದಣಿ(ಓಟಿಆರ್) ಅವಧಿ- ಆಗಸ್ಟ್ 31 ರಿಂದ ಸೆಪ್ಟೆಂಬರ್ 19ರವೆರೆಗೆ
- ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ದಿನಾಂಕ- ಸೆಪ್ಟೆಂಬರ್ 02 ರಿಂದ ಸೆಪ್ಟೆಂಬರ್ 21(ಸಂಜೆ 17:00 ಗಂಟೆಯವರೆಗೆ)
- ಅರ್ಜಿ ತಿದ್ದುಪಡಿ ವಿಂಡೋ(Edit/Correction Window) ತೆರೆಯುವ ದಿನಾಂಕ- ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 24 (ಸಂಜೆ 17:00 ಗಂಟೆಯವರೆಗೆ)
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉತ್ತೀರ್ಣ ಅಂಕಗಳೊಂದಿಗೆ 10ನೇ ತರಗತಿ (Secondary School Examination) ಪಾಸಾಗಿರಬೇಕು.
ಇತರ ಅರ್ಹತೆಗಳು: ಕಂಪ್ಯೂಟರ್ ಜ್ಞಾನ, ಸೈಕಲ್ ಓಡಿಸುವ ಜ್ಞಾನ.
ವಯೋಮಿತಿ:
ಕನಿಷ್ಠ ವಯಸ್ಸು 18 ವರ್ಷಗಳು
ಗರಿಷ್ಠ ವಯಸ್ಸು 40 ವರ್ಷಗಳು (ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅನ್ವಯಿಸುವಂತೆ)
- ವಯೋಮಿತಿ ಸಡಿಲಿಕೆ:
- ಎಸ್ಸಿ/ಎಸ್ಟಿ (SC/ST): 5 ವರ್ಷಗಳು
- ಒಬಿಸಿ (OBC): 3 ವರ್ಷಗಳು
- ದಿವ್ಯಾಂಗ ಅಭ್ಯರ್ಥಿಗಳು (PwBD): 10 ವರ್ಷಗಳು (PwBD + OBC ಗೆ 13 ವರ್ಷಗಳು ಮತ್ತು PwBD + SC/ST ಗೆ 15 ವರ್ಷಗಳು)
- ಇಡಬ್ಲ್ಯೂಎಸ್ (EWS) ಅಭ್ಯರ್ಥಿಗಳಿಗೆ ಯಾವುದೇ ವಯೋಮಿತಿ ಸಡಿಲಿಕೆ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ(10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ)
- ಮೂಲ ದಾಖಲೆಗಳ ಪರಿಶೀಲನೆ
ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಸಂಬಳ/ಭತ್ಯೆ:
ಗ್ರಾಮೀಣ ಡಾಕ್ ಸೇವಕರಿಗೆ ಟೈಮ್ ರಿಲೇಟೆಡ್ ಕಂಟಿನ್ಯೂಟಿ ಅಲೋವೆನ್ಸ್ (TRCA) ರೂಪದಲ್ಲಿ ವೇತನ ಪಾವತಿಸಲಾಗುತ್ತದೆ:
- ಬ್ರಾಂಚ್ ಪೋಸ್ಟ್ಮಾಸ್ಟರ್ (BPM): ರೂ.12,000 ರಿಂದ ರೂ.29,380/-
- ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ABPM) / ಡಾಕ್ ಸೇವಕ್: ರೂ.10,000 ರಿಂದ ರೂ.24,470/-
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಇತರ ಅಭ್ಯರ್ಥಿಗಳಿಗೆ: ರೂ.100/- (ನೂರು ರೂಪಾಯಿಗಳು ಮಾತ್ರ)
ಮಹಿಳಾ, ಎಸ್ಸಿ/ಎಸ್ಟಿ, ದಿವ್ಯಾಂಗರು(PwBD) ಮತ್ತು ಟ್ರಾನ್ಸ್ವುಮೆನ್ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ.?
ಹಂತ-1 ಅಧಿಕೃತ ಜಾಲತಾಣ https://indiapost.gov.in/gdsonlineengagementಕ್ಕೆ ಭೇಟಿ
ಹಂತ-2 ಮುಖಪುಟದಲ್ಲಿ ಒದಗಿಸಲಾದ “Click Here to Register/Apply” ಲಿಂಕ್ ಬಟನ್ ಮೇಲೆ ಕ್ಲಿಕ್ಕಿಸುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
ಹಂತ-3 ಮುಂದೆ ಲಾಗಿನ್ ಮಾಡಿಕೊಂಡು ಅರ್ಜಿ ನಮೂನೆ ಭರ್ತಿ ಮಾಡಿ, ತಮಗೆ ಅನ್ವಯವಾಗುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಮುಖ ಲಿಂಕ್ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ | ಡೌನ್ಲೋಡ್ ಮಾಡಿ |
| ಹುದ್ದೆಗಳ ವಿವರವಿರುವ ಪಿಡಿಎಫ್ | ಡೌನ್ಲೋಡ್ ಮಾಡಿ |
| ಆನ್ಲೈನ್ ಅರ್ಜಿ ಲಿಂಕ್ | ಅರ್ಜಿ ಸಲ್ಲಿಸಿ |
| ಅಧಿಕೃತ ಜಾಲತಾಣ | indiapost.gov.in |
| ಮತ್ತಷ್ಟ ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |
Hi sir
Job please
Hlo
Railway job 10th base
Jgffy