Non Veg Food: ಶ್ರಾವಣ ಮಾಸದಲ್ಲಿ ನಾನ್‌ವೆಜ್ ತಿನ್ನಬಾರದು ಅನ್ನೋದ್ಯಾಕೆ?
ಶ್ರಾವಣ ಮಾಸ ಅಂದ್ರೆ ಮಳೆಯಾಗುವ ಸಮಯ. ತಂಪಾದ ಗಾಳಿ ಮತ್ತು ಮಳೆಯು ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ ವಾತಾವರಣ ಹೆಚ್ಚುಆರ್ದ್ರತೆಯಿಂದ ಕೂಡಿರುತ್ತದೆ. ಹೀಗಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಈ ವಾತಾವರಣದಲ್ಲಿ ಬೇಗ ಬೆಳೆಯುತ್ತವೆ. ಹೀಗಾಗಿ ಇದು ಸೋಂಕು, ಫುಡ್ ಪಾಯ್ಸನ್, ಅತಿಸಾರ ಮತ್ತು ಅಜೀರ್ಣದಂತಹ ಸಾಮಾನ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೆಚ್ಚಿನ ಆರ್ದ್ರತೆಯು ಜೀರ್ಣಕ್ರಿಯೆಯ (Digestion) ಮೇಲೆ ಪರಿಣಾಮ ಬೀರುತ್ತದೆ, ಅದಕ್ಕಾಗಿಯೇ ಅನೇಕ ಜನರು ಈ ಋತುವಿನಲ್ಲಿ ಮಾಂಸಾಹಾರಿ ಆಹಾರಗಳು ಮತ್ತು ಮೊಟ್ಟೆಗಳನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಹಿಂದೂ ಸಂಪ್ರದಾಯದ … More