ಭಾರತ ಸರ್ಕಾರದ ಒಂದು ಉದ್ಯಮವಾಗಿರುವ ಯುನೈಟೆಡ್ ಕಮರ್ಷಿಯಲ್ ಬ್ಯಾಂಕಿ(UCO Bank)ನಲ್ಲಿ ಜನರಲಿಸ್ಟ್ ಮತ್ತು ಸ್ಪೆಷಲಿಸ್ಟ್ ಕೇಡರ್ ಅಡಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಸೂಚನೆ ಬಿಡುಗಡೆಯಾಗಿದೆ.
ಜೆಎಂಜಿಎಸ್-I ಹಾಗೂ ಎಂಎಂಜಿಎಸ್-II ಸ್ಕೇಲ್ನಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್, ಟ್ರೆಜರಿ ಆಫೀಸರ್, ಚಾರ್ಟೆಡ್ ಅಕೌಂಟೆಂಟ್, ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್ ಹಾಗೂ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ ಇತರೆ ಹುದ್ದೆಗಳೂ ಸೇರಿದಂತೆ ಒಟ್ಟು 173 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಯಮಿತ ಆಧಾರದ ಮೇಲೆ ಭರತಿ ಮಾಡಿಕೊಳ್ಳಲಿದೆ. ಆಸಕ್ತರು ಫೆ.02ರೊಳಗೆ ಯುಕೋ ಬ್ಯಾಂಕಿನ ಅಧಿಕೃತ ಜಾಲತಾಣದ ಲಿಂಕ್ https://onlineappl.ucoonline.bank.in/SPE_RCER/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 13, 2026
ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 02, 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 02, 2026
ಹುದ್ದೆಗಳ ವಿವರ:
ಟ್ರೇಡ್ ಫೈನಾನ್ಸ್ ಆಫೀಸರ್ – 30 ಟ್ರೆಜರಿ ಆಫೀಸರ್ – 10 ಚಾರ್ಟೆಡ್ ಅಕೌಂಟೆಂಟ್ – 50 ಚಾರ್ಟೆಡ್ ಅಕೌಂಟೆಂಟ್ – 25 ನೆಟ್ವರ್ಕ್ ಅಡ್ಮಿನಿಸ್ಟ್ರೇಟರ್ – 05 ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ – 03 ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 03 ಸಾಫ್ಟ್ ವೇರ್ ಡೆವಲಪರ್ – 15 ಮುರೆಕ್ಸ್ ಡೆವಲಪರ್ – 05 ಫಿನಾಕಲ್ ಡೆವಲಪರ್ – 05 ಕ್ಲೌಡ್ ಎಂಜಿನಿಯರ್ – 03 AI/ML ಎಂಜಿನಿಯರ್ – 02 ಡೇಟಾ ಅನಾಲಿಸಿಸ್ಟ್ – 02 ಡೇಟಾ ಸೈಂಟಿಸ್ಟ್ – 02 ಸೈಬರ್ ಸೆಕ್ಯೂರಿಟಿ ಆಫೀಸರ್ – 03 ಡೇಟಾ ಪ್ರೈವಸಿ ಕಂಪ್ಲಿಯನ್ಸ್ ಆಫೀಸರ್ – 02 ಡೇಟಾ ಅನಾಲಿಸಿಸ್ಟ್ – 03 ಡೇಟಾ ಸೈಂಟಿಸ್ಟ್ – 03 ಡೇಟಾ ಎಂಜಿನಿಯರ್ – 02
ಒಟ್ಟು – 173 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ/ ಎಂಬಿಎ/ಸ್ನಾತಕೋತ್ತರ ಡಿಪ್ಲೊಮಾ/ಸಿಎ/ ಸಂಬಂಧಿತ ವಿಭಾಗದಲ್ಲಿ ಬಿ.ಇ/ಬಿ.ಟೆಕ್/ಎಂ.ಸಿ.ಎ/ಎಂ.ಎಸ್ಸಿ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ ಅಭ್ಯರ್ಥಿಗಳು ವಿವರವಾದ ವಿದ್ಯಾರ್ಹತೆ ಮಾಹಿತಿಗಳಿಗಾಗಿ ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.
ವಯೋಮಿತಿ:
01-01-2026ರಂತೆ;
✓ (MMGS-II) ಟ್ರೆಜರಿ ಆಫೀಸರ್, ಚಾರ್ಟೆಡ್ ಅಕೌಂಟೆಂಟ್, ಡೇಟಾ ಅನಾಲಿಸಿಸ್ಟ್, ಡೇಟಾ ಸೈಂಟಿಸ್ಟ್ ಹಾಗೂ ಡೇಟಾ ಎಂಜಿನಿಯರ್ ಹುದ್ದೆಗಳಿಗೆ;
ಕನಿಷ್ಠ ವಯಸ್ಸಿನ ಮಿತಿ – 22 ವರ್ಷಗಳು ಗರಿಷ್ಠ ವಯಸ್ಸಿನ ಮಿತಿ – 35 ವರ್ಷಗಳು
✓ (JMGS-I) ಉಳಿದ ಎಲ್ಲಾ ಹುದ್ದೆಗಳಿಗೂ; ಕನಿಷ್ಠ ವಯಸ್ಸಿನ ಮಿತಿ – 20 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ – 30 ವರ್ಷಗಳು