ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಕೋರ್ಸ್ ಗಳಿಗೆ 2024ನೇ ಸಾಲಿನಲ್ಲಿ ಪ್ರವೇಶಾತಿ ದಾಖಲೆ ಪರಿಶೀಲನೆ, ಮತ್ತು ಆನ್ ಲೈನ್ ಸೀಟು ಹಂಚಿಕೆಗಳ ಕುರಿತು ಮಾರ್ಗಸೂಚಿಗಳನ್ನು ಪ್ರಕಟಗೊಳಿಸಿದೆ.
2024-25 ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ NEET -2024 ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ UGNEET Counseling 2024 ರ ನೊಂದಣಿ ಪ್ರಾರಂಭವಾಗಿದೆ. UGNEET – 2024ರ ನೊಂದಣಿ ಪ್ರಕ್ರಿಯೆ ಮತ್ತು ದಾಖಲಾತಿ ಪರಿಶೀಲನೆ, ಅರ್ಹತಾ ಮಾನದಂಡಗಳು, ಪ್ರಮುಖ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.
UGNEET – 2024 ರ ಪ್ರಮುಖ ದಿನಾಂಕಗಳು:
- ಅಧಿಸೂಚನೆ ಪ್ರಕಟಣೆಯ ದಿನಾಂಕ – ಆಗಸ್ಟ್ 4, 2024
- ಆನ್ ಲೈನ್ ಮುಖಾಂತರ ನೋಂದಣಿಗಾಗಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 7, 2024
- ಆನ್ ಲೈನ್ ಮುಖಾಂತರ ನೋಂದಣಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 11, 2024
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ವಿಶೇಷ ಪ್ರವರ್ಗಗಳ ಪ್ರಮಾಣ ಪತ್ರ ಸಲ್ಲಿಸಲು ದಿನಾಂಕ – ಆಗಸ್ಟ್ 10, 2024 ( ಹೊಸದಾಗಿ ನೋಂದಣಿ ಮಾಡುವವರು ಮಾತ್ರ)
- ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯುವ ದಿನಾಂಕ – ಆಗಸ್ಟ್ 11, 2024 (ಮಧ್ಯಾಹ್ನ 3 ರಿಂದ 4 ರವರೆಗೆ)
- ವಿಕಲಚೇತನರ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆಯ ದಿನಾಂಕ – ಅಗಸ್ಟ್ 12, 2024
- ದಾಖಲಾತಿ ಪರಿಶೀಲನೆ(ಕರ್ನಾಟಕದ ಅಭ್ಯರ್ಥಿಗಳಿಗೆ) – ನಂತರ ತಿಳಿಸಲಾಗುವುದು.
- ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ದಿನಾಂಕ – ನಂತರ ತಿಳಿಸಲಾಗುವುದು.
ಅರ್ಹತೆಗಳು:
ಶೈಕ್ಷಣಿಕ ಅರ್ಹತೆ: 10+2 ಪರೀಕ್ಷೆಯನ್ನು ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದೊಂದಿಗೆ ಪಾಸಾಗಿರಬೇಕು.
NEET UG ಪರೀಕ್ಷೆ: NEET UG ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕರ್ನಾಟಕ ರಾಜ್ಯಕ್ಕೆ ನಿಗದಿಪಡಿಸಿದ ಕಟ್-ಆಫ್ ಅಂಕಗಳನ್ನು ಪಡೆದಿರಬೇಕು.
(ವಿವಿಧ ವರ್ಗದ ಅಭ್ಯರ್ಥಿಗಳಿಗೆ ಕಟ್ ಆಫ್ ಮತ್ತು ಅಂಕಗಳಲ್ಲಿ ಮೀಸಲಾತಿ ನೀಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ)
ಅರ್ಜಿ ಶುಲ್ಕ:
- ಸಾಮಾನ್ಯ/2A/2B/3A/3B – ₹2,500/-
- SC/ST/Cat-I/PWD – ₹500/-
- NRI/OCI/PIO/ ಹೊರ ರಾಜ್ಯದ ಅಭ್ಯರ್ಥಿಗಳಿಗೆ -₹5500/-
UGNEET 2024 Required Documents
- SSLC ಅಂಕಪಟ್ಟಿ
- PUC ಅಂಕಪಟ್ಟಿ
- UGNEET – 2024 ಅಂಕಪಟ್ಟಿ
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಇತರೆ ಅಗತ್ಯವಾದ ಮೀಸಲಾತಿ ಪ್ರಮಾಣ ಪತ್ರಗಳು
- ಫೋಟೋ, ಅಭ್ಯರ್ಥಿಯ ಸಹಿ, ಎಡಗೈ ಹೆಬ್ಬೆರಳಿನ ಗುರುತು (JPG) ಸ್ವರೂಪದಲ್ಲಿ
Step By Step Registration Process of NEET UG Counselling 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ..?
- ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ cetonline.karnataka.gov.in ಭೇಟಿ ನೀಡಿ:
- ಮುಖಪುಟದಲ್ಲಿ ಕಾಣುವ ‘ಪ್ರವೇಶ’ ಟ್ಯಾಬ್ ಕ್ಲಿಕ್ ಮಾಡಿ.
- ನಂತರ UGNEET 2024 ಆನ್ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ.
- ನೋಂದಣಿಯ ನಂತರ, ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
- NEET UG ಪರೀಕ್ಷೆಯಲ್ಲಿನ ನಿಮ್ಮ ರೋಲ್ ನಂಬರ್, ಹೆಸರು, ಜನ್ಮ ದಿನಾಂಕ, ವರ್ಗ, ಉಪಜಾತಿ, ಪದವಿ ಶೇಕಡಾವಾರು ಮತ್ತು ಇತರ ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
- ನಿಮ್ಮ ಆದ್ಯತೆಯ ಕಾಲೇಜುಗಳು ಮತ್ತು ಕೋರ್ಸ್‌ಗಳನ್ನು ಆಯ್ಕೆ ಮಾಡಿ.
- ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ, ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
- ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್‌ನಲ್ಲಿ ಪಾವತಿಸಿ.
- ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ, ಅರ್ಜಿಯನ್ನು ಸಲ್ಲಿಸಿ.
- ಸಲ್ಲಿಸಿದ ಅರ್ಜಿಯನ್ನು ಭವಿಷ್ಯದ ಉದ್ದೇಶಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.
Important Direct Links:
UGNEET 2024 Kannada Exam Bell Timing PDF(Dated on 10/08/2024) | Download |
UGNEET 2024 Kannada Exam Hall Ticket Link | Hall Ticket Here |
UGNEET 2024 Online Application Last Date Extended Notice PDF(Dated on 10/08/2024) | Download |
UGNEET 2024 Document Verification Notice PDF(Dated on 10/08/2024) | Download |
UGNEET 2024 e-Information Bulletin PDF(Dated on 07/08/2024) | Download |
UGNEET 2024 New Application Link | Apply Now |
UGNEET 2024 New Application IMP Notice PDF(Dated on 04/08/2024) | Download |
Official website | Kea.Kar.Nic.in |
More Updates | Karnataka Help.in |