WhatsApp Channel Join Now
Telegram Group Join Now

UGNEET Counselling 2024: ಅಧಿಸೂಚನೆ ಬಿಡುಗಡೆ, ಕೌನ್ಸಿಲಿಂಗ್ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಅಗತ್ಯ ದಾಖಲೆಗಳ ಬಗೆಗಿನ ಸಂಪೂರ್ಣ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ ಕೋರ್ಸ್ ಗಳಿಗೆ 2024ನೇ ಸಾಲಿನಲ್ಲಿ ಪ್ರವೇಶಾತಿ ದಾಖಲೆ ಪರಿಶೀಲನೆ, ಮತ್ತು ಆನ್ ಲೈನ್ ಸೀಟು ಹಂಚಿಕೆಗಳ ಕುರಿತು ಮಾರ್ಗಸೂಚಿಗಳನ್ನು ಪ್ರಕಟಗೊಳಿಸಿದೆ.

2024-25 ನೇ ಸಾಲಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ NEET -2024 ಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು‌ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ UGNEET Counseling 2024 ರ ನೊಂದಣಿ ಪ್ರಾರಂಭವಾಗಿದೆ. UGNEET – 2024ರ ನೊಂದಣಿ ಪ್ರಕ್ರಿಯೆ ಮತ್ತು ದಾಖಲಾತಿ ಪರಿಶೀಲನೆ, ಅರ್ಹತಾ ಮಾನದಂಡಗಳು, ಪ್ರಮುಖ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.

Ugneet Counselling 2024
Ugneet Counselling 2024

UGNEET – 2024 ರ ಪ್ರಮುಖ ದಿನಾಂಕಗಳು:

  • ಅಧಿಸೂಚನೆ ಪ್ರಕಟಣೆಯ ದಿನಾಂಕ – ಆಗಸ್ಟ್ 4, 2024
  • ಆನ್ ಲೈನ್ ಮುಖಾಂತರ ನೋಂದಣಿಗಾಗಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 7, 2024
  • ಆನ್ ಲೈನ್ ಮುಖಾಂತರ ನೋಂದಣಿಗಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಆಗಸ್ಟ್ 11, 2024
  • ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಗೆ ವಿಶೇಷ ಪ್ರವರ್ಗಗಳ ಪ್ರಮಾಣ ಪತ್ರ ಸಲ್ಲಿಸಲು ದಿನಾಂಕ – ಆಗಸ್ಟ್ 10, 2024 ( ಹೊಸದಾಗಿ ನೋಂದಣಿ ಮಾಡುವವರು ಮಾತ್ರ)
  • ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯುವ ದಿನಾಂಕ – ಆಗಸ್ಟ್ 11, 2024 (ಮಧ್ಯಾಹ್ನ 3 ರಿಂದ 4 ರವರೆಗೆ)
  • ವಿಕಲಚೇತನರ ಅಭ್ಯರ್ಥಿಗಳಿಗೆ ವೈದ್ಯಕೀಯ ತಪಾಸಣೆಯ ದಿನಾಂಕ – ಅಗಸ್ಟ್ 12, 2024
  • ದಾಖಲಾತಿ ಪರಿಶೀಲನೆ(ಕರ್ನಾಟಕದ ಅಭ್ಯರ್ಥಿಗಳಿಗೆ) – ನಂತರ ತಿಳಿಸಲಾಗುವುದು.
  • ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ದಿನಾಂಕ – ನಂತರ ತಿಳಿಸಲಾಗುವುದು.

ಅರ್ಹತೆಗಳು:

ಶೈಕ್ಷಣಿಕ ಅರ್ಹತೆ: 10+2 ಪರೀಕ್ಷೆಯನ್ನು ವಿಜ್ಞಾನ ವಿಷಯಗಳಾದ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದೊಂದಿಗೆ ಪಾಸಾಗಿರಬೇಕು.

NEET UG ಪರೀಕ್ಷೆ: NEET UG ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಕರ್ನಾಟಕ ರಾಜ್ಯಕ್ಕೆ ನಿಗದಿಪಡಿಸಿದ ಕಟ್-ಆಫ್ ಅಂಕಗಳನ್ನು ಪಡೆದಿರಬೇಕು.

(ವಿವಿಧ ವರ್ಗದ ಅಭ್ಯರ್ಥಿಗಳಿಗೆ ಕಟ್ ಆಫ್ ಮತ್ತು ಅಂಕಗಳಲ್ಲಿ ಮೀಸಲಾತಿ ನೀಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆಯನ್ನು ಪರಿಶೀಲಿಸಿ)

ಅರ್ಜಿ ಶುಲ್ಕ:

  • ಸಾಮಾನ್ಯ/2A/2B/3A/3B – ₹2,500/-
  • SC/ST/Cat-I/PWD – ₹500/-
  • NRI/OCI/PIO/ ಹೊರ ರಾಜ್ಯದ ಅಭ್ಯರ್ಥಿಗಳಿಗೆ -₹5500/-

UGNEET 2024 Required Documents

  • SSLC ಅಂಕಪಟ್ಟಿ
  • PUC ಅಂಕಪಟ್ಟಿ
  • UGNEET – 2024 ಅಂಕಪಟ್ಟಿ
  • ಆದಾಯ ಮತ್ತು ಜಾತಿ ಪ್ರಮಾಣ ಪತ್ರ
  • ಇತರೆ ಅಗತ್ಯವಾದ ಮೀಸಲಾತಿ ಪ್ರಮಾಣ ಪತ್ರಗಳು
  • ಫೋಟೋ, ಅಭ್ಯರ್ಥಿಯ ಸಹಿ, ಎಡಗೈ ಹೆಬ್ಬೆರಳಿನ ಗುರುತು (JPG) ಸ್ವರೂಪದಲ್ಲಿ

Step By Step Registration Process of NEET UG Counselling 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ..?

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ಗೆ cetonline.karnataka.gov.in ಭೇಟಿ ನೀಡಿ:
  • ಮುಖಪುಟದಲ್ಲಿ ಕಾಣುವ ‘ಪ್ರವೇಶ’ ಟ್ಯಾಬ್ ಕ್ಲಿಕ್ ಮಾಡಿ.
  • ನಂತರ UGNEET 2024 ಆನ್ಲೈನ್ ಅಪ್ಲಿಕೇಶನ್ ಲಿಂಕ್ ಕ್ಲಿಕ್ ಮಾಡಿ.
  • ನೋಂದಣಿಯ ನಂತರ, ನಿಮ್ಮ ಬಳಕೆದಾರಹೆಸರು ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ.
  • NEET UG ಪರೀಕ್ಷೆಯಲ್ಲಿನ ನಿಮ್ಮ ರೋಲ್ ನಂಬರ್, ಹೆಸರು, ಜನ್ಮ ದಿನಾಂಕ, ವರ್ಗ, ಉಪಜಾತಿ, ಪದವಿ ಶೇಕಡಾವಾರು ಮತ್ತು ಇತರ ಅಗತ್ಯ ಮಾಹಿತಿಯನ್ನು ಸರಿಯಾಗಿ ನಮೂದಿಸಿ.
  • ನಿಮ್ಮ ಆದ್ಯತೆಯ ಕಾಲೇಜುಗಳು ಮತ್ತು ಕೋರ್ಸ್‌ಗಳನ್ನು ಆಯ್ಕೆ ಮಾಡಿ.
  • ನಿಮ್ಮ ಪಾಸ್‌ಪೋರ್ಟ್ ಗಾತ್ರದ ಫೋಟೋ, ಸಹಿ, ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೋಡ್‌ನಲ್ಲಿ ಪಾವತಿಸಿ.
  • ಎಲ್ಲಾ ಮಾಹಿತಿಯನ್ನು ಪರಿಶೀಲಿಸಿದ ನಂತರ, ಅರ್ಜಿಯನ್ನು ಸಲ್ಲಿಸಿ.
  • ಸಲ್ಲಿಸಿದ ಅರ್ಜಿಯನ್ನು ಭವಿಷ್ಯದ ಉದ್ದೇಶಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.

Important Direct Links:

UGNEET 2024 Kannada Exam Bell Timing PDF(Dated on 10/08/2024)Download
UGNEET 2024 Kannada Exam Hall Ticket LinkHall Ticket Here
UGNEET 2024 Online Application Last Date Extended Notice PDF(Dated on 10/08/2024)Download
UGNEET 2024 Document Verification Notice PDF(Dated on 10/08/2024)Download
UGNEET 2024  e-Information Bulletin PDF(Dated on 07/08/2024)Download
UGNEET 2024 New Application LinkApply Now
UGNEET 2024 New Application IMP Notice PDF(Dated on 04/08/2024)Download
Official websiteKea.Kar.Nic.in
More UpdatesKarnataka Help.in

Leave a Comment