Gruha Lakshmi Scheme : ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ (Gruha Lakshmi) ಯೋಜನೆಯ 10ನೇ ಕಂತು ಈಗಾಗಲೇ ಎಲ್ಲಾ ಮಹಿಳೆಯರ ಖಾತೆಗೆ ಸರ್ಕಾರವು ವರ್ಗಾವಣೆ ಮಾಡಲಾಗಿದ್ದು. 11ನೇ ಕಂತಿನ ಹಣವು ಯಾವಾಗ ಬರಲಿದೆ ಮತ್ತು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅವರ ಅರ್ಜಿ ಮತ್ತು ಹಣ ಪಾವತಿ ಸ್ಥಿತಿಯನ್ನು ಪತ್ತೆ ಹಚ್ಚುವುದು ಹೇಗೆ ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಲಾಗಿದೆ.
ಮಹಿಳೆಯರ ಸಬಲೀಕರಣ, ಆರ್ಥಿಕ ವಾಗಿ ಅಭಿವೃದ್ಧಿ ಮಾಡಬೇಕು ಎಂಬ ಉದ್ದೇಶ ದಿಂದ ರಾಜ್ಯ ಸರಕಾರವು ಗೃಹಲಕ್ಷ್ಮಿ (Gruha Lakshmi) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಮಹಿಳೆಯರು ತಿಂಗಳಿಗೆ 2 ಸಾವಿರ ರೂಗಳನ್ನು ಪಡೆಯುತ್ತಿದ್ದು, ಈಗಾಗಲೇ 10 ಕಂತಿನ ಮೂಲಕ 20,000 ಹಣವನ್ನು ಅರ್ಹತ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಲೋಕಸಭಾ ಚುನಾವಣೆಯ ಬಳಿಕ ಜೂನ್ ಮತ್ತು ಜುಲೈ ತಿಂಗಳಿನ ಹಣವು ಮಹಿಳೆಯರಿಗೆ ಬಂದಿಲ್ಲ, ಎಂಬುವುದು ಸಾಕಷ್ಟು ಚರ್ಚೆ ಆಗುತ್ತಿತ್ತು ಆದರೆ ಸರ್ಕಾರವು ಈಗ 11ನೇ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಿದೆ. ಆಧಾರ್ ಕಾರ್ಡ್ ಆಪ್ಡೆಟ್, ಇ- ಕೆವೈಸಿ, ರೇಷನ್ ಕಾರ್ಡ್ ಲಿಂಕ್, ಬ್ಯಾಂಕ್ ಖಾತೆ ಲಿಂಕ್, ಇತ್ಯಾದಿ ಕೆಲಸ ಆಗಿದ್ದರೆ ಮಾತ್ರ ಗೃಹಲಕ್ಷ್ಮಿ ಯ ಹಣ ಖಾತೆಗೆ ಜಮೆ ಆಗಲಿದೆ.

Add as a Preferred Source on Google

