UGCET-2025 ರ ಪ್ರವೇಶಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಅನ್ನು ಜು.8ರಂದು ಪ್ರಕಟಿಸಿತ್ತು, ಇದೀಗ ಮೊದಲನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಯುಜಿಸಿಇಟಿ-2025 ಮೊದಲನೇ ಸುತ್ತಿನ ಸೀಟು ಹಂಚಿಕೆಯ ಪ್ರಕ್ರಿಯೆಯನ್ನು ಜು.08 ರಿಂದ 25 ರವರೆಗೆ (ಆಯ್ಕೆ ನಮೂದು, ಅಣಕು ಫಲಿತಾಂಶ, ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ) 3 ಹಂತಗಳಲ್ಲಿ ನಡೆಸಲಾಗುವುದು ಎಂದು ವೇಳಾಪಟ್ಟಿಯಲ್ಲಿ ಕೆಇಎ ತಿಳಿಸಿದೆ.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಹೋದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
UGCET-2025ರ ಆಯ್ಕೆ ನಮೂದು ಸಲ್ಲಿಕೆ
ಎಂಜಿನಿಯರಿಂಗ್, ಕೃಷಿ ಮತ್ತು ಪಶುವೈದ್ಯಕೀಯ ಕೋರ್ಸ್‌ಗಳಿಗೆ ಸಾಮಾನ್ಯ, ಕಲ್ಯಾಣ ಕರ್ನಾಟಕ ಮತ್ತು ವಿಶೇಷ ವರ್ಗಗಳ ಸೀಟುಗಳ ಹಂಚಿಕೆಯ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಪರಿಶೀಲಿಸಿ ವಿದ್ಯಾರ್ಥಿಗಳು ಜು.8 ರಿಂದ 15ರವರೆಗೆ ತಮ್ಮ ಆಯ್ಕೆಯ ಕ್ರಮಾನುಸಾರ ಕಾಲೇಜುಗಳನ್ನು ಆಯ್ಕೆ ಮಾಡಿ ಆಯ್ಕೆ ನಮೂದು ಅನ್ನು ಸಲ್ಲಿಸಬಹುದು.
UGCET-2025ರ ಅಣುಕು ಸೀಟು ಹಂಚಿಕೆಯ ಫಲಿತಾಂಶ
ವಿದ್ಯಾರ್ಥಿಗಳ ಆಯ್ಕೆಯ ಕ್ರಮಾನುಸಾರ ಕಾಲೇಜುಗಳನ್ನು ಆಯ್ಕೆ ಮಾಡಿ ಆಯ್ಕೆ ನಮೂದು ಸಲ್ಲಿಸಿದ 3 ದಿನಗಳ ಬಳಿಕ ಜು.19ರಂದು ಅಣುಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಿ, ನಂತರ ಜು.19ರಿಂದ 22ವರೆಗೆ ವಿದ್ಯಾರ್ಥಿಗಳಿಗೆ ಇಚ್ಚೆ-ಆಯ್ಕೆಗಳನ್ನು ಸೇರಿಸಲು/ಅಳಿಸಲು/ಬದಲಾಯಿಸಲು ಮಾರ್ಪಡಿಸಲು 3 ದಿನಗಳ ಕಾಲಾವಕಾಶ ನೀಡಲಾಗುವುದು.
UGCET-2025ರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟ
ಮೇಲಿನ ಎರಡು ಸೀಟು ಹಂಚಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಮೂರು ದಿನಗಳ ನಂತರ ದಿನಾಂಕ ಜು.25ರಂದು ಬೆಳಿಗ್ಗೆ 11 ಗಂಟೆಯ ನಂತರ UGCET-2025ರ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ(KCET 1st Round Seat Allotment 2025 Results)ವನ್ನು ಪ್ರಕಟಿಸಲಾಗುತ್ತದೆ.
ಸೀಟು ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಬಹುದು:
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಸಂಬಂಧಿಸಿದ ಕಾಲೇಜುಗಳಲ್ಲಿ ನಡೆಸಲಾಗುವ ದಾಖಲಾತಿ ಪರಿಶೀಲನೆಯಲ್ಲಿ ಭಾಗವಹಿಸಿ ಪ್ರವೇಶಾತಿ ಪಡೆಯಬಹುದು.
Important Direct Links:
UGCET 1st Round Seat Allotment 2025 Schedule PDF | Download |
Official Website | kea.kar.nic.in |
More Updates | KarnatakaHelp.in |