ಪ್ರಸಕ್ತ ಸಾಲಿನ ಯುಜಿ-ಸಿಇಟಿ ಪ್ರವೇಶಾತಿ ಸಂಬಂಧ ಎರಡನೇ ಸುತ್ತಿನ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ಶನಿವಾರ(ಆ.30) ಬಿಡುಗಡೆ ಮಾಡಿದೆ.
ಇಂಜಿನಿಯರಿಂಗ್ ಸೇರಿದಂತೆ ಮುಂತಾದ ಕೋರ್ಸುಗಳ ಪ್ರವೇಶಾತಿಗಾಗಿ ಎರಡನೇ ಸುತ್ತಿನ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಹಾಗೂ ಕಟ್ ಆಫ್ ಪಟ್ಟಿಯನ್ನು ಕೆಇಎ ಅಧಿಕೃತ https://cetonline.karnataka.gov.in/kea/ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.