ಕೇಂದ್ರ ಲೋಕಸೇವಾ ಆಯೋಗ ಸೆ.14ರಂದು ನಡೆಸಲಿರುವ ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ-IIರ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ.
ಬೆಳಿಗ್ಗೆ 09 ರಿಂದ 11ರವರೆಗೆ ಇಂಗ್ಲಿಷ್ ಪತ್ರಿಕೆ, ಮಧ್ಯಾಹ್ನ 12:30 ರಿಂದ 02:30 ರವರೆಗೆ ಸಾಮಾನ್ಯ ಜ್ಞಾನ ಪತ್ರಿಕೆ ಮತ್ತು ಸಂಜೆ 04 ರಿಂದ 06 ರವರೆಗೆ ಪ್ರಾಥಮಿಕ ಗಣಿತ ಪತ್ರಿಕೆ ಮೂರು ಪಾಳಿಯಲ್ಲಿ ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಆಯೋಗದ ಜಾಲತಾಣ https://upsconline.nic.in/ದಲ್ಲಿ ಪ್ರಕಟಿಸಲಾಗಿದೆ ಎಂದು ಆಯೋಗ ಹೊರಡಿಸಿದ ಪ್ರಕಟಣೆ ತಿಳಿಸಿದೆ.
ಇದು ಗೊತ್ತರಲಿ....
• ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ 30 ನಿಮಿಷಗಳ ಮೊದಲು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು.
• OMR ಉತ್ತರ ಪತ್ರಿಕೆ ಮತ್ತು ಹಾಜರಾತಿ ಪಟ್ಟಿಯನ್ನು ಕಪ್ಪು ಬಾಲ್ ಪಾಯಿಂಟ್ ಪೆನ್ನಿನಿಂದ ಮಾತ್ರ ಭರ್ತಿ ಮಾಡಬೇಕು.
• ಪರೀಕ್ಷೆಗೆ ಹಾಜರಾಗುವ ಮುನ್ನ ನಿಮ್ಮ ಪಾಸ್‌ಪೋರ್ಟ್ ಗಾತ್ರದ ಪೋಟೋ ಜೊತೆಗೆ ನಿಗದಿ ಸರ್ಕಾರಿ ಗುರುತಿನ ಚೀಟಿ( ಉದಾ: ಆಧಾರ್ ಕಾರ್ಡ್) ತೆಗೆದುಕೊಂಡು ಹೋಗಿ
How to Download UPSC CDS 2 Admit Card 2025
- ಕೇಂದ್ರ ಲೋಕಸೇವಾ ಆಯೋಗದ ಅಧಿಕೃತ ಜಾಲತಾಣ https://upsconline.nic.in/ಗೆ ಭೇಟಿ ನೀಡಿ.
- ಮುಂದೆ “Mobile & OTP” ಅಥವಾ “URN & Password” ಅಥವಾ “Email & Password” ಮೂಲಕ ಲಾಗಿನ್ ಮಾಡಿಕೊಳ್ಳಿ
- ನಂತರ ಪ್ರವೇಶ ಪತ್ರಗಳು ವಿಭಾಗದಲ್ಲಿ ಲಿಂಕ್ ಕ್ಲಿಕ್ ಮಾಡುವ ಮೂಲಕ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.
ಗಮನಿಸಿ: ಅಭ್ಯರ್ಥಿಗಳಿಗೆ ಈ-ಪ್ರವೇಶ ಪತ್ರದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ತಕ್ಷಣವೇ ಆಯೋಗದ ಅಧಿಕೃತ ಇ-ಮೇಲ್ e16section-upsc@gov.in ವಿಳಾಸಕ್ಕೆ ಸಂಪರ್ಕಿಸಬಹುದು.
Important Direct Links:
| UPSC CDS 2 Admit Card 2025 Notice PDF (Dated on 4/9/2025) | Download |
| UPSC CDS 2 Admit Card 2025 Link | Download |
| Official Website | upsc.gov.in |
| More Updates | KarnatakaHelp.in |