ಕೇಂದ್ರ ಲೋಕಸೇವಾ ಆಯೋಗ(UPSC)ವು 2026ನೇ ಸಾಲಿನ ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ(CMSE)ಯ ನೋಂದಣಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಪರೀಕ್ಷೆ ಆ.02ರಂದು ಜರುಗಲಿದೆ. ಸದರಿ ಪರೀಕ್ಷೆಯ ಮೂಲಕ ಒಟ್ಟು 1358 ವಿವಿಧ ವೃಂಧದ ವೈದ್ಯಕೀಯ ಅಧಿಕಾರಿ ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಎಂಬಿಬಿಎಸ್ ಉತ್ತೀರ್ಣರಾಗಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಮಾ.31ರೊಳಗೆ ಯುಪಿಎಸ್ಸಿ ಅಧಿಕೃತ ವೆಬ್ಸೈಟ್ https://upsconline.nic.in/loginನ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಮಾರ್ಚ್ 11, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್ 31, 2026
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಮಾರ್ಚ್ 31, 2026
- ಪರೀಕ್ಷಾ ದಿನಾಂಕ – ಆಗಸ್ಟ್ 02, 2026
ಖಾಲಿ ಇರುವ ತಾತ್ಕಾಲಿಕ ಹುದ್ದೆಗಳ ವಿವರ:
ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು ಗ್ರೇಡ್, ಕೇಂದ್ರ ಆರೋಗ್ಯ ಸೇವೆ ವೈದ್ಯಕೀಯ ಅಧಿಕಾರಿಗಳು ಸಬ್-ಗ್ರೇಡ್ – 864 ಹುದ್ದೆಗಳು
ರೈಲ್ವೆಯಲ್ಲಿ ಸಹಾಯಕ ವಿಭಾಗೀಯ ವೈದ್ಯಕೀಯ ಅಧಿಕಾರಿಗಳು – 450 ಹುದ್ದೆಗಳು
ನವದೆಹಲಿ ಮುನ್ಸಿಪಲ್ ಕೌನ್ಸಿಲ್ನಲ್ಲಿ ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿಗಳು – 14 ಹುದ್ದೆಗಳು
ದೆಹಲಿ ಮಹಾನಗರ ಪಾಲಿಕೆಯಲ್ಲಿ ಜನರಲ್ ಡ್ಯೂಟಿ ವೈದ್ಯಕೀಯ ಅಧಿಕಾರಿ ದರ್ಜೆ-II – 30 ಹುದ್ದೆಗಳು
ಒಟ್ಟು – 1358 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಅಂತಿಮ ಎಂಬಿಬಿಎಸ್ ಲಿಖಿತ ಮತ್ತು ಪ್ರಾಯೋಗಿಕ ಭಾಗಗಳಲ್ಲಿ ಉತ್ತೀರ್ಣರಾಗಿರಬೇಕು.
• ಅಂತಿಮ ಎಂಬಿಬಿಎಸ್ ಪರೀಕ್ಷೆಗೆ ಹಾಜರಾಗಿರುವ/ಅಥವಾ ಇನ್ನೂ ಹಾಜರಾಗದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು. ಅಂತಹ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದರೆ ಪರೀಕ್ಷೆಗೆ ಪ್ರವೇಶ ಪಡೆಯುತ್ತಾರೆ.
ವಯೋಮಿತಿ:
1-08-2026 ರಂತೆ;
✓ ಸಾಮಾನ್ಯ ಕರ್ತವ್ಯ ವೈದ್ಯಕೀಯ ಅಧಿಕಾರಿಗಳು ಗ್ರೇಡ್, ಕೇಂದ್ರ ಆರೋಗ್ಯ ಸೇವೆ ವೈದ್ಯಕೀಯ ಅಧಿಕಾರಿಗಳು ಸಬ್-ಗ್ರೇಡ್ ಹುದ್ದೆಗಳಿಗೆ – ಗರಿಷ್ಠ ವಯಸ್ಸಿನ ಮಿತಿ 35 ವರ್ಷಗಳು
✓ ಉಳಿದ ಎಲ್ಲಾ ಹುದ್ದೆಗಳಿಗೂ – ಗರಿಷ್ಠ ವಯಸ್ಸಿನ ಮಿತಿ 32 ವರ್ಷಗಳು
ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು.
ಆಯ್ಕೆ ವಿಧಾನ:
- ಭಾಗ-I ಲಿಖಿತ ಪರೀಕ್ಷ – (500 ಅಂಕಗಳು)
- ಭಾಗ-II ವ್ಯಕ್ತಿತ್ವ ಪರೀಕ್ಷೆ– (100 ಅಂಕಗಳು)
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ₹56,100-1,77,500 ವರೆಗೆ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ – ₹200
ಅರ್ಜಿ ಸಲ್ಲಿಸುವ ವಿಧಾನ
• ಅಭ್ಯರ್ಥಿಗಳು ಯುಪಿಎಸ್ಸಿ ಅಧಿಕೃತ ವೆಬ್ಸೈಟ್ https://upsc.gov.in/ ಗೆ ಭೇಟಿ ನೀಡಿ.
• ನಂತರ *ಹೊಸದೇನಿದೆ* ಶೀರ್ಷಿಕೆಯ ಕೆಳಗೆ ನೀಡಲಾಗಿರುವ “ಪರೀಕ್ಷಾ ಅಧಿಸೂಚನೆ: ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ, 2026(Exam Notification: Combined Medical Services Examination, 2026)” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ *ಸಂಯೋಜಿತ ವೈದ್ಯಕೀಯ ಸೇವೆಗಳ ಪರೀಕ್ಷೆ, 2026* ವಿಭಾಗದಲ್ಲಿ ನೀಡಲಾಗಿರುವ “ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯ ಮೇಲೆ ಟ್ಯಾಪ್ ಮಾಡಿ.
• ಇದಾದ ಬಳಿಕ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ.

• ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.
• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
| Official Notification PDF | Download |
| Online Application Form Link | Apply Now |
| Official Website | https://upsc.gov.in/ |
| More Updates | KarnatakaHelp.in |



