UPSC CSE Mains 2025: ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ

By Shwetha Chidambar

Published On:

IST

ಫಾಲೋ ಮಾಡಿ

UPSC CSE Mains 2025 Schedule
UPSC CSE Mains 2025 Schedule

ಕೇಂದ್ರ ಲೋಕಸೇವಾ ಆಯೋಗವು (UPSC) 2025ರ ನಾಗರಿಕ ಸೇವೆ ಹುದ್ದೆಗಳ ನೇಮಕಾತಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಆಯೋಗವು ಜ.22 ರಂದು 979 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. UPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮೇ 25 ರಂದು ಯಶಸ್ವಿಯಾಗಿ ನಡೆಸಿ. ಫಲಿತಾಂಶವನ್ನು ಜೂ.11ರಂದು ಪ್ರಕಟಿಸಲಾಗಿತ್ತು. ಮೊದಲ ಹಂತದ ಪೂರ್ವಭಾವಿ ಪರೀಕ್ಷೆಯಲ್ಲಿ ಒಟ್ಟು 14,161 ಅಭ್ಯರ್ಥಿಗಳು CS ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಪ್ರಸ್ತುತ ಆಯೋಗವು ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

UPSC CSE Mains 2025 Schedule

ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆಯ ವೇಳಾಪಟ್ಟಿ 2025 ಪ್ರಕಟ: UPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ (ಮುಖ್ಯ) ಪರೀಕ್ಷೆಯನ್ನು ಆ.22 ರಿಂದ 31 ರವರೆಗೆ ಪ್ರತಿ ದಿನ ಎರಡು ಪಾಳಿಯಲ್ಲಿ ಒಟ್ಟು ಒಂಬತ್ತು ಪತ್ರಿಕೆಗಳನ್ನು ಒಳಗೊಂಡಂತೆ 5 ದಿನಗಳವರೆಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಮುಖ್ಯ ಪರೀಕ್ಷೆಯ ವೇಳಾಪಟ್ಟಿ 2025

*ಆ.22ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪ್ರಬಂಧ

*ಆ.23ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-I ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-II

*ಆ.24ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-III ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಸಾಮಾನ್ಯ ಅಧ್ಯಯನ ಪತ್ರಿಕೆ-IV

*ಆ.30ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಭಾರತೀಯ ಭಾಷಾ ಪತ್ರಿಕೆ ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಇಂಗ್ಲಿಷ್ ಪತ್ರಿಕೆ

*ಆ.31ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಐಚ್ಛಿಕ ವಿಷಯ ಪತ್ರಿಕೆ-I ಹಾಗೂ ಮಧ್ಯಾಹ್ನ 2.30 ಸಂಜೆ 5.30 ರವರೆಗೆ ಐಚ್ಛಿಕ ವಿಷಯ ಪತ್ರಿಕೆ-II

How to Download UPSC CSE Mains 2025 Schedule?

UPSC ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ;

  • UPSC ಅಧಿಕೃತ ವೆಬ್‌ಸೈಟ್‌ https://upsc.gov.in/ ಗೆ ಭೇಟಿ ನೀಡಿ.
  • ಹೊಸದೇನಿದೆ ವಿಭಾಗದಲ್ಲಿ ಪರೀಕ್ಷಾ ವೇಳಾಪಟ್ಟಿ: ನಾಗರಿಕ ಸೇವೆಗಳ (ಮುಖ್ಯ) ಪರೀಕ್ಷೆ, 2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆ 2025 ಪರೀಕ್ಷಾ ವೇಳಾಪಟ್ಟಿಯ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ.
  • ಭವಿಷ್ಯದ ಉಲ್ಲೇಖಕ್ಕಾಗಿ ವೇಳಾಪಟ್ಟಿಯ ಪಿಡಿಎಫ್ ಮುದ್ರಣವನ್ನು ತೆಗೆದುಕೊಳ್ಳಿ.

Important Direct Links:

UPSC CSE Mains 2025 Schedule PDF LinkDownload
Official Websiteupsc.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment