UPSC EXAM Preparation Tips: ಪರೀಕ್ಷೆ ಪಾಸ್ ಆಗುವ ಕನಸು ನಿಮಗಿದೆಯಾ.? ಆಗಿದ್ರೆ ಇಲ್ಲಿವೆ ಪ್ರಮುಖ ಸಲಹೆಗಳು

Published on:

ಫಾಲೋ ಮಾಡಿ
UPSC EXAM Preparation Tips
UPSC EXAM Preparation Tips

UPSC EXAM Preparation Tips: ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಯುಪಿಎಸ್ಸಿ (UPSC) ನಾಗರಿಕ ಸೇವೆ ಪರೀಕ್ಷೆಯ ಇನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಅಥವಾ ಐಎಎಸ್ ಅಧಿಕಾರಿಗಳಾಗುವ ಕನಸನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕ ಯುವತಿಯರು ಕಾಣುತ್ತಾರೆ. UPSC ಪರೀಕ್ಷೆಯು ಎಲ್ಲಾ ಪರೀಕ್ಷೆಗಳಿಗಿಂತ ಕಷ್ಟಕರವಾಗಿದ್ದು ಇದಕ್ಕೆ ಸಾಕಷ್ಟು ಓದು ಮತ್ತು ಶ್ರದ್ಧೆ ಅವಶ್ಯಕ. ಈ ಪರೀಕ್ಷೆಯನ್ನು ಪಾಸ್ ಮಾಡುವುದು ಕಷ್ಟವೇ ಆದರೂ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಲು ಈ ಪರೀಕ್ಷೆ ಒಂದು ಉತ್ತಮ ವೇದಿಕೆ. ಯುಪಿಎಸ್ಸಿ ನಾಗರಿಕ ಸೇವೆ ಪರೀಕ್ಷೆಯ ಆಕಾಂಕ್ಷಿಗಳಿಗೆ ಪರೀಕ್ಷೆಗೆ ಯಾವಾಗ ತಯಾರಿ ಪ್ರಾರಂಭಿಸಬೇಕು ಎಂಬುದರ ಕುರಿತು ಅನೇಕ ಪ್ರಶ್ನೆಗಳು ಕಾಡುವುದು ಸಹಜ. ಈ ಪರೀಕ್ಷೆಯನ್ನು ಪಾಸ್ ಮಾಡಬೇಕಾದರೆ ಮೂರು ಹಂತಗಳನ್ನು ದಾಟಬೇಕು, ಅವುಗಳಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಪ್ರಿಲಿಮ್ಸ್‌ ಪರೀಕ್ಷೆ ಬರೆಯುತ್ತಾರೆ. ಸಾವಿರಾರು ಅಭ್ಯರ್ಥಿಗಳು ಮಾತ್ರ ಪ್ರಿಲಿಮ್ಸ್‌ ಪಾಸ್ ಮಾಡಿ ಮುಖ್ಯ ಪರೀಕ್ಷೆ ಬರೆಯುತ್ತಾರೆ. ಹಾಗಾದರೆ UPSC ನೀವು ತೆಗೆದುಕೊಳ್ಳಲು ಬಯಸಿದರೆ ಈ ಕೆಳಗೆ ನೀಡಲಾಗಿರುವ ಸಲಹೆಗಳನ್ನು ತಪ್ಪದೇ ಓದಿ ನೋಡಿ.

ಪ್ರತಿ ವರ್ಷ ಕೇಂದ್ರ ಲೋಕಸೇವಾ ಪರೀಕ್ಷೆಯನ್ನು ನಡೆಸುತ್ತದೆ. ಇದು ಭಾರತದ ಕಷ್ಟಕರ ಪರೀಕ್ಷೆಗಳಲ್ಲಿ ಒಂದು. ಇದಕ್ಕೆ ಸರಿಯಾದ ತಯಾರಿ ಮಾಡಿಕೊಂಡರೆ ಇದನ್ನು ಪಾಸ್ ಮಾಡುವುದು ಸುಲಭ. ಐಎಎಸ್ಗೆ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯುತ್ತಾರೆ. ಆದ್ರೆ ಅದರಲ್ಲಿ ತೇರ್ಗಡೆಯಾಗುವುದು ಕೆಲವೇ ಸಾವಿರ ಜನ. ಇದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ಓದುತ್ತಾರೆ. ಕೋಚಿಂಗ್ಗಳಿಗೂ ಹೋಗುತ್ತಾರೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment