UPSC IFS Mains Admit Card 2024: ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಶೀಘ್ರದಲ್ಲೇ ಬಿಡುಗಡೆ

Follow Us:

UPSC IFS Mains Admit Card 2024

UPSC IFS Mains Admit Card 2024: ಯೂನಿಯನ್ ಪಬ್ಲಿಕ್ ಸರ್ವೀಸ್‌ ಕಮಿಷನ್ 2024ನೇ ಸಾಲಿನ ಭಾರತೀಯ ಅರಣ್ಯ ಸೇವೆಗಳ (IFS) ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ.

UPSC IFS ಮುಖ್ಯ ಪರೀಕ್ಷೆವು 2024 ನವಂಬರ್ 24 ರಂದು ನಡೆಸಲಿದ್ದು, ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ತಮ್ಮ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳಬಹುದು.‌ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು UPSC ಅಧಿಕೃತ ವೆಬ್‌ಸೈಟ್‌ನಿಂದ ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು. ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಪ್ರವೇಶ ಪತ್ರದ PDF ಡೌನ್‌ಲೋಡ್ ‌ ಮಾಡಿಕೊಳ್ಳಬಹುದಾಗಿದೆ.

Upsc Ifs Mains Admit Card 2024
Upsc Ifs Mains Admit Card 2024

ಪ್ರವೇಶ ಪತ್ರದಲ್ಲಿ ಪರೀಕ್ಷೆಯ ಕೇಂದ್ರ ಮತ್ತು ಸಮಯ ಮತ್ತು ಅಭ್ಯರ್ಥಿಗಳು ಪಾಲಿಸಬೇಕಾದ ಸಲಹೆ ಸೂಚನೆಗಳನ್ನು ನೀಡಲಾಗಿರುತ್ತದೆ. ಅದರಂತೆ ಅಭ್ಯರ್ಥಿಗಳು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ಲೇಖನದಲ್ಲಿ ನಾವು ಆನ್ ಲೈನ್ ಮೂಲಕ UPSC IFS ಮುಖ್ಯ ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಮಾಹಿತಿ ನೀಡಲಾಗಿದ್ದು ಗಮನವಿಟ್ಟು ಓದಿರಿ.

How to Download UPSC IFS Mains Admit Card 2024

ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://upsc.gov.in/
  • “ಐಎಫ್‌ಎಸ್ ಮುಖ್ಯ ಪರೀಕ್ಷಾ ಪ್ರವೇಶ ಪತ್ರ 2024” ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • “ಸಲ್ಲಿಸು” ಕ್ಲಿಕ್ ಮಾಡಿ.
  • ನಿಮ್ಮ ಪ್ರವೇಶ ಪತ್ರವನ್ನು ಪಿಡಿಎಫ್ ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
  • ಭವಿಷ್ಯ ಬಳಕೆಗಾಗಿ ಪ್ರವೇಶ ಪತ್ರದ ಪ್ರತಿಯನ್ನು ಪ್ರಿಂಟ್ ಮಾಡಿ ಮತ್ತು ಸಂಗ್ರಹಿಸಿ.

ಪ್ರಮುಖ ಸಲಹೆಗಳು:

  • ಪ್ರವೇಶ ಪತ್ರವು ಪರೀಕ್ಷಾ ಕೇಂದ್ರ, ದಿನಾಂಕ ಮತ್ತು ಸಮಯ ಸೇರಿದಂತೆ ಪರೀಕ್ಷೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ.
  • ಪರೀಕ್ಷಾ ದಿನದಂದು ಮಾನ್ಯವಾದ ಫೋಟೋ ಗುರುತಿನ ಚೀಟಿಯೊಂದಿಗೆ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು.
  • ಪ್ರವೇಶ ಪತ್ರದ ಬಗ್ಗೆ ಯಾವುದೇ ಪ್ರಶ್ನೆಗಳಿಗೆ, ಅಭ್ಯರ್ಥಿಗಳು ಯುಪಿಎಸ್‌ಸಿ ಹೆಲ್ಪ್‌ಲೈನ್ ಅನ್ನು ಸಂಪರ್ಕಿಸಬಹುದು

Important Direct Links:

UPSC IFS Mains Admit Card 2024 Download LinkSoon
Official Websiteupsc.gov.in
More UpdatesKarnataka Help.in

Leave a Comment