ಕೇಂದ್ರ ಲೋಕಸೇವಾ ಆಯೋಗವು (UPSC) 2026ರ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(NDA) ಮತ್ತು ನೌಕಾ ಅಕಾಡೆಮಿ(NA) ಪರೀಕ್ಷೆ-Iರ ನೋಂದಣಿಗಾಗಿ ಬುಧವಾರ ಅಧಿಸೂಚನೆ ಹೊರಡಿಸಿದೆ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿಗಳಾದ ಸೇನಾ ವಿಭಾಗ, ನೌಕಾಪಡೆ, ವಾಯುಪಡೆಗಳಲ್ಲಿನ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಹಾಗೂ ನೌಕಾ ಅಕಾಡೆಮಿಯ (10+2 ಕೆಡೆಟ್ ಪ್ರವೇಶ ಯೋಜನೆ) ವಿಭಾಗಗಳಲ್ಲಿ 394 ಹುದ್ದೆಗಳಿಗೆ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳನ್ನು ಈ ಪರೀಕ್ಷೆಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸ ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿ.30ರೊಳಗೆ ಯುಪಿಎಸ್ಸಿ ಅಧಿಕೃತ ವೆಬ್ಸೈಟ್ https://upsconline.nic.in/ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 10, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಡಿಸೆಂಬರ್ 30, 2025
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಡಿಸೆಂಬರ್ 30, 2025
ಪರೀಕ್ಷೆಯ ದಿನಾಂಕ – ಜೂನ್-ಜುಲೈ, 2026
ಹುದ್ದೆಗಳ ವಿವರ:
ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ಸೇನಾ ವಿಭಾಗಕ್ಕೆ – 208 ಹುದ್ದೆಗಳು ನೌಕಾಪಡೆ ವಿಭಾಗದಲ್ಲಿ – 42 ಹುದ್ದೆಗಳು ವಾಯುಪಡೆ ವಿಭಾಗದಲ್ಲಿ – 120 ಹುದ್ದೆಗಳು ನೌಕಾ ಅಕಾಡೆಮಿ (10+2 ಕೆಡೆಟ್ ಪ್ರವೇಶ ಯೋಜನೆಯಲ್ಲಿ) – 24 ಹುದ್ದೆಗಳು
ಒಟ್ಟು – 394 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಶೈಕ್ಷಣಿಕ ಅರ್ಹತೆ:
✓ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಸೇನಾ ವಿಭಾಗಕ್ಕೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ 10+2 ಮಾದರಿಯ ಶಾಲಾ ಶಿಕ್ಷಣ ಅಥವಾ ತತ್ಸಮಾನ ಪರೀಕ್ಷೆಯಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
✓ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯವಾಯುಪಡೆ, ನೌಕಾ ವಿಭಾಗ ಮತ್ತು ಭಾರತೀಯ ನೌಕಾ ಅಕಾಡೆಮಿಯಲ್ಲಿ (10+2 ಕೆಡೆಟ್ ಪ್ರವೇಶ ಯೋಜನೆಗೆ); ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ನಡೆಸಲ್ಪಡುವ 10+2 ಶಾಲಾ ಶಿಕ್ಷಣ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ) ವಿಷಯಗಳೊಂದಿಗೆ 12ನೇ ತರಗತಿ/ತತ್ಸಮಾನ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
2007ರ ಜುಲೈ 01 ರ ನಂತರ ಹಾಗೂ 2010ರ ಜುಲೈ 01ಕ್ಕಿಂತ ಮೊದಲು ಜನಿಸಿದ ಪುರುಷ/ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಆಯ್ಕೆ ವಿಧಾನ:
• ಲಿಖಿತ ಪರೀಕ್ಷೆ • ಬುದ್ಧಿ ಮತ್ತೆ ಮತ್ತು ವ್ಯಕ್ತಿತ್ವ ಪರೀಕ್ಷೆ (SSB) • ದಾಖಲೆ ಪರಿಶೀಲನೆ • ವೈದ್ಯಕೀಯ ಪರೀಕ್ಷೆ
ಸಂಬಳ:
ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ NDA ನಿಯಮಗಳ ಪ್ರಕಾರ 56,100ರೂ. ಗಳಿಂದ 2,50,000ರೂ. ವರೆಗೆ ಮಾಹೆಯಾನ ವೇತನ, ಇತರೆ ಭತ್ಯೆ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
• ಪ.ಜಾತಿ, ಪ.ಪಂಗಡ, ಮಹಿಳಾ, ಸೈನಿಕ್ ಶಾಲೆಯಲ್ಲಿ ಓದುತ್ತಿರುವವರು, JCOS/NCOS/OR ವಾರ್ಡ್ಗಳ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ. • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 100ರೂ.