UPSC ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (I) 2026ರ ನೋಂದಣಿ ಆರಂಭ

ಏ.12 ರಂದು ಪರೀಕ್ಷೆ | ಅರ್ಜಿ ಸಲ್ಲಿಸಲು ಡಿ.30 ಕೊನೆದಿನ

Published on:

2026ರ ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ Iರ ನೋಂದಣಿಗಾಗಿ ಕೇಂದ್ರ ಲೋಕಸೇವಾ ಆಯೋಗ(UPSC)ವು ಅರ್ಜಿ ಆಹ್ವಾನಿಸಿದೆ.

ಭಾರತೀಯ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್ ಕೋರ್ಸ್, ಭಾರತೀಯ ನೌಕಾ ಅಕಾಡೆಮಿ ಎಳಿಮಲ ಕೋರ್ಸ್, ಹೈದರಾಬಾದ್‌ನ ವಾಯುಪಡೆ ಅಕಾಡೆಮಿ (ಪ್ರಿ-ಫ್ಲೈಯಿಂಗ್) ತರಬೇತಿ ಕೋರ್ಸ್ ಹಾಗೂ ಅಧಿಕಾರಿಗಳ ತರಬೇತಿ ಅಕಾಡೆಮಿ (ಪುರುಷ/ ಮಹಿಳಾ) ಕೋರ್ಸ್‌ಗಳ 451 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.30ರೊಳಗೆ ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsconline.nic.in/ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಡಿಸೆಂಬರ್ 10, 2025
  • ಅರ್ಜಿ ಸಲ್ಲಿಸಲು‌ ಕೊನೆಯ ದಿನಾಂಕ – ಡಿಸೆಂಬರ್ 30, 2025
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಡಿಸೆಂಬರ್ 30, 2025
  • CDS ಪರೀಕ್ಷಾ ದಿನಾಂಕ – ಏಪ್ರಿಲ್ 12, 2026

ಹುದ್ದೆಗಳ ವಿವರ:

ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್ -162ನೇ (DE) ಕೋರ್ಸ್ – 100 ಹುದ್ದೆಗಳು
ಭಾರತೀಯ ನೌಕಾ ಅಕಾಡೆಮಿ, ಎಳಿಮಲ ಕೋರ್ಸ್ – 26 ಹುದ್ದೆಗಳು
ಹೈದರಾಬಾದ್‌ನ ವಾಯುಪಡೆ ಅಕಾಡೆಮಿ (ಪ್ರಿ-ಫ್ಲೈಯಿಂಗ್) ತರಬೇತಿ ಕೋರ್ಸ್ – 32 ಹುದ್ದೆಗಳು
ಚೆನ್ನೈ ಅಧಿಕಾರಿಗಳ ತರಬೇತಿ ಅಕಾಡೆಮಿ, 125ನೇ ಕೋರ್ಸ್ (ಪುರುಷರು) – 275 ಹುದ್ದೆಗಳು
ಚೆನ್ನೈ ಅಧಿಕಾರಿಗಳ ತರಬೇತಿ ಅಕಾಡೆಮಿ, 125ನೇ ಕೋರ್ಸ್ (ಮಹಿಳಾ) – 18 ಹುದ್ದೆಗಳು

ಒಟ್ಟು – 451 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಶೈಕ್ಷಣಿಕ ಅರ್ಹತೆ:

✓ ಚೆನ್ನೈನ ಎಲ್.ಎಂ.ಎ. ಮತ್ತು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.

✓ ಭಾರತೀಯ ನೌಕಾ ಅಕಾಡೆಮಿಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಸ್ಥೆಯಿಂದ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.

✓ ವಾಯುಪಡೆ ಅಕಾಡೆಮಿ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 10+2 ಮಟ್ಟದಲ್ಲಿ ಭೌತಶಾಸ್ತ್ರ ಮತ್ತು ಗಣಿತದೊಂದಿಗೆ ಪದವಿ ಪೂರ್ಣಗೊಳಿಸಿರಬೇಕು ಅಥವಾ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

01-01-2027 ರಂತೆ;

IMAಗೆ – ಜನವರಿ 2, 2003 ರ ನಂತರ ಹಾಗೂ ಜನವರಿ 1, 2008 ಕ್ಕಿಂತ ಮೊದಲು ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಭಾರತೀಯ ನೌಕಾ ಅಕಾಡೆಮಿಗೆ – ಜನವರಿ 2, 2003 ರ ನಂತರ ಹಾಗೂ ಜನವರಿ 1, 2008 ಕ್ಕಿಂತ ಮೊದಲು ಜನಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಾಯುಪಡೆ ಅಕಾಡೆಮಿಗೆ – 20 ರಿಂದ 24 ವರ್ಷಗಳು, ಅಂದರೆ, ಜನವರಿ 2, 2003ರ ನಂತರ ಹಾಗೂ ಜನವರಿ 1, 2007 ಕ್ಕಿಂತ ಮೊದಲು ಜನಿಸಿದ ಅವಿವಾಹಿತ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಗೆ – (ಪುರುಷ/ ಮಹಿಳಾ) ಜನವರಿ 2, 2002 ರ ನಂತರ ಹಾಗೂ ಜನವರಿ 01, 2008 ಕ್ಕಿಂತ ಮೊದಲು ಜನಿಸಿದ ಪುರುಷ/ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಆಯ್ಕೆ ವಿಧಾನ:

  • ಲಿಖಿತ ಪರೀಕ್ಷೆ
  • ಬುದ್ಧಿ ಮತ್ತೆ ಮತ್ತು ವ್ಯಕ್ತಿತ್ವ ಪರೀಕ್ಷೆ (SSB)
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಸಂಬಳ:

ಸದರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಗುಣವಾಗಿ 56,100ರೂ. ಗಳಿಂದ 2,50,000ರೂ. ವರೆಗೆ ಮಾಹೆಯಾನ ವೇತನ, ಇತರೆ ಭತ್ಯೆ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಪ.ಜಾತಿ, ಪ.ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ – ಶುಲ್ಕ ವಿನಾಯಿತಿ ನೀಡಲಾಗಿದೆ.
ಇತರೆ ಎಲ್ಲಾ ಅಭ್ಯರ್ಥಿಗಳಿಗೆ – 200ರೂ.

ಆನ್‌ಲೈನ್ ಮೂಲಕ ಪರೀಕ್ಷೆಗೆ ನೋಂದಣಿ ಮಾಡುವ ವಿಧಾನ;

• ಯುಪಿಎಸ್‌ಸಿ ಅಧಿಕೃತ ವೆಬ್ಸೈಟ್ https://upsconline.nic.in/ ಗೆ ಭೇಟಿ ನೀಡಿ.

• ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ಹೊಸದಾಗಿ ನೋಂದಾಯಿಸಿ.

Upsc Online Portal
UPSC Online Portal

• ಲಾಗಿನ್ ಆದ ಬಳಿಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

• ನಂತರ “ಸಂಯೋಜಿತ ರಕ್ಷಣಾ ಸೇವೆಗಳ ಪರೀಕ್ಷೆ (I), 2026” – ಲಿಂಕ್ ಮೇಲೆ ಟ್ಯಾಪ್ ಮಾಡಿ.

• ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವವಿವರ, ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ಬಳಿಕ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಅದನ್ನು ಸರಿಪಡಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websiteupsc.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment