RRB ವಿಭಾಗ ನಿಯಂತ್ರಕ(SC) ಅರ್ಜಿ ಸ್ಥಿತಿ ಬಿಡುಗಡೆ

Published on:

ರೈಲ್ವೆ ನೇಮಕಾತಿ ಮಂಡಳಿಯು ವಿಭಾಗ ನಿಯಂತ್ರಕ(SC) ಹುದ್ದೆಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ್ದು, ಅರ್ಜಿ ಸ್ಥಿತಿಯನ್ನು ತಿಳಿಯಲು ಅಭ್ಯರ್ಥಿಗಳಿಗೆ ಡಿ.12 ರಿಂದ ಅವಕಾಶ ಕಲ್ಪಿಸಿದೆ.

ಅಧಿಸೂಚನೆ ಸಂಖ್ಯೆ ಸಿಇಎನ್‌ 04/2025ರಡಿ ಅರ್ಜಿ ಆಹ್ವಾನಿಸಲಾಗಿತ್ತು. ಅಭ್ಯರ್ಥಿಯು ಸಲ್ಲಿಸಿರುವ ಅರ್ಜಿಯು ಸ್ವೀಕರಿಸಲಾಗಿದೆಯೋ, ಇಲ್ಲವೋ ಅಥವಾ ಷರತ್ತುಬದ್ಧವಾಗಿ ಸ್ವೀಕರಿಸಲಾಗಿದೆಯೋ ಎಂಬುದನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್‌ https://www.rrbapply.gov.in/#/auth/homeನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ನೋಂದಾಯಿತ ಮೊಬೈಲ್‌ ಸಂಖ್ಯೆಗೂ ಸಂದೇಶ ಕಳುಹಿಸಲಾಗಿದೆ. ಅಭ್ಯರ್ಥಿಗಳು ಲಾಗಿನ್‌ ವಿಳಾಸಗಳನ್ನು ಬಳಸಿ ಅರ್ಜಿ ಸ್ಥಿತಿ ಪರಿಶೀಲನೆ ಮಾಡಬಹುದು ಎಂದು ಮಂಡಳಿ ಹೊರಡಿಸಿದ ಪ್ರಕಟಣೆ ತಿಳಿಸಿದೆ.

RRB ಸೆಕ್ಷನ್‌ ಕಂಟ್ರೋಲರ್‌ ಅರ್ಜಿ ಸ್ಥಿತಿ ಚೆಕ್‌ ಮಾಡುವ ವಿಧಾನ:

  • ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್‌ ಲಾಗಿನ್‌ ಲಿಂಕ್‌ https://www.rrbapply.gov.in/#/auth/homeಗೆ ಭೇಟಿ ನೀಡಿ.
  • ಬಳಿಕ ಮೊಬೈಲ್ ಸಂಖ್ಯೆ/ ಇಮೇಲ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
  • ಮುಂದೆ “Application History” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಂತರ ಅಲ್ಲಿ”CEN No. 04/2025 for Recruitment of SECTION CONTROLLER”ರ ಮುಂದೆ “Application Status” ಶಿರ್ಷೀಕೆಯಡಿ “Provisionally Accepted” ಅಥವಾ “Conditionally Accepted” ಅಥವಾ “Conditionally Rejected” ನೀಡಲಾಗಿರುತ್ತದೆ.

ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸ್ವೀಕರಿಸಲಾಗಿದೆಯೇ, ತಿರಸ್ಕರಿಸಲಾಗಿದೆಯೇ ಅಥವಾ ಷರತ್ತುಬದ್ಧವಾಗಿ ಸ್ವೀಕರಿಸಲಾಗಿದೆಯೋ ಎಂಬುದನ್ನು ಈ ಮೇಲಿನ ರೀತಿ ಪರಿಶೀಲನೆ ಮಾಡಿಕೊಳ್ಳಬಹುದು.

Important Direct Links:

Notice PDF (Dated on 11/12/25)Download
RRB Technician Grade I Signal and Technician Grade III Application Status 2025 Check LinkCheck Now
Official WebsiteRRBs
More UpdatesKarnatakaHelp.in

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

3 thoughts on “RRB ವಿಭಾಗ ನಿಯಂತ್ರಕ(SC) ಅರ್ಜಿ ಸ್ಥಿತಿ ಬಿಡುಗಡೆ”

Leave a Comment