‘ಬ್ಯಾಂಕ್ ನೋಟ್ ಪೇಪರ್ ಮಿಲ್’ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿ

ಮಾಸಿಕ ₹52,000 ಸಂಬಳ

Published on:

ಮೈಸೂರು: ಇಲ್ಲಿನ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(BNPMIPL) ವಿವಿಧ ವೃಂದದ ಸಹಾಯಕ ವ್ಯವಸ್ಥಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಕೆಗೆ ಏ.11ರವರೆಗೆ ಅವಕಾಶವಿದೆ.

ಸಹಾಯಕ ವ್ಯವಸ್ಥಾಪಕ(ಫೈನಾನ್ಸ್ & ಅಕೌಂಟ್ಸ್) 02 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ(ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್) 02 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ(ಸಿವಿಲ್) 02 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಅಭ್ಯರ್ಥಿಗಳಿಗೆ ಮಾಸಿಕ ₹52,000 ಸಂಬಳ ಸಿಗಲಿದೆ. ಅಧಿಕೃತ ವೆಬ್‌ಸೈಟ್‌ https://bnpmindia.com/ನಲ್ಲಿ ಲಭ್ಯವಿರುವ ವಿಸ್ತೃತ ಅಧಸೂಚನೆ ಓದಿ, ಅಲ್ಲಿಯೇ ಅರ್ಜಿ ನಮೂನೆ ಡೌನ್ಲೋಡ್‌ ಮಾಡಿಕೊಂಡು, ‘ಮುಖ್ಯ ಜನರಲ್ ಮ್ಯಾನೇಜರ್ (ಎಫ್&ಎ) ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಆಡಳಿತ ಕಟ್ಟಡ ಪೇಪರ್ ಮಿಲ್ ಕಾಂಪೌಂಡ್, ನೋಟ್ ಮುದ್ರಾ ನಗರ, ಮೈಸೂರು-570003’ ವಿಳಾಸಕ್ಕೆ ಕೊನೆದಿನಾಂಕದೊಳಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಮಾರ್ಚ್ 06, 2026
  • ಅರ್ಜಿ ಸಲ್ಲಿಸಲು ಹಾಗೂ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ- ಏಪ್ರಿಲ್ 11, 2026

ಶೈಕ್ಷಣಿಕ ಅರ್ಹತೆ:

✓ ಸಹಾಯಕ ವ್ಯವಸ್ಥಾಪಕ(ಫೈನಾನ್ಸ್ & ಅಕೌಂಟ್ಸ್) ಹುದ್ದೆಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಪ್ರಥಮ ದರ್ಜೆಯಲ್ಲಿ ಬಿ.ಕಾಂ/ಬಿಬಿಎ ಪದವಿ ಜೊತೆಗೆ ಚಾರ್ಟರ್ಡ್ ಅಕೌಂಟೆಂಟ್ (ICAI)/ ವೆಚ್ಚ ಮತ್ತು ನಿರ್ವಹಣಾ ಅಕೌಂಟೆಂಟ್ (ICMAI) ಪೂರ್ಣಗೊಳಿಸಬೇಕು.

✓ ಸಹಾಯಕ ವ್ಯವಸ್ಥಾಪಕ(ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್) ಹುದ್ದೆಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್) ವಿಭಾಗದಲ್ಲಿ ಬಿ.ಇ ಪದವಿ ಪೂರ್ಣಗೊಳಿಸಿರಬೇಕು.

✓ ಸಹಾಯಕ ವ್ಯವಸ್ಥಾಪಕ(ಸಿವಿಲ್) ಹುದ್ದೆಗೆ; ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕನಿಷ್ಠ 60% ಅಂಕಗಳೊಂದಿಗೆ ಸಿವಿಲ್/ಸಿವಿಲ್ & ಸ್ಟ್ರಕ್ಚರಲ್) ವಿಭಾಗದಲ್ಲಿ ಬಿ.ಇ/ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ:

11-04-2026 ರಂತೆ;

ಗರಿಷ್ಠ ವಯಸ್ಸಿನ ಮಿತಿ – 32 ವರ್ಷಗಳು

ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು, ಮಾಜಿ ಸೈನಿಕ/ನಿಯೋಜಿತ ಅಧಿಕಾರಿ ಅಭ್ಯರ್ಥಿಗಳಿಗೆ ಗರಿಷ್ಠ 55 ವರ್ಷಗಳು.

ಆಯ್ಕೆ ವಿಧಾನ:

  • ಆಫ್‌ಲೈನ್/ಆನ್‌ಲೈನ್ ಪರೀಕ್ಷೆ
  • ಸಂದರ್ಶನ

ಸಂಬಳ:

ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹52,000 ಮೂಲವೇತನದ ಜೊತೆಗೆ ಇತರ ಭತ್ಯೆಗಳು ಮತ್ತು ಪ್ರಯೋಜನಗಳನ್ನು ಒದಗಿಸಲಾಗುತ್ತದೆ.

ಅರ್ಜಿ ಶುಲ್ಕ:

ಒಬಿಸಿ ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳಿಗೆ ₹800
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪಿಡಬ್ಲ್ಯೂಡಿ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ

• ಅಭ್ಯರ್ಥಿಗಳು BNPM ಅಧಿಕೃತ ಜಾಲತಾಣ https://www.bnpmindia.com/Recruitment.aspx ಕ್ಕೆ ಭೇಟಿ ನೀಡಿ.

• “ಉದ್ಯೋಗ ಅಧಿಸೂಚನೆ ಸಂಖ್ಯೆ. 02/2026 DTD.06.03.2026” ಲಿಂಕ್ ಮೇಲೆ ಕ್ಲಿಕ್ ಮಾಡಿ – ಉದ್ಯೋಗ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಶೈಕ್ಷಣಿಕ ಮಾಹಿತಿ, ಭಾವಚಿತ್ರ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಅರ್ಜಿ ಶುಲ್ಕವನ್ನು ಚೆಕ್/ಡಿಮ್ಯಾಂಡ್ ಡ್ರಾಫ್ಟ್ ಮೂಲಕ “BNPM ನೇಮಕಾತಿ ಖಾತೆ” ಹೆಸರಿನಲ್ಲಿ ಪಾವತಿಸಿ.

• ಲಕೋಟೆಯ ಮೇಲೆ “AM (………)” ಹುದ್ದೆಗೆ ಅರ್ಜಿ ಎಂದು ಬರೆದು ಸಾಮಾನ್ಯ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಏಪ್ರಿಲ್ 11ರೊಳಗೆ ತಲುಪುವಂತೆ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ: ಮುಖ್ಯ ಜನರಲ್ ಮ್ಯಾನೇಜರ್ (ಎಫ್&ಎ) ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಆಡಳಿತ ಕಟ್ಟಡ ಪೇಪರ್ ಮಿಲ್ ಕಾಂಪೌಂಡ್, ನೋಟ್ ಮುದ್ರಾ ನಗರ, ಮೈಸೂರು-570003

✓ ಆಫ್ ಲೈನ್ ಅರ್ಜಿ ಡೌನ್ಲೋಡ್ ಮಾಡುವ ನೇರ ಲಿಂಕ್ – https://bnpmindia.com/Admin/FileDownload/APPLICATION%20FORM%20170326.pdf

Important Direct Links:

Official Notification PDFDownload
Application Form PDFDownload
Official Websitebnpmindia.com
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “‘ಬ್ಯಾಂಕ್ ನೋಟ್ ಪೇಪರ್ ಮಿಲ್’ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿ”

Leave a Comment