2024 ರ ಭಾರತೀಯ ಸಿವಿಲ್ ಸೇವೆಗಳ (UPSC) ಪ್ರಾಥಮಿಕ ಪರೀಕ್ಷೆಯು ಇಂದು (ಜೂನ್ 16)ರಂದು ನಡೆದಿದೆ. ದೇಶದಾದ್ಯಂತ ಸಾಕಷ್ಟು ಅಭ್ಯರ್ಥಿಗಳು ಈ ಪರೀಕ್ಷೆಯಗೆ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಉತ್ತರಗಳೊಂದಿಗೆ ವಿಶ್ಲೇಷಿಸಲು ಮತ್ತು ಅಭ್ಯರ್ಥಿಗಳು ತಮ್ಮ ಅಂಕಗಳನ್ನು ಅಂದಾಜಿಸಲು UPSC ಯು ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ PDF ಅನ್ನು ಬಿಡುಗಡೆ ಮಾಡಿದೆ.
ಇಂದು ಪರೀಕ್ಷೆಯು ಸಾಮಾನ್ಯ ಅಧ್ಯಯನ (General Paper) ಪತ್ರಿಕೆಯು ಬೆಳಿಗ್ಗೆ 9:30 ರಿಂದ 11 ರವರೆಗೆ ಬೆಳಿಗ್ಗೆ ಪಾಳಿಯಲ್ಲಿ ನಡೆಯಿತು. ಪತ್ರಿಕೆ 2 ಮಧ್ಯಾಹ್ನ 2:30 ರಿಂದ 4:30 ರವರೆಗೆ ಮಧ್ಯಾಹ್ನ ಪಾಳಿಯಲ್ಲಿ ನಡೆಸಲಾಯಿತು. UPSC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಶ್ನೆ ಪತ್ರಿಕೆಗಳ PDF ಲಭ್ಯವಿದ್ದು, ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪ್ರಶ್ನೆ ಪತ್ರಿಕೆಯ PDF ಅನ್ನು ಡೌನ್‌ಲೋಡ್ ಮಾಡಬಹುದು..