Yuva Nidhi Application Status Check Online: ನಮಸ್ಕಾರ ಬಂಧುಗಳೇ, ನೀವು ಯುವ ನಿಧಿ ಯೋಜನೆ ನೋಂದಣಿ ಮಾಡಿಕೊಂಡಿದ್ದೀರಿ ಎಂದು ನಾವು ತಿಳಿದಿದ್ದೇವೆ. ನೀವು ಸಲ್ಲಿಸಿರುವ ಅರ್ಜಿಯು ಸದ್ಯಕ್ಕೆ (ಯುವ ನಿಧಿ ಅಪ್ಲಿಕೇಶನ್ ಸ್ಟೇಟಸ್)ಯಾವ ಹಂತದಲ್ಲಿದೆ ಎಂದು ಹೇಗೆ ಪರಿಶೀಲಿಸುವುದು ಎಂಬುದನ್ನ ಈ ಲೇಖನದಲ್ಲಿ ನೀಡಲಿದ್ದೇವೆ. ಈ ಮಾಹಿತಿಯು ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ.
Yuva Nidhi Application Status Check Online
ಯುವ ನಿಧಿ ಯೋಜನೆಯು 2023ನೇ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಡಿಪ್ಲೋಮ/ಪದವಿಧರ/ಸ್ನಾತಕೋತ್ತರ ಪದವಿಧರ ನಿರುದ್ಯೋಗಿಗಳಿಗೆ ಈ ಯೋಜನೆ ಸಹಾಯವಾಗಿದೆ.
ನೀವು ಯುವ ನಿಧಿ ಯೋಜನೆ ಅರ್ಜಿ ಸ್ಥಿತಿ ಪರಿಶೀಲ (Seva Sindhu Yuva Nidhi Application Status)ನೆ ಮಾಡಲು ಬೇಕಾದ ಅಗತ್ಯ ದಾಖಲಾತಿಗಳು ಕೆಳಗಿನಂತಿವೆ;
ನೀವು ಈ ಹಿಂದೆ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ನೀಡಲಾಗಿದ್ದ ಮೊಬೈಲ್ ಸಂಖ್ಯೆಯೇ ಬೇಕು. ಒಂದು ವೇಳೆ ನೀವು ಬೇರೆ ಮೊಬೈಲ್ ಸಂಖ್ಯೆ ಹಾಕಿ ಸ್ಥಿತಿ ಪರಿಶೀಲನೆ ಮಾಡಲು ಮುಂದಾದರೆ ನೀವು ಸ್ಟೇಟಸ್ ಚೆಕ್ ಮಾಡಲು ಸಾಧ್ಯವೇ ಇಲ್ಲಾ.
ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ನಿಮಗೆ ‘ಅರ್ಜಿ ಉಲ್ಲೇಖ ಸಂಖ್ಯೆ’ ನೀಡಲಾಗಿರುತ್ತದೆ ಅಲ್ಲಿ ನಿಮಗೇ ಸಕಾಲ ಸಂಖ್ಯೆಯನ್ನ ನೀಡಲಾಗಿರುತ್ತದೆ. ಈ ಸಂಖ್ಯೆ ಅತ್ಯಂತ ಮುಖ್ಯವಾದದು.
ಒಂದು ವೇಳೆ ಅರ್ಜಿ ಉಲ್ಲೇಖ ಸಂಖ್ಯೆ ನಿಮಗೆ ತಿಳಿದಿಲ್ಲವೆಂದರೆ, ಅಲ್ಲಿ ನೀವು ಯಾವ ತಿಂಗಳಲ್ಲಿ From Date ಮತ್ತು To Date (ಗರಿಷ್ಠ 3 ತಿಂಗಳು ಮಾತ್ರ ಆಯ್ಕೆ ಮಾಡಲು ಸಾಧ್ಯ) ಅರ್ಜಿ ಸಲ್ಲಿಸಿದ್ದೀರಿ ಎಂಬುದನ್ನ ಆಯ್ಕೆ ಮಾಡಿ. ಆ ತಿಂಗಳಲ್ಲಿ ಅರ್ಜಿ ಸಲ್ಲಿಸಿ ಅರ್ಜಿಗಳು ಅಲ್ಲಿ ತೋರಿಸುತ್ತದೆ.
ಮೊದಲಿಗೆ ನೀವು ಗೂಗಲ್ ನಲ್ಲಿ ಸೇವಾ ಸಿಂಧು ಪ್ಲಸ್ ಅಂತ ಸರ್ಚ್ ಮಾಡಿ. ಅಲ್ಲಿ ಮೊದಲು ಬರುವ ಸರ್ಕಾರದ ಅಧಿಕೃತ ವೆಬ್ ಸೈಟ್ ಕ್ಲಿಕ್ ಮಾಡಿ.
Yuva Nidhi Application Status Check Online Step-1
ನಂತರ ಅಲ್ಲಿ ನೀವು “Apply for Service” ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಹಾಕಿ ಮತ್ತು captcha ಸರಿಯಾಗಿ ಭರ್ತಿ ಮಾಡಿ.
Yuva Nidhi Application Status Check Online Step-2
ನಂತರ ಮೊತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಎಡ ಭಾಗದಲ್ಲಿ ‘Menu’ ಮೇಲೆ ಕ್ಲಿಕ್ ಮಾಡಿ ನಂತರ ‘View Status of Application’ ಮೇಲೆ ಕ್ಲಿಕ್ ಮಾಡಿ. ಅದರಲ್ಲಿ “View Status Of Application/Track Application Status” ಮೇಲೆ ಕ್ಲಿಕ್ ಮಾಡಿ.
Yuva Nidhi Application Status Check Online Step-3
ಇವಾಗ ಅಲ್ಲಿ ನೀವು ಈ ಹಿಂದೆ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿದಲ್ಲಿ ನಿಮಗೆ “ಅರ್ಜಿ ಉಲ್ಲೇಖ ಸಂಖ್ಯೆ”(IE009S2) ನೀಡಲಾಗಿರುತ್ತದೆ. ಆ ಸಂಖ್ಯೆಯನ್ನ ಭರ್ತಿ ಮಾಡಿ. ನಂತರ “Get Data” ಮೇಲೆ ಕ್ಲಿಕ್ ಮಾಡಿ.
Yuva Nidhi Application Status Check Online Step-4
ನಂತರ ನೀವು ಅಲ್ಲಿ “Current Status” ನಲ್ಲಿ ಸದ್ಯಕ್ಕೆ ಯಾವ (Under Process/Delivered) ಹಂತದಲ್ಲಿದೆ ಎಂಬ ಮಾಹಿತಿ ಬರುತ್ತದೆ. ಇನ್ನಷ್ಟು ಮಾಹಿತಿಗಾಗಿ ಅದರ ಮೇಲೆ ಕ್ಲಿಕ್ ಮಾಡಿ.
Yuva Nidhi Application Status Check Online Step-5
ಕೊನೆಗೆ ನೀವು ಸಲ್ಲಿದ ಅರ್ಜಿ ಸಲ್ಲಿಕೆ ಸ್ಥಿತಿ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನಿಮಗೆ ಲಭ್ಯವಾಗುತ್ತದೆ.
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ. ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು