ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC)ಯು ನೌಕರರ ರಾಜ್ಯ ವಿಮಾ ನಿಗಮದ (ESIC)ನಲ್ಲಿ ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ (UPSC ESIC Nursing Officer Admit Card 2024) ಲಿಖಿತ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಿದೆ. ಜುಲೈ 7, 2024 ಕ್ಕೆ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿ ಪರೀಕ್ಷೆಗೆ ಹಾಜರಾಗಬೇಕೆಂದು ಪ್ರಕಟಿಕೆಯಲ್ಲಿ ತಿಳಿಸಲಾಗಿದೆ.
ಈ ಪರೀಕ್ಷೆಯಲ್ಲಿ ಹಾಜರಾಗಲು ಅರ್ಹ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಪ್ರವೇಶ ಕಾರ್ಡ್‌ಗಳನ್ನು ಬಿಡುಗಡೆ ಮಾಡುತ್ತದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ನಿಂದ UPSC ESIC ನರ್ಸಿಂಗ್ ಅಧಿಕಾರಿ ಪ್ರವೇಶ ಕಾರ್ಡ್ ಅನ್ನು ಪಡೆದುಕೊಳ್ಳಬಹುದು . ಇದಕ್ಕಾಗಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ/ಪಾಸ್ವರ್ಡ್ ಸಲ್ಲಿಸುವ ಮೂಲಕ ESIC ನರ್ಸಿಂಗ್ ಆಫೀಸರ್ ಪರೀಕ್ಷೆಯ ಪ್ರವೇಶ ಕಾರ್ಡ್ ಅನ್ನು ಪಡೆದುಕೊಳ್ಳಬಹುದು. ಇದರಲ್ಲಿ ಪರೀಕ್ಷೆ ಕೇಂದ್ರ ಹಾಗೂ ಅಭ್ಯರ್ಥಿಯ ವಿವರಗಳು ಪರೀಕ್ಷೆಯ ದಿನಾಂಕಗಳನ್ನು ಒಳಗೊಂಡಿರುತ್ತದೆ.
ಒಟ್ಟು 1930 ಖಾಲಿ ಹುದ್ದೆಗಳ ನೇಮಕಾತಿಗಾಗಿ ಮಾರ್ಚ್ 7 ರಿಂದ ಮಾರ್ಚ್ 27, 2024 ರವರೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ಇದರ ಕುರಿತಂತೆ ಪ್ರವೇಶ ಪತ್ರವನ್ನು ಶೀಘ್ರದಲ್ಲಿ ಯುಪಿಎಸ್‌ಗೆ ಅಧಿಕೃತ ವೈಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
UPSC ESIC Nursing Officer Exam Time Table 2024
ನರ್ಸಿಂಗ್ ಆಫೀಸರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಯನ್ನು ಜುಲೈ 7, 2024 ರಂದು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಿಗದಿಪಡಿಸಲಾಗಿದೆ. ಅದರ ಪ್ರಕಾರ ಅಧಿಕೃತ UPSC ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಪ್ರಕಟಿಸಲಾಗಿದ್ದು. ಪರೀಕ್ಷೆಯ ವೇಳಾಪಟ್ಟಿಯಲ್ಲಿ ಯಾವುದೇ ನವೀಕರಣಗಳು ಅಥವಾ ಬದಲಾವಣೆಗಳಿಗಾಗಿ ಅಭ್ಯರ್ಥಿಗಳು UPSC ಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಪರೀಕ್ಷೆಯ ವಿಧಾನ:
- ಪೆನ್-ಪೇಪರ್ ಆಧಾರಿತ ಪರೀಕ್ಷೆ ಇರುತ್ತದೆ, ಅಂದರೆ, ಆಫ್‌ಲೈನ್ ಪರೀಕ್ಷೆ.
- ವಿವಿಧ ವಿಷಯಗಳ ಮೇಲೆ ವಿಷಯವಾರು ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳನ್ನು ಕೇಳಲಾಗುತ್ತದೆ.
- ಪ್ರತಿ ಪ್ರಶ್ನೆಗೆ ಒಂದು ಅಂಕವಾಗಿರುತ್ತೇದೆ.
- ಲಿಖಿತ ಪರೀಕ್ಷೆಗೆ ಅವಧಿ 3 ಗಂಟೆಗಳ ಅವಕಾಶ ನೋಡಲಾಗುತ್ತದೆ.
How to Download UPSC ESIC Nursing Officer Admit Card 2024
ESIC ನರ್ಸಿಂಗ್ ಆಫೀಸರ್ ಅಡ್ಮಿಟ್ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;
- ಅಧಿಕೃತ UPSC ವೆಬ್‌ಸೈಟ್‌ಗೆ ಭೇಟಿ ನೀಡಿ: www.upsc.gov.in.
- ಮುಖಪುಟದಲ್ಲಿ ಲಭ್ಯವಿರುವ ‘ಅಡ್ಮಿಟ್ ಕಾರ್ಡ್‘ ವಿಭಾಗದ ಮೇಲೆ ಕ್ಲಿಕ್ ಮಾಡಿ.
- ESIC ನರ್ಸಿಂಗ್ ಆಫೀಸರ್ ಅಡ್ಮಿಟ್ ಕಾರ್ಡ್ 2024 ಗಾಗಿ ಲಿಂಕ್ ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ ಅಥವಾ ಲಾಗಿನ್ ವಿವರಗಳನ್ನು ನಮೂದಿಸಿ.
- ನಿಮ್ಮ ಪ್ರವೇಶ ಕಾರ್ಡ್ ಪರದೆಯ ಮೇಲೆ ಕಾಣಿಸುತ್ತದೆ.
- ಎಲ್ಲಾ ಪ್ರವೇಶ ಕಾರ್ಡ್ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
- ಪರೀಕ್ಷೆ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರವೇಶ ಕಾರ್ಡ್‌ನ ಪ್ರಿಂಟ್‌ಔಟ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ತೆಗೆದುಕೊಳ್ಳಿ.
Important Direct Links:
UPSC ESIC Nursing Officer Admit Card 2024 Link | Click Here |
UPSC ESIC Nursing Officer Exam Date 2024 Notice PDF | Download |
UPSC ESIC Nursing Officer Recruitment 2024 | Details |
Official Wbesite | upsc.gov.in |
More Updates | KarnatakaHelp.in |