ಉತ್ತರ ಮಧ್ಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತವಾಗಿ ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ನಾರ್ತ್ ಸೆಂಟ್ರಲ್ ರೈಲ್ವೆನಲ್ಲಿ ಈ ಬಾರಿ ಒಟ್ಟು 1679 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, SSLC ಜೊತೆಗೆ ITI ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ
ಈ ನೇಮಕಾತಿಯ ಕೊನೆ ದಿನಾಂಕ ಸೇರಿ ವಿವಿಧ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವರೆಗೂ ಓದಿ. ಉದ್ಯೋಗ ಆಕಾಂಕ್ಷಿಗಳಿಗೆ ತಪ್ಪದೇ ಶೇರ್ ಮಾಡಿ.
Shortview of RRC NCR Apprentice Vacancy 2024
Organization Name – North Central Railway (NCR)
Post Name – Apprentices
Total Vacancy – 1679
Application Process: Online
Job Location – All Over India
Important Dates:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಸೆಪ್ಟೆಂಬರ್ 16, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 15, 2024
ಶೈಕ್ಷಣಿಕ ಅರ್ಹತೆ:
ಉತ್ತರ ಮಧ್ಯ ರೈಲ್ವೆ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ SSLC(10th) / ITI ವಿದ್ಯಾರ್ಹತೆ ಪಡೆದಿರಬೇಕು.
ವಯಸ್ಸಿನ ಮಿತಿ:
ಉತ್ತರ ಮಧ್ಯ ರೈಲ್ವೆ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ವಯಸ್ಸಿನ ಮಿತಿಯು 15 ರಿಂದ 24 ವರ್ಷ(15/10/2024 ಕ್ಕೆ 24 ವರ್ಷಗಳನ್ನು ಪೂರ್ಣಗೊಳಿಸಿರಬಾರದು) ನಿಗದಿಪಡಿಸಲಾಗಿದೆ. ಹಾಗೂ ವರ್ಗಗಳ ಆಧಾರಿತವಾಗಿ ವಯೋಮಿತಿ ಸಡಿಲಿಕೆಯು ಸರ್ಕಾರದ ನಿಯಮಗಳಿಗೆ ಅನುಗುಣವಾಗಿದೆ.
ಆಯ್ಕೆ ಪ್ರಕ್ರಿಯೆ:
ಉತ್ತರ ಮಧ್ಯ ರೈಲ್ವೆ ಇಲಾಖೆಯ ನೇಮಕಾತಿ ನಿಯಮಗಳ ಪ್ರಕಾರ ಈ ಕೆಳಗಿನಂತೆ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.
- ಶಾರ್ಟ್ಲಿಸ್ಟ್ (10 ನೇ ತರಗತಿ ಮತ್ತು ITI ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ)
- ದಾಖಲಾತಿ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಸಂಬಳ:
ಉತ್ತರ ಮಧ್ಯ ರೈಲ್ವೆ ನೇಮಕಾತಿ ನಿಯಮಗಳ ಪ್ರಕಾರ ಹುದ್ದೆಗಳ ಆಧಾರಿತವಾಗಿ ಅಭ್ಯಥಿಗಳಿಗೆ ಸಂಬಳ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಎಸ್ಸಿ/ಎಸ್ಟಿ/ PWBD/ಮಹಿಳಾ ಅಭ್ಯರ್ಥಿಗಳಿಗೆ – ಯಾವುದೇ ಅರ್ಜಿ ಶುಲ್ಕ ಕಟ್ಟುವಂತಿಲ್ಲ
ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ – ರೂ. 100/-
How to Apply for RRC NCR Apprentice Recruitment 2024
- ಮೊದಲಿಗೆ ಅಧಿಕೃತ ವೆಬ್ಸೈಟ್ https://rrcpryj.orgಗೆ ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ
- Online Application For Engagement of Act Apprenticeship Training in North Central Railway (Click Here For Online Form)ಲಿಂಕ್ ಮಾಡಿ.
- ನಂತರ ಹೊಸ ವೆಬ್ ಪೇಜ್ ತೆರೆದುಕೊಳ್ಳುತ್ತೇದೆ, ಅಲ್ಲಿ ಲಾಗಿನ್ ವಿವರಗಳನ್ನು ಭರ್ತಿ ಮಾಡಿ ಹೊಸ ಖಾತೆಯನ್ನು ರಚಿಸಿ
- ನಂತರ ನೊಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಮಾಡಿ.
- ಅಲ್ಲಿ ಕೇಳಲಾಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ
- ಕೊನೆಯದಾಗಿ ಅರ್ಜಿಯನ್ನು ಸಲ್ಲಿಸಿ ಮತ್ತು ಅರ್ಜಿ ಸಂಖ್ಯೆಯನ್ನು ಉಳಿಸಿ.
Important Direct Links:
Official Notification PDF | Download |
Online Application Form Link | Registration || Login |
Official Website | rrcpryj.org |
More Updates | KarnatakaHelp.in |