WhatsApp Channel Join Now
Telegram Group Join Now

ಗಂಗಾ ಕಲ್ಯಾಣ: Ganga Kalyana Yojana Online Application 2024-25 Apply Online

Ganga Kalyana Scheme Online Apply Application 2024-25: ಕರ್ನಾಟಕ ಹೆಲ್ಪ್ ಗೆ ಸ್ವಾಗತ, ಇಂದು ನಾವು “ಗಂಗಾ ಕಲ್ಯಾಣ ನೀರಾವರಿ ಯೋಜನೆ” (Ganga Kalyana Yojane 2024-25) ಯ ಬಗ್ಗೆ ಮಾಹಿತಿ ನೀಡಲಿದ್ದೇವೆ, ಹಲವಾರು ಜನರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯೇ ಇಲ್ಲ. ಆದ್ದರಿಂದ ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಯಿಸಿದ್ದೇವೆ. ಸಹಾಯವಾಗಿದ್ದರೆ ನಿಮ್ಮ ಬಂಧು ಮಿತ್ರರಿಗೂ ತಪ್ಪದೇ ಶೇರ್ ಮಾಡಿ.

ಗಂಗಾ ಕಲ್ಯಾಣ ಯೋಜನೆ 2024 (Ganga Kalyana Scheme Online Application 2024 Apply Online): ಈ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕೃಷಿ ಜಮೀನಿನಲ್ಲಿ ಕೊಳವೆಬಾವಿ ಕೊರೆದು, ಪಂಪಸೆಟ್ ಸರಬರಾಜು ಮಾಡಿ, ಅಳವಡಿಸಿ ವಿದ್ಯುದ್ದೀಕರಣಗೊಳಿಸಿ, ನೀರಾವರಿ ಸೌಲಭ್ಯ ಕಲ್ಪಿಸುವ ಗುರಿಯನ್ನ ಹೊಂದಿದೆ.

Ganga Kalyana Scheme Karnataka Apply Online
Ganga Kalyana Scheme Karnataka Apply Online

Karnataka Ganga Kalyana Scheme 2024 Info

ಗಂಗಾ ಕಲ್ಯಾಣ ಯೋಜನೆಯು 1983 ರಿಂದ ಪ್ರಾರಂಭವಾಯಿತು.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮೂರು ಬಗೆಗಳು ಅವುಗಳು ಕೆಳಗಿನಂತಿವೆ

  1. ಸಮಗ್ರ ಗಂಗಾ ಕಲ್ಯಾಣ ಯೋಜನೆ (ವೈಯಕ್ತಿಕ ಕೊಳವೆ ಬಾವಿ)
  2. ಸಮಗ್ರ ಗಂಗಾ ಕಲ್ಯಾಣ (ತೆರೆದಬಾವಿ) ಯೋಜನೆ
  3. ಗಂಗಾ ಕಲ್ಯಾಣ- ಏತ ನೀರಾವರಿ ಯೋಜನೆ

ಸಮಗ್ರ ಗಂಗಾ ಕಲ್ಯಾಣ ಯೋಜನೆ (ವೈಯಕ್ತಿಕ ಕೊಳವೆ ಬಾವಿ):

ಈ ಯೋಜನೆಯಡಿ 1½ ಎಕರೆಯಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ಪಂಪ್ ಸೆಟ್ ಅಳವಡಿಸಿ ವಿದ್ಯುದ್ಧೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ.

ಈ ಯೋಜನೆಗೆ 3 ರಿಂದ 4 ಲಕ್ಷದವರೆಗೂ ಸಹಾಯಧನವನ್ನ ಸರ್ಕಾರ ನೀಡುತ್ತದೆ. ಹಾಗೂ ಬಡ್ಡಿ ದರದಲ್ಲಿ ಸಾಲವನ್ನ ಕೂಡಾ ಒದಗಿಸುತ್ತದೆ.

ಸಮಗ್ರ ಗಂಗಾ ಕಲ್ಯಾಣ (ತೆರೆದಬಾವಿ) ಯೋಜನೆ:

ಎಲ್ಲಿ ಕೊಳವೆಬಾವಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುವುದಿಲ್ಲವೋ ಅಂತಹ ಫಲಾಪೇಕ್ಷಿಗಳ ಜಮೀನುಗಳಲ್ಲಿ ತೆರೆದಬಾವಿ ತೋಡಿ, ಡೀಸಲ್/ಮೋನೋ ಬ್ಲಾಕ್ ಪಂಪ್‌ಸೆಟ್ ಸರಬರಾಜು ಮಾಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗುವುದು.

ಒಟ್ಟು ಘಟಕ ವೆಚ್ಚ ಸು. ರೂ.1.50 ಲಕ್ಷವಿದ್ದು, ಇದರಲ್ಲಿ ರೂ.1.00 ಲಕ್ಷ ತೆರೆದಬಾವಿ ತೊಡಲು ಮತ್ತು ರೂ.50,000/- ಪಂಪ್‌ಸೆಟ್ ಸರಬರಾಜು ಮಾಡಿ, ವಿದ್ಯುತ್ ಸಂಪರ್ಕಗೊಳಿಸಲು ಬಳಸಲಾಗುತ್ತದೆ.

ಗಂಗಾ ಕಲ್ಯಾಣ- ಏತ ನೀರಾವರಿ ಯೋಜನೆ:

ಗಂಗಾ ಕಲ್ಯಾಣ ಏತ ನೀರಾವರಿ ಯೋಜನೆಯಡಿ ನೈಸರ್ಗಿಕವಾದ ನದಿ, ತೊರೆ, ನಾಲೆಗಳ ಅಕ್ಕಪಕ್ಕದಲ್ಲಿರುವ ಸಣ್ಣ ಮತ್ತು ಅತಿ ಸಣ್ಣ ರೈತರುಗಳು ಹೊಂದಿರುವ ಜಮೀನುಗಳಿಗೆ ಪೈಪ್ ಲೈನ್ ಅಳವಡಿಸಿ, ಪಂಪ್‌ಸೆಟ್ ಸರಬರಾಜು ಮಾಡಿ ಅಳವಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿ ಉಚಿತವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲಾಗುವುದು

ಈ ಯೋಜನೆಯಡಿ ಕನಿಷ್ಟ 3 ಫಲಾನುಭವಿಗಳು ಹೊಂದಿರುವ 8 ಎಕರೆಯಿಂದ ಗರಿಷ್ಟ 15 ಎಕರೆ ಜಮೀನಿನ ಘಟಕಕ್ಕೆ ಸು. ರೂ.9.00 ಲಕ್ಷ ವೆಚ್ಚದಲ್ಲಿ ಸೌಲಭ್ಯ ಕಲ್ಪಿಸಲಾಗುವುದು.

Ganga Kalyana Yojane 2024 Apply Online

ಈ ಯೋಜನೆಯು ಯಾವ ಯಾವ ನಿಗಮದಲ್ಲಿ ಲಭ್ಯವಿದೆ ಗೊತ್ತಾ ಸ್ನೇಹಿತರೇ ?

ಗೊತ್ತಿಲ್ವಾ ಆಗಿದ್ರೆ ಈ ಕೆಳಗೆ ನೀಡಲಾದ ಎಲ್ಲಾ ನಿಗಮದಲ್ಲಿ ಈ ಯೋಜನೆಯು ಲಭ್ಯವಿದೆ.

  • ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ(ADCL)- SC
  • ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ(KMVSTDCL) – ST
  • ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ(DBCDC) – OBC
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(KMDC)
  • ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ(KVCDCL)
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ(KBDC)
  • ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ(ADIJAMBAVA)
  • ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ(AMBIGARADEVELOPMENT)
  • ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ(UPPARDEVELOPMENT) – UDC
  • ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ(KVCDC)
  • ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ(KVLDCL)
  • ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ(KMCDC)
  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ(BANJARATHANDA)
  • ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ(KAAD)
  • ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ(KMMD)

Ganga Kalyan Scheme 2024-25 Eligibility

ಸೌಲಭ್ಯ ಪಡೆಯಲು ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು;

  • ಅರ್ಜಿದಾರರು ನಿಗದಿತ ಜಾತಿಗೆ ಸೇರಿದವರಾಗಿರಬೇಕು.
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
  • ಸಣ್ಣ ಮತ್ತು ಅತೀ ಸಣ್ಣ ರೈತರ ಪ್ರಮಾಣ ಪತ್ರ ಇರಬೇಕು.
  • ಅರ್ಜಿದಾರರ ಕುಟುಂಬದ ಸದಸ್ಯರಲ್ಲಿ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿರಬಾರದು.
  • ಅರ್ಜಿದಾರರಾಗಲೀ, ಕುಟುಂಬದ ಸದಸ್ಯರಾಗಲೀ ನಿಗಮದ ಯಾವುದೇ ಯೋಜನೆಯಡಿ ಈ ಹಿಂದೆ ಸೌಲಭ್ಯವನ್ನು ಪಡೆದಿರಬಾರದು. (ಭೂ ಒಡೆತನ ಯೋಜನೆಯಡಿ ತರಿ ಜಮೀನು ಪಡೆದ ಫಲಾನುಭವಿಗಳಿಗೆ ಅನ್ವಯಿಸುವುದಿಲ್ಲ.)
  • ಏತನೀರಾವರಿ ಘಟಕಕ್ಕೆ ಒಳಪಡುವ ಎಲ್ಲಾ ಅರ್ಜಿದಾರರ ಜಮೀನು ಒತ್ತಟ್ಟಿಗಿರಬೇಕು.
  • ಜಮೀನಿಗೆ ವಿದ್ಯುತ್ ಲೈನ್ ಹತ್ತಿರದಲ್ಲಿದ್ದವರಿಗೆ ಆದ್ಯತೆ ಕೊಡಲಾಗುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

Karnataka Ganga Kalyana Scheme Online Application Required Documents

ಗಮನಿಸಿ: ಅರ್ಹ ಫಲಾಪೇಕ್ಷಿಗಳು ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಹತ್ತಿರದ ಗ್ರಾಮ-ಒನ್, ಕರ್ನಾಟಕ-ಒನ್ ಹಾಗೂ ಬೆಂಗಳೂರು-ಒನ್ ನಾಗರಿಕ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆಳಗಿನ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.

  • ಭಾವಚಿತ್ರ (2)
  • ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ
  • ಪಡಿತರ ಚೀಟಿ
  • ಗುರುತಿನ ಚೀಟಿ (Aadhar Card/Voter Card/Driving Lice/ Pan Card/Bank Pass Book)
  • ಇತ್ತೀಚಿನ ಪಹಣಿ (ಆರ್.ಟಿ.ಸಿ.) ಮತ್ತು ಭೂ ನಕ್ಷೆ
  • ಕೃಷಿ ಪಾಸ್ ಪುಸ್ತಕ ಅಥವಾ ಸಣ್ಣ/ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ.
  • ನೀರನ್ನು ಉಪಯೋಗಿಸಲು ಪರವಾನಗಿಯನ್ನು ಸಂಬಂಧಪಟ್ಟ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರವರಿಂದ ಪಡೆದು ಸಲ್ಲಿಸುವುದು.
  • ಸ್ಥಳೀಯ ವಿದ್ಯುತ್ ನಿಗಮ ನಿಯಮಿತ ರವರಿಂದ ಅನುಮತಿ ಅಥವಾ ನೊಂದಣಿ ಮಾಡಿ ರಸೀದಿ ಲಗತ್ತಿಸಬೇಕು.

Last Date Of Ganga Kalyana Yojane 2024

ನಿಗಮಗಳುಕೊನೆಯ ದಿನಾಂಕ
(Last Date)
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ(KVLDCL) September 15, 2024
ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ
(AMBIGARADEVELOPMENT)
September 15, 2024
ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತSeptember 15, 2024
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ (OBC)September 15, 2024
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ(KVCDCL)September 15, 2024
ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮSeptember 15, 2024
ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮSeptember 15, 2024
ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮSeptember 15, 2024
ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ ನಿಯಮಿತSeptember 15, 2024
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮAugust 31, 2024
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ
ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ

How to Apply Ganga Kalyana Yojane 2024-25

ಇಲ್ಲಿ ಗಮನಿಸಿ ಬಂಧುಗಳೇ: ಬೆಂಗಳೂರು-ಒನ್/ಕರ್ನಾಟಕ-ಒನ್/ಆಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸೇವಾಸಿಂಧು ಪೋರ್ಟಲ್‌ನಡಿ ಅರ್ಜಿಯನ್ನು ಸಲ್ಲಿಸಲು ಮಾತ್ರ ಅವಕಾಶವಿದೆ. ಸ್ವಯಂ ನೋಂದಣಿಗೆ ಅವಕಾಶವಿಲ್ಲ.

  • ಮೊದಲು ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿದ ಲಿಂಕ್ ಕ್ಲಿಕ್ ಮಾಡಿ
  • ಮೊದಲು ನೀವು ಲಾಗಿನ್ ಆಗಬೇಕಾಗುತ್ತದೆ
  • ಅಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಿ, ನಂತರ ಆಧಾರ್ ಕಾರ್ಡ್ ನಂಬರ್ ಹಾಕಿ ಹಾಗೂ OTP ಭರ್ತಿ ಮಾಡಿ, ಇವಾಗ ನಿಮ್ಮ ಖಾತೆ ಕ್ರಿಯೇಟ್ ಆಗಿದೆ.
  • ನಂತರ ನೀವು “ಗಂಗಾ ಕಲ್ಯಾಣ ಯೋಜನೆ ಅರ್ಜಿ 2023” ಯನ್ನ ಕ್ಲಿಕ್ ಮಾಡಿ.
  • ನಂತರ ಅಲ್ಲಿ ಅರ್ಜಿದಾರರ ವಿವರಗಳನ್ನ ಭರ್ತಿ ಮಾಡಿ ಹಾಗೂ ಅಗತ್ಯವಿರುವ ದಾಖಲಾತಿಗಳನ್ನ ಅಪ್ಲೋಡ್ ಮಾಡಿ.
  • ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
  • ಅರ್ಜಿ ಸ್ವೀಕೃತಿಯನ್ನ ಪ್ರಿಂಟ್ ತೆಗೆದುಕೊಳ್ಳಿ.

Important Direct Links:

Links NameIMP Links
Ganga Kalyana Scheme
Online Application 2024 Official Website Link
ಇಲ್ಲಿ ಕ್ಲಿಕ್ ಮಾಡಿ
More UpdatesKarnataka Help.in

ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ | Karnataka Free Sewing Machine Scheme Apply Online

‘ಐರಾವತ ಯೋಜನೆ’ 5.00 ಲಕ್ಷ ಸಹಾಯಧನ | Airavata Scheme Karnataka Online Application 2024-25

ಸ್ವಾವಲಂಬಿ ಸಾರಥಿ ಅರ್ಜಿ ಸಲ್ಲಿಕೆ ಪ್ರಾರಂಭ | Swavalambi Sarathi 2024 Karnataka Apply Online

ಹೊಸ ರೇಷನ್ ಕಾರ್ಡ್ ಅರ್ಜಿ: New Ration Card Karnataka Online Application Form 2024-25 @ahara.kar.nic.in

FAQs – Ganga Kalyana Yojana Online Application 2024

How to Apply For Ganga Kalyana Scheme Karnataka?

Visit Official Website to Apply Online For Free borewell Ganga Kalyana Yojane 2024.

What is the Last Date For Ganga Kalyana Yojane 2023-24?

September 15, 2024