ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಖಾಲಿ ಇರುವ ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಜಿ ಸಲ್ಲಿಕೆ ಆ.28 ರಿಂದ ಪ್ರಾರಂಭವಾಗಲಿದೆ.
ವಿವಿಧ (ಆರ್ಕಿಟೆಕ್ಚರ್, ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ) ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 976 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅದಿಸೂಚನೆಯನ್ನು ಬಿಡುಗಡೆ ಮಾಡಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು AAI ಅಧಿಕೃತ ವೆಬ್ ಸೈಟ್ https://www.aai.aero/en/careers/recruitment/Officalಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
• ಜೂನಿಯರ್ ಎಕ್ಸಿಕ್ಯುಟಿವ್ (ಆರ್ಕಿಟೆಕ್ಚರ್) ಹುದ್ದೆಗೆ – ಆರ್ಕಿಟೆಕ್ಚರ್ ನಲ್ಲಿ ಪದವಿ ಮತ್ತು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ನಲ್ಲಿ ನೋಂದಣಿ.
• ಜೂನಿಯರ್ ಎಕ್ಸಿಕ್ಯುಟಿವ್ (ಸಿವಿಲ್) ಹುದ್ದೆಗೆ – ಸಿವಿಲ್ನಲ್ಲಿ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ.
• ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಿಕಲ್) ಹುದ್ದೆಗೆ – ಎಲೆಕ್ಟ್ರಿಕಲ್ನಲ್ಲಿ ಎಂಜಿನಿಯರಿಂಗ್ / ತಂತ್ರಜ್ಞಾನದಲ್ಲಿ ಪದವಿ.
• ಜೂನಿಯರ್ ಎಕ್ಸಿಕ್ಯೂಟಿವ್ (ಎಲೆಕ್ಟ್ರಾನಿಕ್ಸ್) ಹುದ್ದೆಗೆ – ಎಲೆಕ್ಟ್ರಾನಿಕ್ಸ್/ದೂರಸಂಪರ್ಕ/ಎಲೆಕ್ಟ್ರಿಕಲ್ನಲ್ಲಿ ಎಂಜಿನಿಯರಿಂಗ್/ತಂತ್ರಜ್ಞಾನದಲ್ಲಿ ಪದವಿ ಮತ್ತು ಎಲೆಕ್ಟ್ರಾನಿಕ್ಸ್ನಲ್ಲಿ ವಿಶೇಷತೆ.
• ಜೂನಿಯರ್ ಎಕ್ಸಿಕ್ಯುಟಿವ್ (ಮಾಹಿತಿ ತಂತ್ರಜ್ಞಾನ) ಹುದ್ದೆಗೆ – ಕಂಪ್ಯೂಟರ್ ಸೈನ್ಸ್ / ಕಂಪ್ಯೂಟರ್ ಎಂಜಿನಿಯರಿಂಗ್ / ಐಟಿ / ಎಲೆಕ್ಟ್ರಾನಿಕ್ಸ್ನಲ್ಲಿ ಎಂಜಿನಿಯರಿಂಗ್ / ತಾಂತ್ರಿಕ ಪದವಿ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ (ಎಂಸಿಎ) ನಲ್ಲಿ ಸ್ನಾತಕೋತ್ತರ ಪದವಿ.
ವಯೋಮಿತಿ:
27-09-2025 ರಂತೆ;
ಗರಿಷ್ಠ ಮಿತಿ – 27 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ಪ್ರಕ್ರಿಯೆ:
ಗೇಟ್ 2023 ಅಥವಾ ಗೇಟ್ 2024 ಅಥವಾ ಗೇಟ್ 2025ರ ಮೆರಿಟ್ನ ಆಧಾರದ ಮೇಲೆ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್
ಅರ್ಜಿ ಪರಿಶೀಲನೆ
ದಾಖಲಾತಿ ಪರಿಶೀಲನೆ
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 40,000-1,40,000ರೂ. ವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
AAI ನಲ್ಲಿ ಒಂದು ವರ್ಷದ ಅಪ್ರೆಂಟಿಸ್ ತರಬೇತಿಯನ್ನು ಪಡೆದ ಪ.ಜಾತಿ, ಪ.ಪಂಗಡ ಪಿಡಬ್ಲ್ಯೂಡಿ, ಮಹಿಳೆಯರು ಹಾಗೂ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ – ಯಾವುದೇ ಶುಲ್ಕವಿರುವುದಿಲ್ಲ
• ಇತರ ಎಲ್ಲ ವರ್ಗದ ಅಭ್ಯರ್ಥಿಗಳಿಗೆ – 300ರೂ.
How to Apply for AAI Junior Executive Recruitment 2025
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಅರ್ಜಿ ಸಲ್ಲಿಸಬಹುದು;
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ https://www.aai.aero/en/careers/recruitment/Offical ಗೆ ಭೇಟಿ ನೀಡಿ.
ಗೇಟ್ 2023/ ಗೇಟ್ 2024/ ಗೇಟ್ 2025 ಮೂಲಕ ಜೂನಿಯರ್ ಎಕ್ಸಿಕ್ಯೂಟಿವ್ಗಳನೇರ ನೇಮಕಾತಿ ಜಾಹೀರಾತು ಸಂಖ್ಯೆ 09/2025/CHQ ಅಡಿಯಲ್ಲಿ – ಆನ್ಲೈನ್ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಸ್ವ ವಿವರ ಹಾಗೂ ಸಹಿ, ಭಾವಚಿತ್ರ, ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿ ಮಾಡಿ.
ಕೊನೆಯದಾಗಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ, ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.