Adarsha Vidyalaya 4th Round List 2025: 4ನೇ ಸುತ್ತಿನ ಪಟ್ಟಿ ಬಿಡುಗಡೆ, ಕೌನ್ಸೆಲಿಂಗ್​ ಮೂಲಕ ಆಯ್ಕೆ

Published on:

ಪ್ರಸಕ್ತ ಸಾಲಿಗೆ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಸಂಬಂಧಿಸಿದಂತೆ 4ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯು ಕೌನ್ಸೆಲಿಂಗ್​ ಮೂಲಕ ನಡೆಯಲಿದ್ದು, ಸದರಿ ಸುತ್ತಿಗೆ 1:30ರ ಅನುಪಾತದಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳ ಮೆರಿಟ್​ ಪಟ್ಟಿ ಹಾಗೂ ಕೌನ್ಸೆಲಿಂಗ್​ಗಾಗಿ ಲಭ್ಯವಿರುವ ಸೀಟುಗಳ ಪಟ್ಟಿಯನ್ನು ಕರ್ನಾಟಕ ಸಮಗ್ರ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ.

ಕೌನ್ಸೆಲಿಂಗ್ ಪ್ರಕ್ರಿಯೆಯು ಸಾಮಾನ್ಯ ಮೆರಿಟ್ ವಿದ್ಯಾರ್ಥಿಗಳಿಗೆ ​ಆಗಸ್ಟ್​ 11 ರಿಂದ 12 ವರೆಗೆ ಮತ್ತು ಮೀಸಲಾತಿ ವರ್ಗವಾರು ಮೆರಿಟ್​ ಆಧಾರಿತ ವಿದ್ಯಾರ್ಥಿಗಳಿಗೆ ಆಗಸ್ಟ್​ 13 ರಿಂದ 14ರವೆರೆಗೆ ನಡೆಯಲಿದೆ ಎಂದು ಇಲಾಖೆ ತನ್ನ ಅಧಿಕೃತ ಜಾಲತಾಣದಲ್ಲಿ ಬಿತ್ತರಿಸಿದೆ.

ಬಂಧುಗಳೇ 4ನೇ ಸುತ್ತಿನಲ್ಲಿ ಲಭ್ಯವಿರುವ ಸೀಟುಗಳು ಹಾಗೂ ಕೌನ್ಸೆಲಿಂಗ್​ಗಾಗಿ 4ನೇ ಸುತ್ತಿನ ಪಟ್ಟಿಯ ಪಿಡಿಎಫ್​ ಅನ್ನು ಈ ಸುದ್ದಿಯ ಕೊನೆಯಲ್ಲಿ “Important Direct Links” ನ ಶೀರ್ಷಿಕೆಯಡಿ ನೀಡಲಾಗಿದೆ.

How to Download Adarsha Vidyalaya 4th Round List 2025

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಪಟ್ಟಿಗಳ ಪಿಡಿಎಫ್​ ಡೌನ್ಲೋಡ್​ ಮಾಡಿಕೊಳ್ಳಬಹುದಾಗಿದೆ;

1.ಮೊದಲು ಆದರ್ಶ ವಿದ್ಯಾಲಯದ ಅಂತರ್ಜಾಲ http://164.100.133.7:82/home.aspxಕ್ಕೆ ಭೇಟಿ ನೀಡಿ

2.ನಂತರ 2025-26- 6 ನೇ ತರಗತಿಗೆ ಪ್ರವೇಶ ಮೇಲೆ ಕ್ಲಿಕ್​ ಮಾಡಿ.

Adarsha Vidyalaya Round 4 Students List Download Guide
Adarsha Vidyalaya Round 4 Students List Download Guide

3. ಮುಂದೆ “ರೌಂಡ್ 4 – ಲಭ್ಯವಿರುವ ಸೀಟುಗಳು” ಮತ್ತು “ಕೌನ್ಸೆಲಿಂಗ್ಗಾಗಿ 4 ನೇ ಸುತ್ತಿನ ಪಟ್ಟಿ” ಮೇಲೆ ಕ್ಲಿಕ್​ ಮಾಡುವ ಮೂಲಕ ಪಿಡಿಎಫ್​ ಡೌನ್ಲೋಡ್​ ಮಾಡಿಕೊಳ್ಳಬಹುದು.

Important Direct Links:

Adarsha Vidyalya Round 4 List for Counselling 2025 PDFDownload
Adarsha Vidyalya Round 4 Available Seat List 2025 PDFDownload
Official WebsiteAdarsha Vidyalya
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “Adarsha Vidyalaya 4th Round List 2025: 4ನೇ ಸುತ್ತಿನ ಪಟ್ಟಿ ಬಿಡುಗಡೆ, ಕೌನ್ಸೆಲಿಂಗ್​ ಮೂಲಕ ಆಯ್ಕೆ”

Leave a Comment