ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಆನ್‌ಲೈನ್(Adarsha Vidyalaya Online Form 2025-26) ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ, ಬೇಕಾದ ದಾಖಲಾತಿಗಳು, ಅರ್ಹತೆಗಳು ಮುಂತಾದ ಮಾಹಿತಿಯನ್ನಈ ಲೇಖನದಲ್ಲಿ ನೀಡಲಾಗಿದೆ. ಈ ಮಾಹಿತಿ ನಿಮಗೆ ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೆ ತಪ್ಪದೆ ಶೇರ್ ಮಾಡಿ.
Adarsha Vidyalaya Admission 2025-26
ಆದರ್ಶ ವಿದ್ಯಾಲಯ ಅಪ್ಲಿಕೇಶನ್: 2025-26ನೇ ಸಾಲಿನ ಆದರ್ಶ ವಿದ್ಯಾಲಯದ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಸಂಪೂರ್ಣ ಮಾಹಿತಿಯು ಈ ಕೆಳಗಿನಂತಿದೆ.
Important Dates Of Adarsha Vidyalaya Adarsha Vidyalaya Online Form 2025
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ(Start Date) | 14 ಫೆಬ್ರವರಿ 2025 |
ಅರ್ಜಿ ಸಲ್ಲಿಕೆ ಕೊನೆ ದಿನಾಂಕ(Last Date) | ಮಾರ್ಚ್ 05, 2025 (Extended) |
ಪ್ರವೇಶ ಪರೀಕ್ಷೆ ದಿನಾಂಕ(Exam Date) | ಮಾರ್ಚ್ 23, 2025 |
ಅಭ್ಯರ್ಥಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು(Eligibility):
- 2024-25ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಐದನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲ್ಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಆಯಾ ತಾಲ್ಲೂಕಿನ ಖಾಯಂ ನಿವಾಸಿಗಳ ಮಕ್ಕಳು ಬೇರೆ ತಾಲ್ಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಛಿಸಿದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು(Documents Required):
- SATS ID (Student Achievement Tracking System)
- ಇತ್ತೀಚಿನ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್/ರೇಷನ್ ಕಾರ್ಡ್/ಸ್ಥಳೀಯ ಪ್ರಮಾಣ ಪತ್ರ
- ವಿಶೇಷ ಪ್ರವರ್ಗಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರ (ವಿಶೇಷ ಅಗತ್ಯವಿರುವ ಅಭ್ಯರ್ಥಿಗಳಿಗೆ ಮಾತ್ರ)
- ಅಧ್ಯಯನ ಪ್ರಮಾಣ ಪತ್ರ (ಹೊರ ರಾಜ್ಯ ಅಭ್ಯರ್ಥಿಗಳಿಗೆ ಮಾತ್ರ)
ಪಠ್ಯಕ್ರಮ-Adarsha Vidyalaya Exam Syllabus 2025-26
ಆಯ್ಕೆ ಪರೀಕ್ಷೆಗೆ 5ನೇ ತರಗತಿಯ ಪಠ್ಯ ಪುಸ್ತಕ/ ಕಲಿಕಾ ಚೇತರಿಕೆ ಕಲಿಕಾಂಶಗಳನ್ನು ಆಧರಿಸಿ ಕೆಳಗಿನಂತೆ ಪರಿಗಣಿಸಲಾಗುವುದು.
ಕನ್ನಡ | 16% |
ಇಂಗ್ಲೀಷ್ | 16% |
ಗಣಿತ | 16% |
ಪರಿಸರ ಅಧ್ಯಯನ | 16% |
ಸಮಾಜ ವಿಜ್ಞಾನ | 16% |
ಸಾಮಾನ್ಯ ಜ್ಞಾನ (GK) | 10% |
ಸಾಮಾನ್ಯ ಬೌದ್ಧಿಕ ಸಾಮರ್ಥ್ಯ | 10% |
**ಪ್ರಶ್ನೆ ಪತ್ರಿಕೆಯು ವಸ್ತುನಿಷ್ಟ (Objective Type) ಪ್ರಶ್ನೆಗಳನ್ನು ಹೊಂದಿದ್ದು, ಆಂಗ್ಲ(ಇಂಗ್ಲೀಷ್) ಮತ್ತು ಕನ್ನಡ ಮಾಧ್ಯಮಗಳಲ್ಲಿರುತ್ತವೆ.
**ಪರೀಕ್ಷೆಯಲ್ಲಿ ಒಂದು ಪ್ರಶ್ನೆಗೆ ತಲಾ 01 ಅಂಕದಂತೆ ಇದ್ದು 100 ಪ್ರಶ್ನೆಗಳಿರುತ್ತವೆ.
How to Apply Online for Adarsha Vidyalaya School Admission 2024
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ಅರ್ಜಿ ಸಲ್ಲಿಕೆ ನೇರ ಲಿಂಕ್ ನೀಡಿದ್ದೇವೆ

- ನಂತರ ಅಲ್ಲಿ ಕೇಳಲಾದ ಅಭ್ಯರ್ಥಿ ಎಸ್‌ಎಟಿಎಸ್ ವಿವರಗಳನ್ನು ಖಚಿತಪಡಿಸಿ.


- ಹಾಗೂ ಅರ್ಜಿದಾರರ ವಿವರ ಸರಿಯಾಗಿ ಭರ್ತಿ ಮಾಡಿ.
- ಕೊನೆಗೆ ಅಲ್ಲಿ ಕೇಳಲಾದ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
- ನಂತರ Submit ಮಾಡಿ ಹಾಗೂ ಅರ್ಜಿ ಸಲ್ಲಿಕೆ ಪ್ರಿಂಟ್ ತೆಗೆದುಕೊಳ್ಳಿ.
Important Links (ಪ್ರಮುಖ ಲಿಂಕ್‌ಗಳು):
Adarsha Vidyalaya Online Form Apply Link | Apply Now |
Print Acknowledgement | Print Now |
Guidelines PDF | Download |
More Updates | KarnatakaHelp.in |
FAQs – Adarsha Vidyalaya Application
How to Apply for Adarsha Vidyalaya Admission online Application form 2025-26?
Visit Official Website to Apply Online
What is the Last date of Adarsha Vidyalaya Application Form 2025?
March 05, 2025
When was Adarsha Vidyalaya Admission Entrance Exam 2025?
March 23, 2025
ok
ನನ್ನ ಮಗನಾದ ವೈಬವ ಪತ್ತಾರ್ ಇವನ Dear VAIBHAVA PATTAR, your Application No. 545784 for 6th Std Adarsha Vidyalala Exam submitted is withheld for Photo not uploaded. Contact Adarsha Vidyalaya opted for correction.From -Samagra Shikshana Karnataka ಸರ್ ದಯವಿಟ್ಟು ಫೋಟೋ ಅಪ್ ಲೋಡ್ ಮಾಡಲು ಅವಕಾಶ ಮಾಡಿ ಕೊಡಿ ಅಥವಾ ಬೇರೆ ಪರಿಹಾರ ಸೂಚಿಸಿ ಸರ್ ಅರ್ಜಿ ಸಲ್ಲಿಸಲು ದಿನಾಂಕ:05-03-2025 ಆಗಿರುತ್ತದೆ ಸರ್ ದಯವಿಟ್ಟು ಪರಿಹಾರ ತಿಳಿಸಿ.
ನಮಸ್ತೇ, ನೀವು ಯಾವ ಆದರ್ಶ ವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೀರಿ, ಅದೇ ಆದರ್ಶ ವಿದ್ಯಾಲಯಕ್ಕೆ ಕೊನೆ ದಿನಾಂಕದೊಳಗೆ ಭೇಟಿ ನೀಡಿ ತಿದ್ದುಪಡಿ ಅಥವಾ ಫೋಟೋ ಅಪ್ಲೋಡ್ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. (ತಿದ್ದುಪಡಿಗೆ ಆನ್ ಲೈನ್ ಮೂಲಕ ಅವಕಾಶವಿಲ್ಲ)
ಧನ್ಯವಾದಗಳು,
ತುಂಬಾ ತುಂಬಾ ಧನ್ಯವಾದಗಳು ಸರ್.
How we will get hall ticket
ಸರ್ hall ticket ಯಾವಾಗ ಮತ್ತು ಎಲ್ಲಿ ಸಿಗುತ್ತದೆ?
Sir Please application extend date…